Advertisement

ಅಬ್ಬಕ್ಕನಲ್ಲಿದ್ದ ಪ್ರಜ್ಞೆ ನಮ್ಮಲ್ಲೂ ಬಡಿದೆಬ್ಬಿಸಬೇಕು

10:00 AM Feb 04, 2018 | Team Udayavani |

ಉಳ್ಳಾಲ: ಸರ್ವಧರ್ಮ ಸಮನ್ವಯ ದೊಂದಿಗೆ ಉಳ್ಳಾಲದಂತಹ ಊರಿನಲ್ಲಿ ಪೋರ್ಚು ಗೀಸರ ವಿರುದ್ಧ ಹೋರಾಡಿದ ವೀರರಾಣಿ ಅಬ್ಬಕ್ಕನಶೌರ್ಯವನ್ನು ಗುರುತಿಸುವ ಕಾರ್ಯ ಇನ್ನೂ ನಡೆ ದಿಲ್ಲ. ಅಬ್ಬಕ್ಕನಲ್ಲಿದ್ದಂತಹ ಪ್ರಜ್ಞೆಯನ್ನು ಪ್ರತಿಯೊಬ್ಬ ರಲ್ಲೂ ಬಡಿದೆಬ್ಬಿಸುವ ಕಾರ್ಯ ಆಗಬೇಕಾಗಿದೆ ಎಂದು ಸಾಹಿತಿ ವೈದೇಹಿ ಅಭಿಪ್ರಾಯಪಟ್ಟರು.

Advertisement

ದಕ್ಷಿಣ ಕನ್ನಡ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಶನಿವಾರ ಸೋಮೇಶ್ವರ ಗ್ರಾಮದ ಕೊಲ್ಯ ನಾಗಮಂಡಲ ಮೈದಾನದಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ 2018ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆದರ್ಶ, ಮಾದರಿಗಳಿಲ್ಲದ ಸಮಾಜದಲ್ಲಿ ನಾವು ಬದುಕುತ್ತಿರುವಾಗ ಅಬ್ಬಕ್ಕನಂತಹ ಮಾದರಿ ಹೋರಾಟಗಾರ್ತಿಯನ್ನು ನಾವು ನೆನಪು ಮಾಡು ತ್ತಿಲ್ಲ, ದಕ್ಷಿಣ ಕನ್ನಡ ಜಿಲ್ಲೆ, ಕರಾವಳಿಯನ್ನು ಬಿಟ್ಟು ಬೇರೆ ಕಡೆ ಅಬ್ಬಕ್ಕ ಹುಟ್ಟಿದ್ದರೆ ಆಕೆಯ ವಿಚಾರ ದೇಶಾದ್ಯಂತ ಪಸರಿಸುತ್ತಿತ್ತು. ಆದರೆ ನಾವು ಅಬ್ಬಕ ನನ್ನು ಮರೆತಿದ್ದೇವೆ. ಆಕೆಯಲ್ಲಿದ್ದ ಧೈರ್ಯ, ಶೌರ್ಯ ಇಂದಿಗೂ ನಮ್ಮ ಸ್ತ್ರೀಯರಲ್ಲಿ ಬಂದಿಲ್ಲ ಎಂದು ಖೇದ ವ್ಯಕ್ತಪಡಿಸಿದ ಅವರು, ರಾಣಿ ಅಬ್ಬಕ್ಕ ಕುರಿತು ಅಧ್ಯಯನ, ಆಕೆಯ ಸಾಹಸಗಾಥೆಯನ್ನು ಪ್ರಚುರ ಪಡಿಸುವ ಕಾರ್ಯ ನಡೆಯಬೇಕಾಗಿದೆ, ಆ ಮೂಲಕ ನಾವು ಮಾದರಿ ಜಿಲ್ಲೆಯನ್ನು ನಿರ್ಮಾಣ ಮಾಡಬೇಕಾಗಿದೆ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಚಿತ್ರನಟಿ ಭಾವನಾ ರಾಮಣ್ಣ ಮಾತನಾಡಿ, ಇಂದು ಮಹಿಳೆಯರು ಯಾವುದರಲ್ಲೂ ಹಿಂದೆ ಉಳಿದಿಲ್ಲ.  ಜಿಲ್ಲೆಯಲ್ಲೂ ಮಹಿಳೆಯರು ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿದ್ದು, ವೇದಿಕೆಗಳೂ ದೊರಕುತ್ತಿವೆ. ಅವನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸುವುದು ಮುಖ್ಯ ಎಂದರು.

ನಟಿ, ನಿರ್ದೇಶಕಿ, “ಉದಯವಾಣಿ’ ಅಂಕಣಗಾರ್ತಿ ರೂಪಾ ಅಯ್ಯರ್‌ ವಿವಿಧ ಗೋಷ್ಠಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಉಳ್ಳಾಲದಲ್ಲಿ ದರ್ಗಾ, ದೇವಸ್ಥಾನ, ಚರ್ಚ್‌ ಇದ್ದು, ಹಿಂದೆ ಇದ್ದ ಸರ್ವಧರ್ಮ ಸಮನ್ವಯವನ್ನು ಇಂದಿಗೂ ಮುನ್ನಡೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದರಲ್ಲದೆ ಮಹಿಳೆಯರ ಕಾರ್ಯಕ್ರಮವನ್ನು ಅದ್ದೂರಿಯಾಗಿ ಏರ್ಪಡಿಸಿರುವುದು ಶ್ಲಾಘನೀಯ ಎಂದರು.

Advertisement

ಸಚಿವ ಯು.ಟಿ. ಖಾದರ್‌ ಅಧ್ಯಕ್ಷತೆ ವಹಿಸಿದ್ದರು.ಸಂಸದ ನಳಿನ್‌ ಕುಮಾರ್‌ ಕಟೀಲು, ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌, ಜಿ.ಪಂ. ಸದಸ್ಯೆಯರಾದ ಮಮತಾ ಡಿ.ಎಸ್‌. ಗಟ್ಟಿ, ಧನಲಕ್ಷ್ಮೀ ಗಟ್ಟಿ, ತಾ. ಪಂ. ಅಧ್ಯಕ್ಷ ಮೊಹಮ್ಮದ್‌ ಮೋನು, ಸದಸ್ಯ ರಾಮಚಂದ್ರ ಕುಂಪಲ, ನಗರಸಭಾಧ್ಯಕ್ಷ ಹುಸೈನ್‌ ಕುಂಞಿಮೋನು, ಪೌರಾಯುಕ್ತೆ ವಾಣಿ ವಿ. ಆಳ್ವ, ಸೋಮೇಶ್ವರ ಗ್ರಾ.ಪಂ. ಅಧ್ಯಕ್ಷ ರಾಜೇಶ್‌ ಉಚ್ಚಿಲ, ಶ್ರೀ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ, ಜಿ.ಪಂ. ಮಾಜಿ ಸದಸ್ಯ ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌, ಮುಖಂಡ ಸೀತಾರಾಮ ಬಂಗೇರ, ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಸದಾಶಿವ ಉಳ್ಳಾಲ, ಗೇರು ಅಭಿವೃದ್ಧಿ ನಿಗಮದ ಬಿ.ಎಚ್‌. ಖಾದರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ್‌ ರೈ ಬಿ., ಗಟ್ಟಿ ಸಮಾಜ ಸಂಘದ ಅಧ್ಯಕ್ಷ ಪವಿತ್ರ ಕುಮಾರ್‌ ಗಟ್ಟಿ, ಸಿಪಿಐಎಂ ಮುಖಂಡ ಕೃಷ್ಣಪ್ಪ ಸಾಲ್ಯಾನ್‌, ಕೊಲ್ಯ ಶಾರದಾ ಮಹೋತ್ಸವ ಸಮಿತಿ ಅಧ್ಯಕ್ಷ ಯಶೋಧರ ಕೊಲ್ಯ, ಅಬ್ಬಕ್ಕ ಉತ್ಸವ ಸಮಿತಿಯ ಸದಾನಂದ ಬಂಗೇರ, ಪುಷ್ಕಳ್‌ ಕುಮಾರ್‌, ಆನಂದ ಅಸೈಗೋಳಿ, ದೀಪಕ್‌ ಪಿಲಾರ್‌, ಲಕ್ಷ್ಮೀನಾರಾಯಣ, ತ್ಯಾಗಂ ಹರೇಕಳ, ತಾರಾನಾಥ ರೈ, ದೇವಕಿ ರಾಘವ, ರತ್ನಾವತಿ ಬೈಕಾಡಿ, ಆಲಿಯಬ್ಬ ಉಪಸ್ಥಿತರಿದ್ದರು.

ಉತ್ಸವ ಸಮಿತಿಯ ಪ್ರಮುಖ ಉಸ್ತುವಾರಿ ದಿನಕರ ಉಳ್ಳಾಲ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಮಂಜುಳಾ ಶೆಟ್ಟಿ ನಿರೂಪಿಸಿ, ಅಬ್ದುಲ್‌ ಅಝೀಝ್ ಹಕ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next