Advertisement

Kukke Subrahmanya ಕ್ಕೆ ವಸಿಷ್ಠ ಸಿಂಹ ಮತ್ತು ಹರಿಪ್ರಿಯ ದಂಪತಿ ಭೇಟಿ

10:16 PM Apr 09, 2023 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕನ್ನಡ ಚಿತ್ರನಟ ವಸಿಷ್ಠ ಸಿಂಹ ಹಾಗೂ ಅವರ ಪತ್ನಿ ನಟಿ ಹರಿಪ್ರಿಯ ಅವರು ಭೇಟಿ ನೀಡಿದರು.

Advertisement

ಅವರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಹಾಗೂ ಶ್ರೀ ಹೊಸಳಿಗಮ್ಮನ ದರ್ಶನ ಪಡೆದರು. ವಸಿಷ್ಠ ಸಿಂಹ ಅವರು ಅಕ್ಕ ಹೊತ್ತಿದ್ದ ಹರಕೆಯಂತೆ ತುಲಾಭಾರ ಸೇವೆ ಸಲ್ಲಿಸಿದರು. ಕ್ಷೇತ್ರದ ವತಿಯಿಂದ ವಸಿಷ್ಠ ಸಿಂಹ ದಂಪತಿಯನ್ನು ಗೌರವಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್‌ ರಾಂ ಸುಳ್ಳಿ, ಸದಸ್ಯರಾದ ಶೋಭಾ ಗಿರುರ್ಧ, ವನಜಾ ಭಟ್‌ ಮತ್ತಿತರರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next