Advertisement

ನಾಯಕನ ಜೊತೆ ಜಗಳ: ರಿಲೀಸ್‌ಗೂ ಮುನ್ನ ಸಿನಿಮಾವನ್ನು ಆನ್‌ಲೈನ್‌ನಲ್ಲಿ ಲೀಕ್‌ ಮಾಡಿದ ನಿರ್ದೇಶಕ

03:33 PM May 15, 2024 | Team Udayavani |

ಕೊಚ್ಚಿ: ಮಾಲಿವುಡ್‌ ಸಿನಿಮಾರಂಗ ಮುಟ್ಟಿದೆಲ್ಲ ಚಿನ್ನವಾಗುತ್ತಿದೆ. ಕಳೆದ ಕೆಲ ತಿಂಗಳಿನಲ್ಲಿ ತೆರಕಂಡ ಸಿನಿಮಾಗಳು 100 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದೆ.  ನಾಲ್ಕು ತಿಂಗಳಿನಲ್ಲಿ ಮಲಯಾಳಂ ಚಿತ್ರರಂಗ 1000 ಕೋಟಿ ಗಳಿಕೆ ಮಾಡಿದೆ.

Advertisement

ಇಷ್ಟೆಲ್ಲ ಒಳಿತು ನಡೆಯುತ್ತಿರುವಾಗಲೇ ಅದೊಂದು ನಿರ್ದೇಶಕ – ನಾಯಕನ ನಡುವಿನ ಮನಸ್ತಾಪದಿಂದ ತೆರೆಕಾಣಬೇಕಿದ್ದ ಸಿನಿಮಾವೊಂದಕ್ಕೆ ಭಾರೀ ಹಿನ್ನೆಡೆ ಆಗಿದೆ. ಮಾಲಿವುಡ್‌ ಚಿತ್ರರಂಗದ ಖ್ಯಾತ ನಟ ಟೊವಿನೋ ಥಾಮಸ್‌ ಹಾಗೂ ನಿರ್ದೇಶಕ ಸನಲ್ ಕುಮಾರ್‌ ಶಶಿಧರನ್‌ ನಡುವಿನ ಮನಸ್ತಾಪ ಮಾಲಿವುಡ್‌ ನಲ್ಲಿ ತಾರಕಕ್ಕೇರಿದೆ.

ಏನಿದು ಜಗಳ?: ಶಶಿಧರನ್‌ ಹಾಗೂ ಟೊವಿನೋ ಜೊತೆಯಾಗಿ ʼವಳಕ್ಕುʼ ಎನ್ನುವ ಸಿನಿಮಾವನ್ನು ಮಾಡಿದ್ದಾರೆ. 2020 ರಲ್ಲೇ ಚಿತ್ರೀಕರಣಗೊಂಡಿರುವ ಈ ಸಿಬಿಮಾ ಇದುವರೆಗೆ ರಿಲೀಸ್‌ ಆಗಿಲ್ಲ. ರಿಲೀಸ್‌ ವಿಚಾರವಾಗಿ ನಿರ್ದೇಶಕ ಹಾಗೂ ನಟ ಥಾಮಸ್‌ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಈ ಸಿನಿಮಾ ನಿರ್ಮಾಣಕ್ಕೆ ನಟ ಥಾಮಸ್‌ ಸಹ-ನಿರ್ಮಾಪಕ ಗಿರೀಶ್ ಚಂದ್ರನ್ ಅವರೊಂದಿಗೆ ಸೇರಿ 27 ಲಕ್ಷ ರೂಪಾಯಿಯನ್ನು ಬಂಡವಾಳವನ್ನಾಗಿ ಹಾಕಿದ್ದರು ಎನ್ನಲಾಗಿದೆ

ಈ ಸಿನಿಮಾಕ್ಕಾಗಿ ಪ್ರೇಕ್ಷಕರು ಕೆಲ ಸಮಯದಿಂದ ಕಾಯುತ್ತಿದ್ದಾರೆ. ಆದರೆ ಇದುವರೆಗೆ ರಿಲೀಸ್‌ ಬಗ್ಗೆ ಯಾವ ಮಾಹಿತಿಯೂ ಹೊರಬಿದ್ದಿಲ್ಲ. ನಿರ್ದೇಶಕ ಶಶಿಧರನ್‌ ಇತ್ತೀಚೆಗೆ ತಮ್ಮ ಫೇಸ್‌ ಬುಕ್‌ ಖಾತೆಯಲ್ಲಿ ಶಶಿಧರನ್‌ ಥಾಮಸ್‌ ಮೇಲೆ ಆರೋಪವನ್ನು ಮಾಡಿದ್ದರು. ʼವಳಕ್ಕುʼ ಸಿನಿಮಾ ಬಿಡುಗಡೆ ವಿಚಾರದಲ್ಲಿ ಟೊವಿನೋ ಮಧ್ಯ ಪ್ರವೇಶ ಮಾಡಿದ್ದಾರೆ. ತಮ್ಮ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಬಾರದೆನ್ನುವ ಕಾರಣದಿಂದ ಥಾಮಸ್‌ ʼವಳಕ್ಕುʼ ಸಿನಿಮಾವನ್ನು ಥಿಯೇಟರ್‌ ಹಾಗೂ ಓಟಿಟಿಯಲ್ಲಿ ರಿಲೀಸ್‌ ಮಾಡಲು ಒಪ್ಪಿಗೆ ನೀಡುತ್ತಿಲ್ಲ. 2020 ರಲ್ಲಿ ಚಿತ್ರೀಕರಣಗೊಂಡರೂ, 2021 ರ ವೇಳೆಗೆ ಪೋಸ್ಟ್-ಪ್ರೊಡಕ್ಷನ್ ಮುಗಿದಿದ್ದರೂ, ನಟನ ಕಾರಣದಿಂದಾಗಿ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ ಎಂದು  ನಿರ್ದೇಶಕರು ಆರೋಪ ಮಾಡಿದ್ದಾರೆ.

ಇದರಿಂದ ಇಷ್ಟು ದಿನ ಒಳಜಗಳವಾಗಿದ್ದ ʼವಳಕ್ಕುʼ ರಿಲೀಸ್‌ ವಿಚಾರ ಸೋಶಿಯಲ್‌ ಮೀಡಿಯಾದ ಪೋಸ್ಟ್‌ ನಿಂದ ಬಹಿರಂಗವಾಗಿದೆ.

Advertisement

ಇದಕ್ಕೆ ಇನ್ಸ್ಟಾಗ್ರಾಮ್‌ ಲೈವ್‌ ನಲ್ಲಿ ನಟ ಟೊವಿನೋ ಸಹ ನಿರ್ಮಾಪಕ ಗಿರೀಸ್‌ ಅವರೊಂದಿಗೆ ಲೈವ್‌ ಬಂದು ಪ್ರತಿಕ್ರಿಯೆ ನೀಡಿದ್ದಾರೆ.

ನಟ ಟೊವಿನೋ ಪ್ರತಿಕ್ರಿಯೆ:

ನಿರ್ದೇಶಕರ ಮೇಲಿನ ಗೌರವದಿಂದ ಚಿತ್ರವನ್ನು ನಿರ್ಮಿಸಲು ನಿರ್ಧರಿಸಿರುವುದಾಗಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಟೊವಿನೊ ಯಾವುದೇ ಆದಾಯವಿಲ್ಲದೆ ಚಿತ್ರದ ನಿರ್ಮಾಣಕ್ಕೆ ₹27 ಲಕ್ಷ ಹೂಡಿಕೆ ಮಾಡಿದ್ದೇನೆ” ಎಂದಿದ್ದಾರೆ.

ಸಿನಿಮಾ ಬಿಡುಗಡೆ ಅಡ್ಡಿ ಆಗಿದ್ದು ನಾನಲ್ಲ, ಬದಲಾಗಿ ಸ್ವತಃ ನಿರ್ದೇಶಕ ಸನಲ್‌ ಅವರೇ ಎಂದಿದ್ದಾರೆ. ಮುಂಬೈ ಫಿಲ್ಮ್ ಫೆಸ್ಟಿವಲ್ (MAMI) ಸಿನಿಮಾವನ್ನು ಪ್ರದರ್ಶನ ಮಾಡುವ ವಿಚಾರವನ್ನು ಪ್ರಸ್ತಾಪಿಸಿದ್ದೆ. ಆದರೆ ನಿರ್ದೇಶಕರು ಆನ್‌ ಲೈನ್‌ ನಲ್ಲಿ ಸಿನಿಮಾ ಸೋರಿಕೆ ಆಗುತ್ತದೆ ಎನ್ನುವ ಕಾರಣಕ್ಕೆ ಅದನ್ನು ಬೇಡ ಎಂದಿದ್ದರು. ಇದಲ್ಲದೆ ಅವರು ಸಿನಿಮಾದ ವಿತರಣಾ ಹಕ್ಕನ್ನು ಹಸ್ತಾಂತರಿಸಲು ಸಿದ್ದರಿಲ್ಲ. ಓಟಿಟಿಗೆ ಸಿನಿಮಾ ಮಾರಾಟ ಮಾಡುವಾಗ ಇದು ಮುಖ್ಯವಾಗುತ್ತದೆ ಎಂದಿದ್ದಾರೆ.

2022 ರಲ್ಲಿ ನಟಿ ಮಂಜು ವಾರಿಯರ್‌ ಅವರನ್ನು ಬ್ಲಾಕ್‌ಮೇಲ್ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಆಕೆಯ ಪ್ರತಿಷ್ಠೆಗೆ ಧಕ್ಕೆ ತಂದ ಆರೋಪದ ಮೇಲೆ ಶಶಿಧರನ್‌ ಅವರನ್ನು ಬಂಧಿಸಲಾಗಿತ್ತು. ಈ ಕಾರಣದಿಂದ ಬಹಳಷ್ಟು OTT ಪ್ಲಾಟ್‌ಫಾರ್ಮ್‌ಗಳು ಸಿನಿಮಾವನ್ನು ಖರೀದಿಸಲು ಮುಂದೆ ಬಂದಿಲ್ಲ ಎಂದು ಟೊವಿನೋ ಹೇಳಿದ್ದಾರೆ.

ರಿಲೀಸ್‌ ಗೂ ಮುನ್ನ ಇಡೀ ಸಿನಿಮಾವನ್ನೇ ಆನ್‌ ಲೈನ್‌ ನಲ್ಲಿ ಸೋರಿಕೆ ಮಾಡಿದ ನಿರ್ದೇಶಕ: ಟೊವಿನೋ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ನಿಟ್ಟಿನಲ್ಲಿ ಆಕ್ರೋಶಗೊಂಡ ನಿರ್ದೇಶಕ ಸನಿಲ್‌ ವಿಮಿಯೋ’ ವಿಡಿಯೋ ಪ್ಲಾಟ್​ಫಾರ್ಮ್​ನಲ್ಲಿ ʼವಳಕ್ಕುʼ ಸಿನಿಮಾವನ್ನು ಅಪ್ ಲೋಡ್ ಮಾಡಿದ್ದಾರೆ. ಈಗಾಗಲೇ ಉಚಿತವಾಗಿ ನೋಡಲು ಇರುವ ʼವಳಕ್ಕುʼ ಸಿನಿಮಾ ಲಕ್ಷಾಂತರ ವೀಕ್ಷಣೆ ಕಂಡಿದೆ.

“ಸಿನಿಮಾವನ್ನು ಪ್ರೇಕ್ಷಕರು ನೋಡಬೇಕು. ಇದನ್ನು ವೀಕ್ಷಿಸಲು ಬಯಸುವವರಿಗೆ, ಇಲ್ಲಿ ʼವಳಕ್ಕುʼ ಸಿನಿಮಾ ಇದೆ. ಈಗ ಇದು ಯಾಕೆ ರಿಲೀಸ್ ಆಗಿಲ್ಲ ಎಂಬುದು ನಿಮಗೆ ಅರ್ಥವಾಗುತ್ತದೆ. ಎಂದು ಬತರೆದುಕೊಂಡು ಸಿನಿಮಾವನ್ನು ಆನ್‌ ಲೈನ್‌ ನಲ್ಲಿ ಹಾಕಿದ್ದಾರೆ.

ಆದರೆ ಆ ಬಳಿಕ ಅದನ್ನು ಅವರು ಡಿಲೀಟ್‌ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಅದರ ಲಿಂಕ್‌ ಇನ್ನು ಕೂಡ ಫೇಸ್‌ ಬುಕ್‌ ನಲ್ಲಿದೆ.

ನಿರ್ದೇಶಕ ಸನಲ್‌ ವಿರುದ್ಧ ಮಾಲಿವುಡ್‌ ಸಿನಿಮಂದಿ ಆಕ್ರೋಶ ಹೊರಹಾಕಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next