Advertisement

Sandalwood; ಹೊಸ ಚಿತ್ರದಲ್ಲಿ ವಸಿಷ್ಠ ಸಿಂಹ

06:02 PM Oct 26, 2023 | Team Udayavani |

ವಸಿಷ್ಠ ಸಿಂಹ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಕಲಾ ಸೃಷ್ಠಿ ಪ್ರೊಡಕ್ಷನ್ಸ್‌ ನಿಂದ ಈ ಚಿತ್ರ ತಯಾರಾಗುತ್ತಿದೆ. ಈ ಹಿಂದೆ ಸಿದ್ದಿ ಸೀರೆ ಹಾಗೂ ರಾಗಿಣಿ ಅಭಿನಯದ ಸಾರಿ ಕರ್ಮ ರಿಟರ್ನ್ಸ್ ಚಿತ್ರದ ನಿರ್ದೇಶಕ ಬ್ರಹ್ಮ ಈ ನೂತನ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

Advertisement

ಕ್ರೈಮ್‌ ಥ್ರಿಲ್ಲರ್‌ ಹಾಗೂ ರಿವೆಂಜ್‌ ಕಥಾಹಂದರ ಹೊಂದಿರುವ ಈ ಚಿತ್ರ ನಾನ್‌ ಲೀನಿಯರ್‌ ಶೈಲಿಯ ಚಿತ್ರಕಥೆ ಹೊಂದಿದೆ. ಬೆಂಗಳೂರು, ಕೊಡಗು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.

ದೀಪಾವಳಿ ಹಬ್ಬದ ನಂತರ ಚಿತ್ರೀಕರಣ ಆರಂಭವಾಗಲಿದೆ. ರಾಜೀವ್‌ ಗಣೇಶನ್‌ ಛಾಯಾಗ್ರಹಣ ಹಾಗೂ ರಾಘವನ್‌ ಕಾರ್ತಿಕ್‌ ಸಂಗೀತ ನಿರ್ದೇಶನ ಚಿತ್ರಕ್ಕಿರಲಿದೆ. ಅನೇಕ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next