Advertisement
ಜಿಲ್ಲಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಗುರುವಾರ ಮನವಿ ಸಲ್ಲಿಸಿದ ಬಳಿಕ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
Related Articles
Advertisement
ಒಂದು ಟನ್ ಮರಳಿಗೆ 80 ರೂ. ರಾಯಧನದ ಬದಲಿಗೆ ಹರಾಜಿನಲ್ಲಿ 700 ರೂ.ನಿಂದ ಸಾವಿರದವರೆಗೆ ಕೂಗುತ್ತಿದ್ದಾರೆ. ನಿಯಮದ ಪ್ರಕಾರ ಒಂದೂವರೆ ಮೀಟರ್‌ನಷ್ಟು ಆಳ ಮಾತ್ರ ತೆಗೆಯಬೇಕು. ಇದ್ಯಾವುದನ್ನು ಪಾಲಿಸುತ್ತಿಲ್ಲ. ಅಕ್ರಮ ಪ್ರಶ್ನಿಸುವ ರೈತರ ಮೇಲೆ ರೌಡಿಗಳ ಮೂಲಕ ದೌರ್ಜನ್ಯ ಎಸಗಲಾಗುತ್ತಿದೆ. ಅಮಾಯಕರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಕೇಸು ಹಾಕುವ ಬೆದರಿಕೆ ಒಡ್ಡಲಾಗುತ್ತಿದೆ. ಬೇರೆ ಊರಿನ ಗೂಂಡಾಗಳು ಹೊಸದುರ್ಗದಲ್ಲಿ ಬಂದು ಸೇರಿಕೊಂಡಿದ್ದಾರೆ. ಜಿಲ್ಲಾಡಳಿತ ಇದನ್ನು ಕಂಡೂ ಕಾಣದಂತೆ ಮೌನ ವಹಿಸಿದೆ. ಪೊಲೀಸರು ಅಮಾಯಕರ ಮೇಲೆ ಕೇಸು ದಾಖಲಿಸುತ್ತಿದ್ದಾರೆ ಎಂದು ದೂರಿದರು. ಹೊಸದುರ್ಗ ಕ್ಷೇತ್ರದ ಒಂದೊಂದು ಹಳ್ಳಿಯಲ್ಲಿಯೂ ಸಾವಿರ ಅಡಿಗಳಂತೆ ಐದಾರು ಕೊಳವೆಬಾವಿ ಕೊರೆಸಿದರೂ ನೀರು ಲಭ್ಯವಾಗುತ್ತಿಲ್ಲ. ಸ್ಟಾಕ್‌ಯಾರ್ಡ್ ಜಾಗವನ್ನು ಭೂ ಪರಿವರ್ತನೆ ಮಾಡಿಸಿಲ್ಲ, ಸಿಸಿ ಕ್ಯಾಮೆರಾ ಅಳಡಿಸಿಲ್ಲ, ತೂಕದ ಯಂತ್ರ ಹಾಕಿಲ್ಲ, ಜಿಪಿಎಸ್ ಅಳವಡಿಸಿಲ್ಲ. ರಸ್ತೆಗಳು ಹಾಳಾಗಿವೆ. ಅದಕ್ಕಾಗಿ ಅಕ್ರಮ ಮರಳುಗಾರಿಕೆ ವಿರೋಧಿಸಿ ಪಾದಯಾತ್ರೆ ಹಮ್ಮಿಕೊಂಡಿದ್ದು ರೈತರು, ವಿವಿಧ ಸಂಘ ಸಂಸ್ಥೆಗಳವರು, ಮಹಿಳೆಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗೂಳಿಹಟ್ಟಿ ಶೇಖರ್ ಮನವಿ ಮಾಡಿದರು.
ತಾಲೂಕಿನ ಆರು ಮರಳು ಬ್ಲಾಕ್‌ಗಳನ್ನು ಸರ್ಕಾರ ಹರಾಜು ಹಾಕಿರುವುದೇ ಕಾನೂನು ಬಾಹಿರ. ಮಂಗಳೂರು, ಕೇರಳ, ಹಾವೇರಿಯವರು ಇಲ್ಲಿಗೆ ಬಂದು ಮರಳು ಹರಾಜಿಗೆ ಕೈಹಾಕಿ ವೇದಾವತಿ ನದಿಯ ಒಡಲನ್ನು ಬರಿದು ಮಾಡಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ಕುಡಿಯುವ ನೀರು ಸಿಗುತ್ತಿಲ್ಲ. ರೈತರ ಅಡಿಕೆ ಹಾಗೂ ತೆಂಗಿನ ತೋಟಗಳು ಒಣಗಿವೆ. ಅಕ್ರಮ ಮತ್ತು ಸಕ್ರಮ ಮರಳುಗಾರಿಕೆಗೆ ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರ ಕುಮ್ಮಕ್ಕಿದೆ.• ಗೂಳಿಹಟ್ಟಿ ಶೇಖರ್,
ಹೊಸದುರ್ಗ ಶಾಸಕ.