Advertisement

ನಿರ್ಮಾಣದತ್ತ ವಸಿಷ್ಠ ಸಿಂಹ

03:31 PM Oct 30, 2020 | Suhan S |

ಚಿತ್ರರಂಗದಲ್ಲಿ ಸಹ ನಟರು ನಾಯಕ ನಟರಾಗುವುದು, ನಾಯಕ ನಟರು ಮುಂದೆ ನಿರ್ಮಾಪಕರು, ನಿರ್ದೇಶಕರಾಗುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈಗ ಆ ಸಾಲಿಗೆ ವಸಿಷ್ಠ ಸಿಂಹ ಅವರ ಹೆಸರು ಸೇರ್ಪಡೆಯಾಗುತ್ತಿದೆ. ನಟ ವಸಿಷ್ಠ ಈಗ ನಿರ್ಮಾಪಕರಾಗಿಯೂ ಗುರುತಿಸಿಕೊಳ್ಳುವ ತಯಾರಿಯಲ್ಲಿದ್ದಾರೆ.

Advertisement

ಹೌದು, ಇತ್ತೀಚೆಗೆ ವಸಿಷ್ಠ ಸಿಂಹ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಚಿತ್ರರಂಗಕ್ಕೆ ಬರುವ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ “ಸಿಂಹ ಟಾಕೀಸ್‌’ ಹೆಸರಿನಲ್ಲಿ ತಮ್ಮದೇ ಆದ ಹೊಸ ಪ್ರೊಡಕ್ಷನ್‌ ಹೌಸ್‌ ಸ್ಥಾಪಿಸುವ ಕುರಿತು ಘೋಷಣೆ ಮಾಡಿದ್ದಾರೆ. ಸದ್ಯ ವಸಿಷ್ಠ ನಾಯಕ ನಟನಾಗಿ ಒಂದರ ಹಿಂದೊಂದು ಸಿನಿಮಾಗಳಲ್ಲಿ

ಬಿಝಿಯಾಗಿದ್ದಾರೆ. ವಸಿಷ್ಠ ಸಿಂಹ ಅಭಿನಯದ “ಕಾಲಚಕ್ರ’ ಚಿತ್ರ ಬಿಡುಗಡೆಗೆ ರೆಡಿಯಾಗಿದ್ದು, ಇದರಲ್ಲಿ ನಾಲ್ಕು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ವಸಿಷ್ಠ ಅಭಿನಯದ “ತಲ್ವಾರ್‌ ಪೇಟೆ’, “ಮರ್ಯಾದಸ್ಥ’ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದ್ದು, ಇನ್ನೂ ಹೆಸರಿಡದ ಎರಡು ಸಿನಿಮಾಗಳ ಪ್ರೀ-ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ.

­

Advertisement

Udayavani is now on Telegram. Click here to join our channel and stay updated with the latest news.

Next