Advertisement
ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೆರಿಸುತ್ತಾ ಬಂದಿರುವ ಈ ವಸಾಯಿ ಜಿ.ಸ್.ಬಿ ಯವರ ಬಾಲಾಜಿ ಸೇವಾ ಸಮಿತಿಯು ಸಮಾಜ ಪರ ಕಾರ್ಯಗಳಲ್ಲಿ ಕೂಡ ಜವಾಬ್ದಾರಿಯನ್ನು ಹೊಂದುತ್ತಾ, ಈಗ ಸುಮಾರು 80 ಆದಿವಾಸಿ ವಿದ್ಯಾರ್ಥಿ ಗಳು ವಿದ್ಯಾರ್ಜನೆ ಮಾಡುತ್ತಿರುವ ಈ ಶಾಲೆಯನ್ನು ದತ್ತು ಸ್ವೀಕರಿಸಿ, ತಮ್ಮ ಸೇವೆಯ ಮೊದಲ ಹಂತದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಒಂದು ಜೋಡಿ ಸಮವಸ್ತ್ರ ಹಾಗೂ ಶಾಲೆಗೆ ಅಗತ್ಯವಿರುವ ವಸ್ತುಗಳು – ಅಂದರೆ 2ಕಪಾಟು , 7 ಗೋಡೆ ಗಡಿಯಾರಗಳು, ಒಂದು ಐ ಪ್ಯಾಡ್ ಹಾಗೂ ಎಲ್ಲ ವಿದ್ಯಾರ್ಥಿಗಳಿಗೆ ಬಿಸ್ಕತ್ತು , ಸೇಬು, ತಂಪು ಪಾನಿಯ ಮತ್ತು ಸಮೋಸಾದೊಂದಿಗೆ ಖಾದ್ಯ ಪೊಟ್ಟಣಗಳನ್ನು ನೀಡಿ ಸಹಕರಿಸಿದರು. ಕಾರ್ಯಕ್ರಮದ ಅಂಗವಾಗಿ ಸಮಿತಿಯ ಅಧ್ಯಕ್ಷರಾದ ಶ್ರೀ ತಾರಾನಾಥ ಪೈಯವರು ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ ಮಾಡಿದರು. ಅನಂತರ ವಿದ್ಯಾರ್ಥಿಗಳು ನೆರೆದ ಸಮಿತಿ ಸದಸ್ಯರು ಹಾಗೂ ಸಾರ್ವಜನಿಕರು ಸ್ವತ್ಛ ಭಾರತ ನಿರ್ಮಾಣದ ಬಗ್ಗೆ ಪ್ರತಿಜ್ಞೆಯನ್ನು ಸ್ವೀಕರಿಸಿದರು. ಧ್ವಜ ವಂದನೆಯ ಅನಂತರ ಸಮಿತಿಯ ವತಿಯಿಂದ 2 ಕಪಾಟನ್ನು ಸಮಿತಿಯ ಉಪಾಧ್ಯಕ್ಷರಾದ ಮೂಲ್ಕಿ ಕೃಷ್ಣ ಕಾಮತ್ ಅವರ ಹಸ್ತದಿಂದ ಶಾಲೆಯ ಮುಖೊಪಾಧ್ಯಾಯಿನಿಯವರಿಗೆ ಹಸ್ತಾಂತರಿಸಲಾಯಿತು .
Related Articles
Advertisement
ಶಾಲೆಯ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ವರ್ಷಾಕೃಷ್ಣ ಸಾಳುಂಕೆ ಆವರು ಮಾತನಾಡಿ ಶಾಲೆಯಲ್ಲಿ ಶಿಕ್ಷಣ ಕೊಡುವ ರೀತಿಯ ಬಗ್ಗೆ ಹಾಗೂ ವಿದ್ಯಾರ್ಥಿಗಳು ಆದಿವಾಸಿಗಳಾದರೂ ಉತ್ತಮ ರೀತಿಯ ಶಿಕ್ಷಣ ಅಲ್ಲದೆ ಇತರ ಪಾಠೇತರ ಚಟುವಟಿಕೆಯಲ್ಲಿ ಆಸಕ್ತಿ ನೀಡಿ ಭಾಗವಹಿಸುವ ಬಗ್ಗೆ ಮಾಹಿತಿ ನೀಡಿದರು ಹಾಗೂ ವಸಾಯಿ ಜಿ.ಎಸ್.ಬಿ. ಸಮಾಜದ ಬಾಲಾಜಿ ಸೇವಾ ಸಮಿತಿಯವರಿಗೆ ಈ ಶಾಲೆಯನ್ನು ದತ್ತುಸ್ವೀಕಾರ ಮಾಡಿದ ಬಗ್ಗೆ ಸಂತೋಷವನ್ನು ವ್ಯಕ್ತ ಪಡಿಸಿ ಧನ್ಯವಾದ ನೀಡುತ್ತಾ, ಸಮಿತಿಯ ಸಹಕಾರದಿಂದ ಮುಂಬರುವ ದಿನಗಳಲ್ಲಿ ಶಾಲೆಯು ಇನ್ನೂ ಹೆಚ್ಚಿನ ಪ್ರಗತಿಯನ್ನು ಹೊಂದುವುದರ ಬಗ್ಗೆ ಆಶಿಸಿದರು. ಸಮಿತಿಯ ಸಂಚಾಲಕರಾದ ಶ್ರೀ ದೇವೇಂದ್ರ ಭಕ್ತರು ಮಾತನಾಡಿ ಸಮಿತಿಯು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ತಮ್ಮ ಸಮಾಜ ಪರ ಕಾರ್ಯಕ್ರಮಗಳಲ್ಲಿ ಒಂದಾದ ಶಾಲೆಯ ದತ್ತು ಸ್ವೀಕಾರ ಮಾಡುವ ಬಗ್ಗೆ ಮತ್ತು ಶಾಲೆಗೆ ಹಾಗೂ ವಿದ್ಯಾರ್ಥಿಗಳಿಗೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅಗತ್ಯವಾದ ವಸ್ತುಗಳು
ಮತ್ತು ಸೌಕರ್ಯವನ್ನು ಸಮಿತಿಗೆ ಸಾಧ್ಯವಾದ ಪ್ರಮಾಣದಲ್ಲಿ ನೀಡುವುದಾಗಿ ಆಶ್ವಾಸನೆ ನೀಡಿದರು. ಅಲ್ಲದೆ ಶಾಲೆಯ ಇನ್ನೂ ಹೆಚ್ಚಿನ ಪ್ರಗತಿ ಬಗ್ಗೆ ದೇವರಲ್ಲಿ ಪ್ರಾರ್ಥಿಸಿದರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಒಳ್ಳೆಯ ಶಿಕ್ಷಣ ಪಡೆದು ಉತ್ತಮ ಪ್ರಜೆಯಾಗುವಂತೆ ಆಶೀರ್ವದಿಸಿದರು.
ಅನಂತರ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಮಿತಿಯ ವತಿಯಿಂದ ಖಾದ್ಯ ಪೊಟ್ಟಣಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕಿ ವರ್ಗ ಬಾಲ ವಿಕಾಸ ಮಂಡಳಿಯ ಸದಸ್ಯರು , ದಿವಾನ್ಯನ್ ಪರಿಸರದ ಇತರ ನಾಗರಿಕರು ಹಾಗೂ ವಸಾಯಿ ಜಿಎಸ್‌ಬಿ ಬಾಲಾಜಿ ಸೇವಾ ಸಮಿತಿಯ ಕಾರ್ಯದರ್ಶಿ ಪುರುಷೋತ್ತಮ ಶೆಣೈ ಹಾಗೂ ಇತರ ಪದಾಧಿಕಾರಿಗಳಾದ ಮನೋಹರ ಶೆಣೈ, ವಿಜೆಯೇಂದ್ರ ಪ್ರಭು, ವಿವೇಕಾನಂದ ಭಕ್ತ, ಲಕ್ಷ್ಮಣ ರಾವ್, ಶಿರೀಷ್ ಆಚಾರ್ಯ, ಶ್ರೀನಿವಾಸ ಪಡಿಯಾರ್, ರಾಮಚಂದ್ರ ಹೆಗ್ಡೆ, ಅರವಿಂದ ಹೊನ್ನಾವರ, ಯಶವಂತ ಕಾಮತ್, ಹಾಗೂ ಮಹಿಳಾ ವಿಭಾಗದ ಶ್ರೀಮತಿ ಸುಧಾ ಭುಜೆÉ ಮತ್ತು ಯುವ ವಿಭಾಗದ ಸಚಿನ್ ಪಡಿಯಾರ್ ಮತ್ತು ಕು.ಅಪೇಕ್ಷಾ ಭಕ್ತ ಹಾಗೂ ಇತರ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕೊನೆಗೆ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.