Advertisement

ನಲಿದೇ ಬಿಟ್ಟಳು ವಾಸಂತಿ!

06:00 PM May 25, 2022 | Team Udayavani |

“ವಾಸಂತಿ ನಲಿದಾಗ’ ಎಂಬ ಸಿನಿಮಾವೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದ್ದು, ಬಿಡುಗಡೆಯ ಹಂಂತಕ್ಕೆ ಬಂದಿದೆ.

Advertisement

ಸದ್ಯ ಚಿತ್ರತಂಡ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಬಿಝಿಯಾಗಿದೆ. ಈ ಹಿಂದೆ ಪುಟಾಣಿಸಫಾರಿ, ವರ್ಣಮಯ ಸಿನಿಮಾ ನಿರ್ದೇಶನ ಮಾಡಿದ್ದ ರವೀಂದ್ರ ವಂಶಿ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದು, ಯುವ ಪ್ರತಿಭೆಗಳಾದ ರೋಹಿತ್‌ ಶ್ರೀಧರ್‌ ನಾಯಕನಾಗಿ ಹಾಗೂ ಭಾವನಾ ಶ್ರೀನಿವಾಸ್‌ ನಾಯಕಿಯಾಗಿ ನಟಿಸಿದ್ದಾರೆ.

ಉಳಿದಂತೆ ಜೀವಿತ ವಸಿಷ್ಠ,ಸಾಯಿಕುಮಾರ್‌, ಸುಧಾರಾಣಿ,ಸಾಧುಕೋಕಿಲ, ಮಂಜು ಪಾವಗಡ, ಮಿಮಿಕ್ರಿ ಗೋಪಿ ಸೇರಿದಂತೆ ಒಂದಷ್ಟು ಅನುಭವಿ ಕಲಾವಿದರು ಸಿನಿಮಾದಲ್ಲಿದ್ದಾರೆ. ಈ ಚಿತ್ರವನ್ನು ಜೇನುಗೂಡ ಸಿನಿಮಾ ಬ್ಯಾನರ್‌ನಡಿ ಕೆ.ಎನ್‌. ಶ್ರೀಧರ್‌ ನಿರ್ಮಾಣ ಮಾಡಿದ್ದಾರೆ.

ಚಿತ್ರದ ಬಗ್ಗೆ ಮಾತನಾಡುವ ಸಾಯಿಕುಮಾರ್‌, “ನಿಜವಾಗಲೂ ಸಂತೋಷವಾಗುತ್ತಿದೆ. ಸುಧಾರಾಣಿ ನನ್ನ ಮೊದಲ ಜೋಡಿ. ಈ ಸಿನಿಮಾದಲ್ಲೂ ಮತ್ತೆ ಜೋಡಿಯಾಗಿ ನಟಿಸುತ್ತಿದ್ದೇವೆ. ನಾನು ಬಿಝಿನೆಸ್‌ ಮ್ಯಾನ್‌. ಮಗ ಅಂದ್ರೆ ಇಷ್ಟ. ತುಂಬಾ ಇಂಟ್ರೆಸ್ಟಿಂಗ್‌ ಇರುವ ಪಾತ್ರ. ವಾಸಂತಿ ನಲಿದಾಗ ತುಂಬಾ ಸುಂದರವಾದ ಟೈಟಲ್, ವಂಡರ್‌ಫ‌ುಲ್‌ ಸ್ಟಾರ್‌ ಕಾಸ್ಟ್‌’ ಎಂದರು.

ಮಂಜು ಪಾವಗಡ ಮಾತನಾಡಿ, ಇಲ್ಲಿ ನನಗೆ ಒಳ್ಳೆಯ ಪಾತ್ರ ಕೊಟ್ಟಿದ್ದಾರೆ. ಸಿನಿಮಾದಲ್ಲಿ ಅದ್ಭುತ ಸನ್ನಿವೇಶಗಳಿವೆ. ಡೈಲಾಗ್‌ ತುಂಬಾ ಚೆನ್ನಾಗಿವೆ. ಇಷ್ಟೆಲ್ಲಾ ಸೀನ್‌ ಮಾಡಿದ್ರೂ ಹೀರೋಯಿನ್‌ ಕಾಣಿಸಿಲ್ಲ ಎಂದರು.

Advertisement

ರೋಮ್ಯಾಂಟಿಕ್‌ ಕಥಾಹಂದರ ಹೊಂದಿರುವ “ವಾಸಂತಿ ನಲಿದಾಗ’ ಸಿನಿಮಾಗೆ ಶ್ರೀಗುರು ಸಂಗೀತವಿದ್ದು, ಯೋಗರಾಜ್‌ ಭಟ್‌, ನಾಗೇಂದ್ರ ಪ್ರಸಾದ್‌, ಗೌಸ್‌ ಪೀರ್‌ ಸಾಹಿತ್ಯವಿದೆ. ಸಿ.ರವಿಚಂದ್ರನ್‌ ಸಂಕಲನ, ಪ್ರಮೋದ್‌ ಭಾರತೀಯ ಛಾಯಾಗ್ರಾಹಣ ಸಿನಿಮಾಕ್ಕಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next