Advertisement

ವರುಣ್ ಧವನ್ ಅಭಿನಯದ ‘ಭೇಡಿಯಾ’ಮೊದಲ ದಿನ ಗಳಿಸಿದ್ದೆಷ್ಟು?

03:41 PM Nov 26, 2022 | Team Udayavani |

ಮುಂಬಯಿ : ವರುಣ್ ಧವನ್ ಅಭಿನಯದ ಹಿಂದಿ ಚಿತ್ರ ‘ಭೇಡಿಯಾ’ ತನ್ನ ಮೊದಲ ದಿನದಂದು ವಿಶ್ವದಾದ್ಯಂತ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ 12 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದುನಿರ್ಮಾಪಕರು ಶನಿವಾರ ತಿಳಿಸಿದ್ದಾರೆ.

Advertisement

“ಸ್ತ್ರೀ” ಖ್ಯಾತಿಯ ಅಮರ್ ಕೌಶಿಕ್ ನಿರ್ದೇಶನದ ಹಾರರ್ ಕಾಮಿಡಿ ಚಿತ್ರ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.ಪತ್ರಿಕಾ ಟಿಪ್ಪಣಿಯಲ್ಲಿ, ಪ್ರೊಡಕ್ಷನ್ ಬ್ಯಾನರ್‌ಗಳಾದ ಜಿಯೋ ಸ್ಟುಡಿಯೋಸ್ ಮತ್ತು ಮ್ಯಾಡಾಕ್ ಫಿಲ್ಮ್ಸ್ ಚಿತ್ರದ ಮೊದಲ ದಿನದ ಗಳಿಕೆಯನ್ನು ಹಂಚಿಕೊಂಡಿವೆ.

“ಭೇಡಿಯಾ ಮೊದಲ ದಿನವಾದ ಶುಕ್ರವಾರ ವಿಶ್ವಾದ್ಯಂತ 12.06 ಕೋಟಿ ರೂ.ಗಳ ಒಟ್ಟು ಬಾಕ್ಸ್ ಆಫೀಸ್‌ ಗಳಿಕೆ ಕಂಡಿದೆ. ಶುಕ್ರವಾರ ಸಂಜೆಯ ಹೊತ್ತಿಗೆ ಚಲನಚಿತ್ರವು ಗಣನೀಯ ಪ್ರತಿಕ್ರಿಯೆ ಪಡೆದಿದೆ, ಶನಿವಾರದ ಬೆಳಗಿನ ಪ್ರದರ್ಶನಗಳೊಂದಿಗೆ ಅದ್ಭುತವಾದ ಮೇಲ್ಮುಖ ಪ್ರವೃತ್ತಿಯನ್ನು ಪ್ರದರ್ಶಿಸುತ್ತಿದೆ, ಸಕಾರಾತ್ಮಕ ವಿಮರ್ಶೆಗಳು ಮತ್ತು ಬಾಯಿಯ ಮಾತಿನ ನಡುವೆ ಶುಕ್ರವಾರ ಬೆಳಗ್ಗೆ ಸರಾಸರಿ 45 ಪ್ರತಿಶತದಷ್ಟು ಬೆಳವಣಿಗೆಯನ್ನು ತೋರಿಸಿದೆ”ಎಂದು ತಂಡ ಹೇಳಿಕೊಂಡಿದೆ.

“ಭೇಡಿಯಾ” ಭಾಸ್ಕರ್ (ವರುಣ್)ಗೆ ಪೌರಾಣಿಕ ಕಥೆಯ ತೋಳವೊಂದು ಕಚ್ಚಿದ ನಂತರ ಪ್ರತಿ ಹುಣ್ಣಿಮೆಯ ರಾತ್ರಿ ತೋಳವಾಗಿ ರೂಪಾಂತರಗೊಳ್ಳುವ ಹಾರರ್ ಕಥಾ ಹಂದರ ಹೊಂದಿದೆ.

ಕೃತಿ ಸನೋನ್, ದೀಪಕ್ ಡೊಬ್ರಿಯಾಲ್ ಮತ್ತು ಅಭಿಷೇಕ್ ಬ್ಯಾನರ್ಜಿ ಸಹ ಚಿತ್ರದಲ್ಲಿ ನಟಿಸಿದ್ದಾರೆ, ದಿನೇಶ್ ವಿಜನ್ ನಿರ್ಮಿಸಿದ್ದಾರೆ. ಇದನ್ನು ಜಿಯೋ ಸ್ಟುಡಿಯೋಸ್ ಮತ್ತು ವಿಜಾನ್ಸ್ ಮ್ಯಾಡಾಕ್ ಫಿಲ್ಮ್ಸ್ ಪ್ರಸ್ತುತಪಡಿಸುತ್ತಿವೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next