Advertisement

ವಸಾಯಿ ತಾಲೂಕು ಮೊಗವೀರ ಸಂಘ: ಪ್ರತಿಭಾ ಪುರಸ್ಕಾರ,ಆಟಿದ ಕೂಟ

02:36 PM Aug 11, 2017 | Team Udayavani |

ಮುಂಬಯಿ: ಶಿಕ್ಷಣದ ಮೂಲಕ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದಾಗ ಮಕ್ಕಳು ಶೈಕ್ಷಣಿಕವಾಗಿ ಬೆಳೆಯುವುದಲ್ಲದೆ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಇದು ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಸಹಕಾರಿಯಾದೀತು. ಇಂತಹ ಕೆಲಸಕ್ಕೆ ಯಾವುದೇ ಸಂಘ-ಸಂಸ್ಥೆಗಳು ಜಾತಿ-ಭೇದ ಮರೆತು ಪ್ರೋತ್ಸಾಹ ನೀಡಬೇಕು. ಆಗ ನಮ್ಮ ಸಾಂಘಿಕ ಕಾರ್ಯಗಳು ಫಲವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ವಸಾಯಿ ಕರ್ನಾಟಕ ಸಂಘದ ಅಧ್ಯಕ್ಷ ಒ. ಪಿ. ಪೂಜಾರಿ ಅವರು ನುಡಿದರು.

Advertisement

ಆ. 6ರಂದು ಸಂಜೆ ವಸಾಯಿ ತಾಲೂಕು ಮೊಗವೀರ ಸಂಘವು ಸಂಸ್ಥೆಯ ಕಚೇರಿಯಲ್ಲಿ  ಆಯೋಜಿಸಿದ್ದ ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ಆಟಿದ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಕಲಿಯುವ ಮಕ್ಕಳಲ್ಲಿ ಆಸಕ್ತಿ ಮುಖ್ಯ. ಆಗ ಮಾತ್ರ ಅವರು ಗುರಿ ತಲುಪಲು ಸಾಧ್ಯ. ಇಂದು ಮಕ್ಕಳ ಭವಿಷ್ಯಕ್ಕಾಗಿ ಹಗಲಿರುಳು ಚಿಂತಿಸುವ ಪಾಲಕರೊಂದಿಗೆ ಮಕ್ಕಳು ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ನುಡಿದು ಮಕ್ಕಳಿಗೆ ಶುಭ ಹಾರೈಸಿದರು.

ಬಿಲ್ಲವರ ಅಸೋಸಿಯೇಶನ್‌ ವಸಾಯಿ ಸ್ಥಳೀಯ ಸಮಿತಿಯ ಉಪ ಕಾರ್ಯಾಧ್ಯಕ್ಷ ಕೆ. ಟಿ. ಬಂಗೇರ ಮಾತನಾಡಿ, ಮಕ್ಕಳಿಗಾಗಿ ಆಯೋಜಿಸ ಲಾಗಿದ್ದ ಕಾರ್ಯಕ್ರಮದಲ್ಲಿ ಮಕ್ಕಳೇ ಹಾಜರಿದ್ದು ಪುರಸ್ಕಾರ ಸ್ವೀಕರಿಸಿದಾಗ ಆಯೋಜಕರ ಕಾರ್ಯಕ್ರಮಕ್ಕೆ ಸಹಕಾರ ನೀಡಿದಂತಾಗುತ್ತದೆ. ವಸಾಯಿಯ ಈ ಮೊಗವೀರ ಸಂಘವು ಪರಿಸರದ ಎಲ್ಲಾ ಸಮಾಜ ಬಾಂಧವರನ್ನು ಒಗ್ಗಟ್ಟಾಗಿಸಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಮೆಚ್ಚುವಂಥದ್ದು. ಈ ಸಂಸ್ಥೆಯಿಂದ ದೊರೆತ ಸಮ್ಮಾನಕ್ಕೆ ನಾನು ಸದಾ ಋಣಿ ಎಂದರು.

ಸಂಘದ ಅಧ್ಯಕ್ಷ ವಿಜಯ ಕುಂದರ್‌ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾಗತಿಕ ಬದಲಾವಣೆಯಲ್ಲಿ ನಾವು ನಮ್ಮ ಮಕ್ಕಳನ್ನು ಉತ್ತಮ ಮಾರ್ಗದರ್ಶನದ ಮೂಲಕ ಶೈಕ್ಷಣಿಕವಾಗಿ ಪ್ರಜ್ಞಾವಂತರಾಗಿ, ಸೃಜನಶೀಲ ನಾಗರಿಕರನ್ನಾಗಿ ರೂಪಿಸಬೇಕು. ಬೆಳವಣಿಗೆಯ ಜೊತೆಯಲ್ಲಿ ಮಕ್ಕಳು ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವ ಚಿಂತನೆ ಯನ್ನು ರೂಢಿಸಿಕೊಂಡು  ಸಮಾಜಕ್ಕೆ ತಮ್ಮಿಂದಾಗುವ ಸಹಾಯ ನೀಡುವ ಮನೋಭಾವ ಬೆಳೆಸಿ ಕೊಳ್ಳಬೇಕು. 

ವಸಾಯಿ ಮೊಗವೀರ ಸಂಘದ ಆಷಾಢದ ಒಂಜಿದಿನ ಆಟಿದ ಕೂಟ ಕಾರ್ಯಕ್ರಮವು ನಮ್ಮ ಬದಲಾವಣೆಯ ಬದುಕಿನಲ್ಲಿ ಮತ್ತೆ ಗತ ನೆನಪುಗಳು ಸ್ಮರಿಸುವಂತಾಗುತ್ತದೆ. ಆದಾಯ ಇಲ್ಲಿದ ಆಟಿ ತಿಂಗಳ, ಭೀಕರ ಮಳೆಗಾಲದ ಅಂದಿನ ಬದುಕು, ಬವಣೆಗಳು, ಆಹಾರ ಪದ್ಧತಿಗಳು, ಸಂಸ್ಕಾರ, ಸಂಪ್ರದಾಯ, ಸಂಸ್ಕೃತಿಯನ್ನು ತಿಳಿಯಲು ಕಾರ್ಯಕ್ರಮ ಅವಕಾಶ ಎಂದು ನುಡಿದರು.
ಪ್ರಾರಂಭದಲ್ಲಿ ಪ್ರಿಯಾ ಕರ್ಕೇರ ಅವರು ಪ್ರಾರ್ಥನೆಗೈದರು. ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಸುಧೀರ್‌ ಸಾಲ್ಯಾನ್‌, ವನಿತಾ ಕರ್ಕೇರ, ಭೋಜ ಕೋಟ್ಯಾನ್‌ ಅತಿಥಿಗಳು ಹಾಗೂ ಸಮ್ಮಾನಿತರನ್ನು ಪರಿಚಯಿಸಿದರು. ಎಸ್‌ಎಸ್‌ಸಿ, ಎಚ್‌ಎಸ್‌ಸಿ, ಪದವಿ ಹಾಗೂ ತಾಂತ್ರಿಕ ಶಿಕ್ಷಣದಲ್ಲಿ ಅತ್ಯುತ್ತಮ ಅಂಕದೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅತಿಥಿಗಳನ್ನು ಸಂಘದ ಪದಾಧಿಕಾರಿಗಳು ಪುಷ್ಪಗುತ್ಛ ಸ್ಮರಣಿಕೆಯನ್ನಿತ್ತು ಗೌರವಿ
ಸಿದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು. ಅತಿಥಿ ಗಳಾದ ಒ. ಪಿ. ಪೂಜಾರಿ, ಕೆ. ಟಿ. ಬಂಗೇರ ಹಾಗೂ ದಯಾನಂದ ಕುಂದರ್‌ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ನೆನಪಿನ ಕಾಣಿಕೆಯನ್ನಿತ್ತು ಸಮ್ಮಾನಿಸಲಾಯಿತು.

Advertisement

ಗೌರವ ಕೋಶಾಧಿಕಾರಿ ರಾಜ್‌ ಕರ್ಕೇರ, ಗೌರವ ಕಾರ್ಯದರ್ಶಿ ಶ್ರೀಪತಿ ಸುವರ್ಣ, ಗೌರವಾಧ್ಯಕ್ಷ ರಾಘು ಎ. ಸುವರ್ಣ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತ್ನಾ ಕರ್ಕೇರ ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಸದಸ್ಯೆಯರು ಆಟಿ ತಿಂಗಳ ವಿಶೇಷತೆಯನ್ನು ಬಿಂಬಿಸುವ ವಿವಿಧ ಖಾದ್ಯಗಳನ್ನು ಪ್ರದರ್ಶಿಸಿದರು. ಯಶೋಧರ ಕೋಟ್ಯಾನ್‌, ಮೋಹನ್‌ ಪುತ್ರನ್‌ ಹಾಗೂ ಸರ್ವ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಮೋಹಿನಿ ಎಸ್‌. ಮಲ್ಪೆ ಕಾರ್ಯಕ್ರಮ ನಿರ್ವಹಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next