Advertisement

ವೀರಭದ್ರ ದೈವದಂತೆಯೇ ಇದೆ… ; ಕಾಂತಾರ ನೋಡಿ ಗೋವಾ ಸಿಎಂ ಸಾವಂತ್

04:17 PM Nov 09, 2022 | Team Udayavani |

ಪಣಜಿ: ”ಕಾಂತಾರದ ದೈವ ಮತ್ತು ಗೋವಾದಲ್ಲಿರುವ ವೀರಭದ್ರರಲ್ಲಿ ಒಂದೇ ಸಾಮ್ಯತೆ ಇದೆ. ಐತಿಹಾಸಿಕ ಉಲ್ಲೇಖಗಳಿರುವ ಇಂತಹ ವಿಷಯಗಳನ್ನು ಸಿನಿಮಾ ರೂಪದಲ್ಲಿ ಉಳಿಸಿ ಸಂರಕ್ಷಿಸುವುದು ಅಗತ್ಯ” ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಅಭಿಪ್ರಾಯಪಟ್ಟಿದ್ದಾರೆ.

Advertisement

ಗೋವಾದಲ್ಲಿ ಕಾಂತಾರ ಚಲನಚಿತ್ರ ವೀಕ್ಷಿಸಿದ ನಂತರ ಮುಖ್ಯಮಂತ್ರಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಗೋವಾ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಶೇಟ್ ತನವಾಡೆ, ಬಿಜೆಪಿ ಮುಖಂಡರಾದ ದಾಮು ನಾಯ್ಕ್, ನರೇಂದ್ರ ಸಾವಾಯಿಕರ್ ಮತ್ತಿತರರು  ಉಪಸ್ಥಿತರಿದ್ದರು.

ಚಿತ್ರ ವೀಕ್ಷಿಸಿದ ಬಳಿಕ ಪ್ರತಿಕ್ರಿಯೆ ನೀಡಿ, ”ಕಾಂತಾರ ಚಲನಚಿತ್ರ ನೋಡಿದ ಮೇಲೆ ಎರಡು ವಿಷಯಗಳು ನೆನಪಿಗೆ ಬಂದವು. ಕಾಂತಾರ ಕಥೆಯು ಗೋವಾದ ವೀರಭದ್ರ ದೈವದಂತೆಯೇ ಇದೆ ಎಂದು ಸಾವಂತ್ ಹೇಳಿದ್ದಾರೆ. ಇಂತಹ ವಿಷಯಗಳನ್ನು ಸಿನಿಮಾದಂತಹ ಮಾಧ್ಯಮಗಳ ರೂಪದಲ್ಲಿ ಉಳಿಸಬೇಕು, ಇಲ್ಲವಾದಲ್ಲಿ ಕಣ್ಮರೆಯಾಗುತ್ತವೆ” ಎಂದರು.

ವೀರಭದ್ರ ನೃತ್ಯ ಸಂಪ್ರದಾಯ…          
ಗೋವಾದ ಸಾಖಳಿ ಬಳಿಯ ಶ್ರೀ ವಿಟ್ಠಲ ದೇವಸ್ಥಾನದ ಪರಿಸರದಲ್ಲಿ ವೀರಭದ್ರ ನೃತ್ಯ ಸಂಪ್ರದಾಯ.ಕಾರಾಪುರದ ಶ್ರೀ ವಿಟ್ಠಲ ದೇವಸ್ಥಾನವು ವಿಟ್ಠಲಾಪುರದಲ್ಲಿ 1392 ರಲ್ಲಿ ಸ್ಥಾಪನೆಯಾಯಿತು ಎಂದು ಉಲ್ಲೇಖವಿದೆ. ಶ್ರೀ ವಿಟ್ಠಲ ದೇವರು ವಿಷ್ಣುವಿನ ಅವತಾರವಾಗಿದ್ದು , ಗೋವಾ, ಮಹಾರಾಷ್ಟ್ರ, ಕರ್ನಾಟಕ ಮತ್ತು ದಕ್ಷಿಣ ಭಾರತದ ಇತರ ಭಾಗಗಳಲ್ಲಿ ಭಕ್ತಿ ಪಂಥದಿಂದ ಜನಪ್ರಿಯವಾಗಿದೆ. ಶ್ರೀ ವಿಟ್ಠಲರು ಮುಖ್ಯವಾಗಿ ಶೈವ ಮತ್ತು ವೈಷ್ಣವ ಎರಡು ಪಂಗಡಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡಿದರು. ಪ್ರತಿ ವರ್ಷ ಈ ದೇವಸ್ಥಾನದಲ್ಲಿ ವೀರಭದ್ರ ನೃತ್ಯದ ಪದ್ಧತಿ ಕೂಡ ನಡೆದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next