“ಪ್ರಧಾನಮಂತ್ರಿ ವಯಾ ವಂದನಾ ಯೋಜನೆ’ಯಲ್ಲಿ ಹಣ ಹೂಡಬಹುದು.
Advertisement
ದೇಶದ ಪ್ರಸ್ತುತ ಆರ್ಥಿಕ ಪರಿಸ್ಥಿತಿಯ ಏರುಪೇರಿನ ಹಿನ್ನೆಲೆಯಲ್ಲಿ ಬ್ಯಾಂಕುಗಳ ಠೇವಣಿಯ ಬಡ್ಡಿದರಗಳ ಏರುಪೇರು ಸಹಜ ಬೆಳವಣಿಗೆ. ಇತ್ತೀಚೆಗಂತೂ ಪ್ರತೀ ಮೂರು ತಿಂಗಳಿಗೊಮ್ಮೆ ಬ್ಯಾಂಕುಗಳು ತಮ್ಮ ಬಡ್ಡಿದರ ಇಳಿಸುತ್ತಿರುವುದನ್ನು ನೀವು ಗಮನಿಸುತ್ತಿರಬಹುದು. ಬಹುತೇಕ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ನಿಶ್ಚಿತ ಠೇವ ಣಿಯ ಮೇಲಿನ ಬಡ್ಡಿದರ ಸರಾಸರಿ ಶೇ.5ರಿಂದ ಶೇ.6ರಷ್ಟು ಮಾತ್ರ ಎನ್ನುವುದು ಗಮನಾರ್ಹ. ಹಿರಿಯ ನಾಗರಿಕರಿಗಾದರೆ ಇನ್ನೊಂದು ಅರ್ಧ ಪ್ರತಿಶತದಷ್ಟು ಹೆಚ್ಚಿನ ಬಡ್ಡಿದರ ನೀಡುವುದು ಬ್ಯಾಂಕ್‌ಗಳ ವಾಡಿಕೆ.
ಮೂಲತಃ ಇದೊಂದು ಪಿಂಚಣಿ ಯೋಜನೆ. ಕನಿಷ್ಠ 60 ವರ್ಷ ವಯಸ್ಸಾಗಿರುವ ನಾಗರಿಕರನ್ನು ದೃಷ್ಟಿ ಯಲ್ಲಿ ಇರಿಸಿಕೊಂಡು ಕೇಂದ್ರ ಸರಕಾರ 2017ರಲ್ಲಿ ಜಾರಿಗೆ ತಂದ ಯೋಜನೆ. ಕನಿಷ್ಠ ಒಂದೂವರೆ ಲಕ್ಷದಿಂದ ಗರಿಷ್ಠ 15 ಲಕ್ಷ ರೂ.ಗಳಷ್ಟು ಮೊತ್ತವನ್ನು ಪ್ರತಿಯೊಬ್ಬ ಹಿರಿಯ ನಾಗರಿಕನೂ ಈ ಯೋಜನೆಯಡಿ ಹೂಡಬಹುದು. 10 ವರ್ಷಗಳ ದೀರ್ಘಾವಧಿಗೆ ಇರುವ ಈ ಯೋಜನೆ ಯಡಿ ಮಾಸಿಕ ಪಿಂಚಣಿಯ ದರ ಶೇ. 8ರಷ್ಟು ಮತ್ತು ವಾರ್ಷಿಕ ಪಿಂಚಣಿಯ ದರ ಶೇ.8.3ರಷ್ಟು ಎನ್ನುವುದು ವಿಶೇಷ. ಬ್ಯಾಂಕುಗಳ ಸಮಕಾಲೀನ ಬಡ್ಡಿ ದರಗ ಳೊಂದಿಗೆ ತುಲನೆ ಮಾಡುವುದಾದರೆ ಸದ್ಯಕ್ಕೆ ಈ ಬಡ್ಡಿದರ ಅತ್ಯುತ್ತಮ ಎನ್ನಬಹುದು. ಒಂದು ವೇಳೆ ಹೂಡಿಕೆಯ ಅವಧಿ ಮುಗಿಯುವ ಮುನ್ನವೇ ಅಂದರೆ, 10 ವರ್ಷ ಗಳ ಅವಧಿ ಪೂರ್ಣವಾಗುವ ಮೊದಲೇ ಹೂಡಿ ಕೆದಾರ ನಿಧನ ಹೊಂದಿದರೆ ಹೂಡಿದ್ದ ಸಂಪೂರ್ಣ ಮೊತ್ತವನ್ನು ನಾಮಿನಿಗೆ ಪಾವತಿಸಲಾಗುವುದು.
Related Articles
ತೆರಿಗೆ ವಿನಾಯಿತಿಯನ್ನು ಗಮನ ದಲ್ಲಿರಿಸಿಕೊಂಡು ಹೂಡಿಕೆಯ ಲೆಕ್ಕಾಚಾರದಲ್ಲಿರುವ ಹಿರಿಯ ನಾಗರಿಕರಿಗೆ ಈ ಯೋಜನೆಯಿಂದ ಯಾವು ದೇ ಲಾಭವಿಲ್ಲ. ಈ ಯೋಜನೆಯಡಿ ಹೂಡುವ ಮೊತ್ತಕ್ಕೆ ಯಾವುದೇ ನಿಯಮಗಳ ಅಡಿಯಲ್ಲಿ ತೆರಿಗೆಯ ವಿನಾಯಿತಿ ಇಲ್ಲ. ಜತೆಗೆ ಹೂಡಿಕೆದಾರ ತನ್ನ ಉಳಿದ ಆದಾಯಗಳಿಂದ ಆದಾಯ ತೆರಿಗೆಗೆ ಯೋಗ್ಯರಾಗಿದ್ದರೆ ಈ ಯೋಜನೆ ಅಲ್ಲಿನ ಹೂಡಿಕೆಯಿಂದ ಗಳಿಸಬಹುದಾದ ಪಿಂಚ ಣಿಯೂ ತೆರಿಗೆಗೆ ಅರ್ಹವಾಗುತ್ತದೆ ಎನ್ನುವುದನ್ನೂ ಹೂಡಿಕೆದಾರರು ತಿಳಿದುಕೊಳ್ಳಬೇಕು.
Advertisement
ವ್ಯಕ್ತಿಗತ ಮೌಲ್ಯ ಪಾಲಿಸಿಇಷ್ಟಾಗಿಯೂ ಒಂದು ಉತ್ತಮ ಬಡ್ಡಿದರದ ಮತ್ತು ಸುರಕ್ಷಿತ ಸರಕಾರಿ ಹೂಡಿಕೆ “ಪ್ರಧಾನಮಂತ್ರಿ ವಯಾ ವಂದನಾ ಯೋಜನೆ’ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಳೆದ ಮೂರು ವರ್ಷಗಳಿಂದ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಯೋಜನೆ ಇದೇ ವರ್ಷ ಮಾರ್ಚ್ 31ರಂದು ಕೊನೆಗೊಳ್ಳಲಿದೆ. ಆಸಕ್ತರು ಸಮೀಪದ ಭಾರತೀಯ ಜೀವ ವಿಮಾ ನಿಗಮದ ಶಾಖೆಗಳಿಗೆ ತೆರಳಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ಜಿಎಸ್‌ಟಿ ಅನ್ವಯವಾಗುವುದಿಲ್ಲ
ಹಿರಿಯ ನಾಗರಿಕರ ಯೋಜನೆಯಾಗಿರುವು ದರಿಂದ ಉಳಿದ ಅನೇಕ ಯೋಜನೆಗಳಿಗೆ ಅನ್ವಯವಾಗುವ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಇದಕ್ಕೆ ಅನ್ವಯವಾಗದು ಎನ್ನುವುದು ವಿಶೇಷ. ಹೂಡಿಕೆಯ ಒಂದು ವರ್ಷದ ಅನಂತರ ಅವಧಿಪೂರ್ವ ಹಿಂಪಡೆ ಯುವಿಕೆಯ ಸೌಲಭ್ಯವೂ ಈ ಯೋಜನೆಗಿದೆ. ಸಣ್ಣದೊಂದು ನಿರ್ವಹಣ ವೆಚ್ಚದ ಕಡಿತದೊಂದಿಗೆ ಹೂಡಿಕೆಯ ಸಂಪೂರ್ಣ ಮೊತ್ತವನ್ನು ವಾಪಸು ಪಡೆ ಯುವ ನಿಯಮವೂ ಈ ಯೋಜನೆಯಡಿ ಇದೆ.