Advertisement

ವೀರಭದ್ರೇಶ್ವರ ಕೋ ಆಪರೇಟಿವ್‌ಗೆ ಭಾರತೀಯ ರಿಜರ್ವ್‌ ಬ್ಯಾಂಕ್‌ನಿಂದ ಪ್ರಶಂಸೆ

02:04 PM Sep 21, 2022 | Team Udayavani |

ಚಿಂಚೋಳಿ: ಪಟ್ಟಣದ ಶ್ರೀ ವೀರಭದ್ರೇಶ್ವರ ಕೋ-ಆಪರೇಟಿವ್‌ ಬ್ಯಾಂಕ್‌ ಕಳೆದ 25 ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುತ್ತಿದ್ದು, ಭಾರತೀಯ ರಿಜರ್ವ್‌ ಬ್ಯಾಂಕ್‌ ಪ್ರಶಂಸೆಗೆ ಪಾತ್ರವಾಗಿ “ಎ’ ಗ್ರೇಡ್‌ ಪಡೆದಿದೆ ಎಂದು ಬ್ಯಾಂಕ್‌ ಅಧ್ಯಕ್ಷ ಬಸವರಾಜ ಮಲಿ ಹೇಳಿದರು.

Advertisement

ಪಟ್ಟಣದ ಹಾರಕೂಡ ಚೆನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ವೀರಭದ್ರೇಶ್ವರ ಕೋ-ಆಪರೇಟಿವ್‌ ಬ್ಯಾಂಕಿನ 2021-22ನೇ ಸಾಲಿನ ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ದಿ|ವೀರೇಂದ್ರ ಪಾಟೀಲ ಈ ಬ್ಯಾಂಕ್‌ನ ಮೊದಲ ಸದಸ್ಯತ್ವ ಪಡೆದಿದ್ದರು. ಅವರು ನೀಡಿದ ಮಾರ್ಗದರ್ಶನದಲ್ಲಿ ಯಾವುದೇ ಅವ್ಯವಹಾರ ಇಲ್ಲದೇ ನಿಷ್ಠೆಯಿಂದ ಬ್ಯಾಂಕ್‌ ಆಡಳಿತ ಮಂಡಳಿ, ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಶ್ರೀ ವೀರಭಧ್ರೇಶ್ವರ ಕೋ-ಆಪರೇಟಿವ್‌ ಬ್ಯಾಂಕ್‌ ಕೇವಲ 21ಲಕ್ಷ ರೂ.ಗಳಿಂದ ತನ್ನ ಕಾರ್ಯ ಪ್ರಾರಂಭಿಸಿ ಈಗ 7.24ಕೋಟಿ ರೂ.ವ್ಯವಹಾರ ನಡೆಸುತ್ತಿದೆ. 5.85ಕೋಟಿ ರೂ. ಸಾಲ ವ್ಯವಹಾರ ನಡೆಸುತ್ತಿದ್ದು, ಆರ್‌ಬಿಐ 1.81ಕೋಟಿ ರೂ. ಡಿಪಾಜಿಟ್‌ ಮಾಡಲಾಗಿದೆ ಎಂದು ವಿವರಿಸಿದರು. ಮುಖಂಡರಾದ ರೇವಣಸಿದ್ಧಪ್ಪ ಮರಪಳ್ಳಿ, ಶಾಂತವೀರ ಹೀರಾಪೂರ, ಮಲ್ಲಿಕಾರ್ಜುನ ಹಡಪದ ಬ್ಯಾಂಕಿನ ಲೆಕ್ಕಪತ್ರಗಳನ್ನು ತಿಳಿಸುವಂತೆ ಅಧ್ಯಕ್ಷರಿಗೆ ಒತ್ತಾಯಿಸಿದರು.

2021-22ನೇ ಸಾಲಿನ ವಾರ್ಷಿಕ ಲೆಕ್ಕಪತ್ರವನ್ನು ವ್ಯವಸ್ಥಾಪಕ ನಾಗಶೆಟ್ಟಿ ಮನ್ನಳ್ಳಿ ಓದಿದರು. ಉಪಾಧ್ಯಕ್ಷ ಸುಭಾಷ ಸೀಳಿನ, ಬಸವಣ್ಣಪಾಟೀಲ, ನಾಗರಾಜ ಕಲಬುರಗಿ, ಜಗನ್ನಾಥರೆಡ್ಡಿ ಪೋಂಗಾ, ಶರಣಪ್ಪ ಪುಣ್ಯಶೆಟ್ಟಿ, ಮಹಮ್ಮದ್‌ ಯೂಸೂಫ್‌ ಅಲಿ, ಶರಣಪ್ಪ ಪೂಜಾರಿ, ಸುಭಾಶ್ಚಂದ್ರ ಎಂಪಳ್ಳಿ, ಮಲ್ಲೇಶ್ವರಿ ಜಾಬಶೆಟ್ಟಿ, ಶಿವಪುತ್ರಪ್ಪ ಸೀಳಿನ, ಬಸವರಾಜ ಯಾಲಾಲ್‌, ಜಗನ್ನಾಥ ಅಗ್ನಿಹೋತ್ರಿ ಇದ್ದರು. ನಾಗಶೆಟ್ಟಿ ನಿರೂಪಿಸಿದರು, ಸುಭಾಷ ಸೀಳಿನ ವಂದಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next