ತುಮಕೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧೆ ಮಾಡುವುದಕ್ಕಿಂತ ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರವೇ ಸೇಫೆಸ್ಟ್ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿ, ಹಾಲಿ ಶಾಸಕ ಯತೀಂದ್ರ ಅವರಿಗೆ ಬೇರೆ ಅವಕಾಶ ಕಲ್ಪಿಸಬಹುದು. ವರುಣಾನೇ ಎಲ್ಲದಕ್ಕಿಂತ ಸುರಕ್ಷಿತ ಕ್ಷೇತ್ರ ಅನ್ನೋದು ನನ್ನ ಭಾವನೆ. ಸುರಕ್ಷಿತ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುವಂತೆ ಮನವಿ ಮಾಡುತ್ತೇನೆ ಎಂದರು.
ಪರಮೇಶ್ವರ್ ಅವರನ್ನು ಸಿದ್ದರಾಮಯ್ಯ ಸೋಲಿಸಿದ್ದರು ಎಂದು ಕೋಲಾರದಲ್ಲಿ ಕರಪತ್ರ ಹಂಚುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಕಾಂಗ್ರೆಸ್‌ನ ಯಾವ ಅಭ್ಯರ್ಥಿಗೂ ವಿರೋಧ ಮಾಡಿಲ್ಲ ಎಂದು ನುಡಿದರು.
ಸಿದ್ದರಾಮಯ್ಯ ಕೋಲಾರ ಮತ್ತು ವರುಣಾ ಎರಡೂ ಕ್ಷೇತ್ರ ಬಿಟ್ಟು ಮಧುಗಿರಿಗೆ ಬರಲಿ, ಮಧುಗಿರಿ ಜನತೆ ಅವರನ್ನು ಖಂಡಿತವಾಗಿಯೂ ಗೆಲ್ಲಿಸುತ್ತಾರೆ. ತಮ್ಮ ಸ್ವಕ್ಷೇತ್ರ ಬಿಟ್ಟು ಕೊಡಲೂ ನಾನು ಸಿದ್ಧ ಎಂದು ರಾಜಣ್ಣ ತಿಳಿಸಿದರು.