Advertisement

ಕೋವಿಡ್ ಮಹಾಮಾರಿಯಿಂದ ಮುಕ್ತಿಗಾಗಿ ಪ್ರಾರ್ಥಿಸಿ ಬೆಳಗಾವಿಯ ಮನೆ-ಮಠಗಳಲ್ಲಿ ಇಷ್ಟಲಿಂಗ ಪೂಜೆ

09:05 AM Apr 14, 2020 | Hari Prasad |

ಬೆಳಗಾವಿ: ವಿಶ್ವವನ್ನೇ ಕಂಗೆಡಿಸಿರುವ ಹಾಗೂ ದೇಶದೆಲ್ಲಡೆ ಹಾಹಾರಕ್ಕೆ ಕಾರಣವಾಗಿರುವ ಕೋವಿಡ್ 19 ವೈರಸ್ ಸಾಂಕ್ರಾಮಿಕ ಹೆಮ್ಮಾರಿಯಿಂದ ಸಕಲ ಜೀವ‌ ಸಂಕುಲವನ್ನು ಪಾರು ಮಾಡಲು ಹಾಗೂ ಮಾನವ ಕುಲದ ಒಳಿತಿಗಾಗಿ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠ, ರುದ್ರಾಕ್ಷಿ ಮಠ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲ ಮನೆ-ಮಠಗಳಲ್ಲಿ ಸೋಮವಾರ ಇಷ್ಟಲಿಂಗ ಪೂಜೆ ನೆರವೇರಿಸಲಾಯಿತು.

Advertisement

ಜಾಗತಿಕ ಲಿಂಗಾಯತ ಮಹಾಸಭೆಯ ಎಲ್ಲ ಲಿಂಗಾಯತ ಮತ್ತು ಬಸವ ಸಂಘಟನೆಗಳ ಸಹಕಾರದೊಂದಿಗೆ ಇಷ್ಟಲಿಂಗ ಪೂಜೆ ನೆರವೇರಿಸಲಾಯಿತು. ಶ್ರೀ ಗುರುಬಸವಲಿಂಗಾಯ ನಮಃ ಪಠಣದೊಂದಿಗೆ ವಿಭೂತಿಧಾರಣ ಮಾಡಿಕೊಂಡು ಇಷ್ಟಲಿಂಗ ಅನುಸಂಧಾನ ಮಾಡಲಾಯಿತು.

ನಾಗನೂರು‌ ರುದ್ರಾಕ್ಷಿ ಮಠದ ಶ್ರೀ ಡಾ.ಅಲ್ಲಮಪ್ರಭು ಸ್ವಾಮೀಜಿ ಅವರು ಸೋಮವಾರ ಇಷ್ಟಲಿಂಗ ಪೂಜೆ ನೆರವೇರಿಸಿದರು. ಕಾರಂಜಿ ಮಠದ ಶ್ರೀ ಗುರುಸಿದ್ಧ ಸ್ವಾಮೀಜಿ, ಶೇಗುಣಸಿಯ ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಶಿವಯೋಗಿ ದೇವರು ಹಾಗೂ ಶ್ರೀ ವಿವೇಕ ಸ್ವಾಮೀಜಿ ಸೇರಿದಂತೆ ಅನೇಕರು ಇಷ್ಟಲಿಂಗ ಪೂಜೆ ಮಾಡಿದರು.‌ ಎಲ್ಲರ ಮನೆಗಳಲ್ಲೂ ಸಂಜೆ 7 ಗಂಟೆ ಸುಮಾರಿಗೆ ಇಷ್ಟ ಲಿಂಗ ಪೂಜೆ ನೆರವೇರಿತು.

ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಈಶ್ವರ ಖಂಡ್ರೆ, ಶಾಮನೂರು ಶಿವಶಂಕರಪ್ಪ, ಮಾಜೀ ಸಚಿವ ಎಂ.ಬಿ. ಪಾಟೀಲ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರೂ ಸಹ ಈ ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಂಡು ಈ ಮಹಾಮಾರಿ ವಿಶ್ವದಿಂದ ಶೀಘ್ರವಾಗಿ ಮರೆಯಾಗುವಂತೆ ಪ್ರಾರ್ಥಿಸಲಾಯಿತು.








Advertisement

Udayavani is now on Telegram. Click here to join our channel and stay updated with the latest news.

Next