ವಿತ್ತು. ಈ ಗ್ರಾಮದಲ್ಲಿ 5-6 ಮನೆಗಳಲ್ಲಿ ವಾಡೆ ಇತ್ತು. ವೀರಶೈವ ಮತದ ಅಯ್ಯನವರು ಸಹ ಈ ವಾಡೆಯಲ್ಲಿದ್ದರಂತೆ. ಊರ ಪ್ರಮುಖರೊಬ್ಬರಿಗೆ ಸುತ್ತಮುತ್ತಲ ಪ್ರದೇಶದ ಸುಂಕ ಸಂಗ್ರಹ ಇತ್ಯಾದಿಗಳ ಉಸ್ತುವಾರಿ ನೀಡಲಾಗಿತ್ತು.
ಕೆಳದಿ ಅರಸರು ತಮ್ಮಗಳ ವಾಡೆಯನ್ನು “ತಂಗಳವಾಡೆ’ ‘ತಮ್ಮ ವಾಡೆ’ ಎಂದು ಪದೆ ಪದೇ ಬಳಕೆ ಮಾಡುತ್ತಿದ್ದರು. ಹೀಗಾಗಿ ತಂಗಳವಾಡಿ ಎಂಬ ಹೆಸರು ಉಳಿದುಕೊಂಡಿತು ಎಂಬ ಪ್ರತೀತಿ ಇದೆ.
Advertisement
ಗಿಳಾಲಗುಂಡಿಯಿಂದ ಹೊಸಕೊಪ್ಪ ,ಕಣ್ಣೂರು,ಗೌತಮಪುರ, ತ್ಯಾಗರ್ತಿ ಭಾಗವನ್ನು ತಲುಪಬೇಕಾದರೆ ಈ ಗ್ರಾಮದ ಮೂಲಕವೇ ಸಾಗಬೇಕಿತ್ತು. ಆಗ ಬಹು ಪ್ರಾಚೀನ ಕುದುರೆ ಗಾಡಿ ರಸ್ತೆ ಇತ್ತು. ಅಲ್ಲದೆ ಹುಂಚದ ಜಿನದತ್ತ ಅರಸನ ಆಳ್ವಿಕೆ ಕಾಲದಲ್ಲಿ ಸಹ ಮುಗುಡ್ತಿ-ಮಾದಾಪುರ ಮೂಲಕ ತಂಗಳವಾಡಿ ಗ್ರಾಮ ದಾಟಿ ತ್ಯಾಗರ್ತಿ ತಲುಪಲು ಸಂಪರ್ಕ ರಸ್ತೆ ಇತ್ತು ಎಂಬ ಪ್ರತೀತಿ ಇದೆ.
Related Articles
Advertisement
ಹಲವು ವರ್ಷಗಳಿಂದ ದೇವರ ಗುಡಿ ಉರುಳಿ ಬಿದ್ದು ಶಿಥಿಲಾವಸ್ಥೆಯಲ್ಲಿತ್ತು. ಗ್ರಾಮದಲ್ಲಿ 28-30 ಮನೆಗಳಿದ್ದು ಪ್ರತಿ ಕುಟುಂಬದರವರೂ ಕೃಷಿ, ಜಾನುವಾರು ಸಾಕಣೆ ,ಕುಟುಂಬ ಅಶಾಂತಿ ಹೀಗೆ ಪದೇ ಪದೇ ತೊಂದರೆ ಅನುಭವಿಸುತ್ತಿದ್ದರು. ಗ್ರಾಮದ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಈ ಆಂಜನೇಯ ದೇವಾಲಯ ಜಿರ್ಣೋದ್ಧಾರ ಮತ್ತು ನಿತ್ಯ ಪೂಜೆಯ ವ್ಯವಸ್ಥೆ ಆಗಬೇಕು ಎಂದು ಅಷ್ಟಮಂಗಲ ಪ್ರಶ್ನಾ ಚಿಂತನದಿಂದ ತಿಳಿದು ಬಂದಿತು.
2010ರಲ್ಲಿ ಗ್ರಾಮಸ್ಥರೆಲ್ಲ ಸೇರಿ ದೇವಾಲಯ ಜೀರ್ಣೋದ್ಧಾರ ನಡೆಸಿ, ಇದರ ಸನ್ನಿಧಾನದಲ್ಲಿ ನಾಗದೇವತೆಯನ್ನೂಸ್ಥಾಪಿಸಿ, 2011 ರಲ್ಲಿ ಪುನರ್ ಪ್ರತಿಷ್ಠಾಪನಾ ಮಹೋತ್ಸವ ನಡೆಸಿದರು. ಆನಂತರದಲ್ಲಿ, ಗ್ರಾಮದ ಪ್ರತಿಯೊಂದು ಕುಟುಂಬದಲ್ಲಿ ಉತ್ತಮ ಕೃಷಿ ಫಸಲು, ಅಭಿವೃದ್ಧಿ ಮತ್ತು ನೆಮ್ಮದಿ ಕಂಡು ಬಂತು. ಈ ಬದಲಾವಣೆಗೂ ಆಂಜನೇಯನೇ ಕಾರಣ ಅನ್ನೋದು ಇಲ್ಲಿನವರ ನಂಬಿಕೆ. ಪೂರ್ವಾಭಿಮುಖವಾಗಿರುವ ಈ ದೇವಾಲಯದಲ್ಲಿ 5 ಅಡಿ ಎತ್ತರದ ವಿಗ್ರಹವಿದೆ. ವಿಗ್ರಹ ಅಭಯ ಪ್ರದಾಯಕ ಭಂಗಿಯಲ್ಲಿದೆ. ವಿಗ್ರಹದ ಪಾದದ ಬಳಿ ರಾವಣನ ಚಿತ್ರವಿರುವುದು ವಿಶೇಷ. ಪ್ರತಿನಿತ್ಯ ಬೆಳಗ್ಗೆ ಸ್ಥಳೀಯ ಕುಟುಂಬಸ್ಥರೊಬ್ಬರು ಪೂಜೆ ನಡೆಸುತ್ತಾರೆ. ಪ್ರತಿ ಶನಿವಾರ ಮತ್ತು ಮಂಗಳವಾರ ಗೌತಮಪುರದಿಂದ ಅರ್ಚಕರು ಆಗಮಿಸಿ ಪೂಜೆ ನಡೆಸುತ್ತಾರೆ. ಶ್ರಾವಣಮಾಸದಲ್ಲಿ ಪ್ರತಿ ಸೋಮವಾರ ಮತ್ತು ಶನಿವಾರ ಪಂಚಾಮೃತಾಭಿಷೇಕ ಪೂಜೆ, ಕಾರ್ತಿಕ ಮಾಸದಲ್ಲಿ ಪ್ರತಿ ಶನಿವಾರ ಸಂಜೆ ದೀಪೋತ್ಸವ ನಡೆಯುತ್ತದೆ. ಪ್ರಮುಖ ಹಬ್ಬಗಳಂದು ಗ್ರಾಮಸ್ಥರೆಲ್ಲ ಇಲ್ಲಿಗೆ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಎನ್.ಡಿ.ಹೆಗಡೆ ಆನಂದಪುರ