Advertisement
ಕೋವಿಡ್ -19 ಲಸಿಕೆಗಾಗಿ ಯಾವುದೇ ಮೊಬೈಲ್ ಆ್ಯಪ್ಲಿಕೇಶನ್ ಇಲ್ಲ. ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ ಗೂಗಲ್ ಕ್ರೋಮ್ ಅಥವಾ ಯಾವುದೇ ಇಂಟರ್‌ನೆಟ್ ಬ್ರೌಸರ್ ಅನ್ನು ಬಳಸಬೇಕಾಗುತ್ತದೆ. ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಇವುಗಳಲ್ಲಿ ಯಾವುದಾದರೂ ಒಂದು ಫೋಟೋ ಐಡಿ ಆ ಸಂದರ್ಭ ಅಗತ್ಯವಿರುತ್ತದೆ.
www.cowin.gov.in ಗೆ ಲಾಗ್ ಇನ್ ಮಾಡುವ ಮೂಲಕ ನೀವು ಕೋವಿಡ್ -19 ಲಸಿಕೆಗಾಗಿ ನೋಂದಾಯಿಸಿಕೊಳ್ಳಬಹುದು. SMS ಮೂಲಕ ಪರಿಶೀಲನೆಗಾಗಿ OTP ಸ್ವೀಕರಿಸಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ‘Verify’ಬಟನ್ ಕ್ಲಿಕ್ ಮಾಡಿ. ನೋಂದಣಿಯನ್ನು ದೃಢಪಡಿಸುವುದು ಹೇಗೆ?
ವೆಬ್‌ಸೈಟ್‌ನಲ್ಲಿ ನೋಂದಾಯಿಸಿದ ಆಮೇಲೆ “ವ್ಯಾಕ್ಸಿನೇಶನ್ ನೋಂದಣಿ (Registration of Vaccination)ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಫೋಟೋ ಐಡಿ ಪ್ರೂಫ್ ಸಂಖ್ಯೆ, ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ಇತರ ವಿವರಗಳನ್ನು ನಮೂದಿಸಿ. ಅನಂತರ “ರಿಜಿಸ್ಟರ್ ಬಟನ್’ ಕ್ಲಿಕ್ ಮಾಡಿ. ಚುಚ್ಚುಮದ್ದಿನ ಬಗ್ಗೆ ಅಗತ್ಯ ವಿವರಗಳನ್ನು ನೀವು ಮೆಸೇಜ್ ಮೂಲಕ ಸ್ವೀಕರಿಸುತ್ತೀರಿ. ನೀಡಲಾದ ವಿವರಗಳನ್ನು ಸರಿಯಾಗಿದೆಯೇ ಎಂಬುದನ್ನು ಮತ್ತೂಮ್ಮೆ ಪರಿಶೀಲಿಸಿ. ಲಸಿಕೆಗಾಗಿ ನೋಂದಾಯಿಸುವ ಸಮಯದಲ್ಲಿ ಫಲಾನುಭವಿ ಐಡಿ(Beneficiary Reference ID)ಪಡೆಯುತ್ತೀರಿ. ಈ ಐಡಿಯನ್ನು ಎಲ್ಲಾದರೂ ಸೇವ್ ಮಾಡಿಟ್ಟುಕೊಳ್ಳಿ.
Related Articles
ಕೋವಿನ್ ವೆಬ್‌ಸೈಟ್‌ನಲ್ಲಿ ಲಿಂಕ್ ಮಾಡಲಾದ ಖಾತೆಗೆ ಇನ್ನೂ 3 ಜನರನ್ನು ನೀವು ಸೇರಿಸಬಹುದು. ಇದನ್ನು ಮಾಡಲು, ಖಾತೆ ವಿವರಗಳ ಪುಟದ ಕೆಳಗಿನ ಬಲಭಾಗದಲ್ಲಿರುವ ಇನ್ನಷ್ಟು ಸೇರಿಸಿ'(Add More) ಬಟನ್ ಕ್ಲಿಕ್ ಮಾಡಿ. ವ್ಯಾಕ್ಸಿನೇಶನ್‌ಗಾಗಿ ಇತರರನ್ನು ನೋಂದಾಯಿಸಲು ಮೇಲೆ ತಿಳಿಸಲಾದ ಎಲ್ಲ ಮಾಹಿತಿಯನ್ನು ನಮೂದಿಸಬೇಕಾಗುತ್ತದೆ.
Advertisement
ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡುವುದು ಹೇಗೆ?ಮೊದಲ ಲಸಿಕೆ ಪಡೆದ ಬಳಿಕ ವ್ಯಾಕ್ಸಿನೇಶನ್ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಬಹುದು. ಪ್ರಮಾಣಪತ್ರದಲ್ಲಿ ಹೆಸರು, ಹುಟ್ಟಿದ ದಿನಾಂಕ, ಫಲಾನುಭವಿ ಉಲ್ಲೇಖ ಐಡಿ, ಫೋಟೋ ಐಡಿ, ಲಸಿಕೆ ಹೆಸರು, ಆಸ್ಪತ್ರೆಯ ಹೆಸರು, ದಿನಾಂಕ ಮತ್ತು ಇತರ ವಿವರಗಳಿರುತ್ತವೆ. ಪ್ರಮಾಣಪತ್ರವನ್ನು ಪಡೆಯಲು Beneficiary Reference ID ಬಹಳ ಮುಖ್ಯ. ಕೋ-ವಿನ್ ಪೋರ್ಟಲ್ (cowin.gov.in)/ ಆರೋಗ್ಯ ಸೇತು ಅಪ್ಲಿಕೇಶನ್/ಡಿಜಿ-ಲಾಕರ್ ಮೂಲಕ ಡೌನ್ಲೋಡ್ ಮಾಡಬಹುದು. 46 ಕೋಟಿ ಲಸಿಕೆ ಅಗತ್ಯ
ಎಪ್ರಿಲ್ 19ರಂದು ಬೆಳಗ್ಗೆ 8.00ರ ವರೆಗೆ 12.38 ಕೋಟಿ ಡೋಸ್‌ಗಳನ್ನು ನೀಡಲಾಗಿದೆ. ಈ ಪೈಕಿ 10.73 ಕೋಟಿ ಮೊದಲ ಡೋಸ್ ಆಗಿದ್ದರೆ, 1.64 ಕೋಟಿ ಎರಡನೇ ಡೋಸ್ ಆಗಿದೆ. ಜನಗಣತಿಯ ಮಾಹಿತಿಯ ಪ್ರಕಾರ ಆರೋಗ್ಯ ರಕ್ಷಣೆ, ಮುಂಚೂಣಿ ಕಾರ್ಮಿಕರು ಮತ್ತು ದೇಶದ 45+ ಜನಸಂಖ್ಯೆಗೆ ಲಸಿಕೆ ನೀಡಲು ಸುಮಾರು 46 ಕೋಟಿ ಲಸಿಕೆ ಇನ್ನೂ ಅಗತ್ಯವಿದೆ. ಎಪ್ರಿಲ್ 1ರ ಅನಂತರ ವ್ಯಾಕ್ಸಿನೇಷನ್ ವೇಗವನ್ನು ಪಡೆಯಿತು. ಎಪ್ರಿಲ್ 5ರಂದು ದಾಖಲೆಯ 4.5 ಮಿ. ಡೋಸೇಜ್ ನೀಡಲಾಯಿತು, ಆದರೆ ಬಳಿಕ ಕೇವಲ 30 ಲಕ್ಷ ಡೋಸೇಜ್‌ಗಳನ್ನಷ್ಟೇ ನೀಡಲು ಸಾಧ್ಯವಾಗಿದೆ. ಲಸಿಕೆ ಕೊರತೆಯಿಂದಾಗಿ ಈ ಅಂಕಿ-ಅಂಶವು ದಿನದಿಂದ ದಿನಕ್ಕೆ ಕಡಿಮೆಯಾಗಿದೆ. ಆನ್‌ಲೈನ್ ಅಪಾಯಿಂಟ್ಮೆಂಟ್ ಹೇಗೆ?
ವೆಬ್‌ಸೈಟ್‌ನಲ್ಲಿ ಕಾಣುವ ಕ್ಯಾಲೆಂಡರ್ ಐಕಾನ್ ಕ್ಲಿಕ್ ಮಾಡಿ ಅಥವಾ ನೇರವಾಗಿ ಅಪಾಯಿಂಟ್ಮೆಂಟ್ ಬಟನ್ ಕ್ಲಿಕ್ ಮಾಡಿ. ನಿಮ್ಮನ್ನು ವ್ಯಾಕ್ಸಿನೇಶನ್‌ನ ಅಪಾಯಿಟ್ಮೆಂಟ್‌ಗಾಗಿ “ಬುಕ್’ ಮಾಡುವ ಪುಟಕ್ಕೆ ಕೊಂಡೊಯ್ಯುತ್ತದೆ. ಈ ಪುಟದಲ್ಲಿ ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ನಿಮ್ಮ ಪಿನ್‌ಕೋಡ್ ಮೂಲಕ ಆಯ್ಕೆಯ ವ್ಯಾಕ್ಸಿನೇಶನ್ ಕೇಂದ್ರವನ್ನು ಹುಡುಕಿ. ಅಲ್ಲಿ ಕಂಡುಬರುವ ಕೇಂದ್ರದ ಹೆಸರಿನ ಮೇಲೆ ಕ್ಲಿಕ್ ಮಾಡಿ ಮತ್ತು ಅದು ಲಭ್ಯವಿರುವ ಸ್ಲಾಟ್‌ಗಳನ್ನು ತೋರಿಸುತ್ತದೆ. ಅನಂತರ “ಬುಕ್’ ಬಟನ್ ಅನ್ನು ಕ್ಲಿಕ್ ಮಾಡಿ. ಆಮೇಲೆ ‘Appointment Confirmation’ಪುಟ ತೆರೆದುಕೊಳ್ಳುತ್ತದೆ. ಎಲ್ಲ ವಿವರಗಳನ್ನು ಸರಿಯಾಗಿ ಪರಿಶೀಲಿಸಿ “ಕನ್ಫರ್ಮ್’ ಬಟನ್ ಕ್ಲಿಕ್ ಮಾಡಿ. ನಿಮಗೆ ನೀಡಲಾದ ದಿನಾಂಕದಂದು ತಪ್ಪದೇ ಭೇಟಿ ನೀಡಿ ಲಸಿಕೆ ಸ್ವೀಕರಿಸಿ. ಹತ್ತಿರದ ಕೇಂದ್ರದಲ್ಲಿ ಪಡೆಯುವುದು ಹೇಗೆ?
ಯಾವುದೇ ವೆಬ್ ಬ್ರೌಸರ್‌ನಲ್ಲಿ www.cowin.gov.in ಗೆ ಭೇಟಿ ನೀಡಿ. ಪುಟದ ಕೆಳಗಡೆ ಕಾಣುವ Enter place/address/eLoc ಮೇಲೆ ಕ್ಲಿಕ್ ಮಾಡಿ, ಅಲ್ಲಿ ಸ್ಥಳ ವಿವರಗಳನ್ನು ನಮೂದಿಸಿ ಮತ್ತು “ಗೋ’ ಬಟನ್ ಒತ್ತಿರಿ.