Advertisement

ಕೊಹ್ಲಿ-ಅನುಷ್ಕಾಗೆ ವರುಣ್‌-ನತಾಶ ಡಿಕ್ಕಿ!

07:55 PM Jan 03, 2020 | Team Udayavani |

ಕ್ರಿಕೆಟ್‌ನಿಂದ ಸ್ವಲ್ಪ ಬಿಡುವು ಸಿಕ್ಕಿದರೂ ಸಾಕು, ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ತಮ್ಮ ಪತ್ನಿ ಅನುಷ್ಕಾ ಶರ್ಮರನ್ನು ಕರೆದುಕೊಂಡು ಯಾವುದಾದರೂ ಪ್ರಕೃತಿರಮ್ಯ ತಾಣಕ್ಕೆ ತೆರಳುತ್ತಾರೆ. ಅಲ್ಲಿ ವಿಹರಿಸುತ್ತ ಒಂದು ಸೆಲ್ಫಿ ಹೊಡೆದು ಸಾಮಾಜಿಕ ತಾಣಗಳಿಗೆ ಹಾಕಿ ಸುದ್ದಿ ಮಾಡುತ್ತಾರೆ. ಅಂತಹ ಎಲ್ಲ ಹೊತ್ತಿನಲ್ಲೂ ಅನುಷ್ಕಾ ಅವರಿಗೆ ಜೊತೆಯಾಗಿರುತ್ತಾರೆ. ಬಹುಶಃ ಕೊಹ್ಲಿ ಇಂತಹ ಪ್ರವಾಸಗಳಿಗೆ ಪತ್ನಿ ಅನುಷ್ಕಾರನ್ನು ಬಿಟ್ಟು ಹೋಗಿದ್ದೇ ಇಲ್ಲ ಎನ್ನಬಹುದು. ಅಂತಹದ್ದೇ ಒಂದು ಸಂದರ್ಭ. ಕೊಹ್ಲಿ ಇತ್ತೀಚೆಗೆ ಅನುಷ್ಕಾ ಜೊತೆ ಸ್ವಿಜರ್ಲೆಂಡ್‌ಗೆ ತೆರಳಿದ್ದಾರೆ. ಅದೇ ಜಾಗಕ್ಕೆ ಅದೇ ಹೊತ್ತಿನಲ್ಲಿ ಬಾಲಿವುಡ್‌ ನಟ ವರುಣ್‌ ಧವನ್‌ ತಮ್ಮ ಗೆಳತಿ ನತಾಶ ದಲಾಲ್‌ ಜೊತೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳಿಗೆ ಇಮ್ಮಡಿ ಖುಷಿ. ಪೂರ್ಣ ತಾರಾ ಪ್ಯಾಕೇಜ್‌ನೊಂದಿಗೆ ಕೊಹ್ಲಿ ಒಂದು ಚಿತ್ರವನ್ನು ಪ್ರಕಟಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next