ಲಕ್ನೋ: ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಲ್ಲಿಕೆಯಾಗಿದ್ದ ಅರ್ಜಿಗಳ ಕುರಿತು ಮಂಗಳವಾರ(ಮೇ 24) ಮಧ್ಯಾಹ್ನ 2ಗಂಟೆಗೆ ಆದೇಶ ನೀಡುವುದಾಗಿ ವಾರಾಣಸಿ ಕೋರ್ಟ್ ಸೋಮವಾರ (ಮೇ 23) ತಿಳಿಸಿದ್ದು, ಆ ಬಳಿಕ ವಾದ, ಪ್ರತಿವಾದ ಆಲಿಸುವುದಾಗಿ ಹೇಳಿದೆ.
ಇದನ್ನೂ ಓದಿ:ತೈಲ ಬೆಲೆ 110 ಡಾಲರ್ ನಲ್ಲಿದ್ದರೆ ಹಣದುಬ್ಬರಕ್ಕಿಂತಲೂ ಹೆಚ್ಚು ಸಮಸ್ಯೆಯಾಗಲಿದೆ: ಸಚಿವ ಪುರಿ
ವಾರಾಣಸಿ ಕೋರ್ಟ್ ನಲ್ಲಿ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದಂತೆ ಒಟ್ಟು ಮೂರು ಅರ್ಜಿ ಸಲ್ಲಿಕೆಯಾಗಿದ್ದು, ಇದರಲ್ಲಿ ಎರಡು ಅರ್ಜಿ ಹಿಂದುಗಳದ್ದು, ಒಂದು ಮಸೀದಿ ಸಮಿತಿಯಿಂದ ಸಲ್ಲಿಕೆಯಾಗಿದೆ.
ವಾರಾಣಸಿ ಕೋರ್ಟ್ ನಾಳೆ ನೀಡಲಿರುವ ಆದೇಶದ ಮೇರೆಗೆ ಪ್ರಕರಣದ ವಿಚಾರಣೆ ಹೇಗೆ ಮುಂದುವರಿಯಲಿದೆ ಎಂಬುದು ನಿರ್ಧಾರವಾಗಲಿದೆ ಎಂದು ವರದಿ ತಿಳಿಸಿದೆ. ಸುಪ್ರೀಂಕೋರ್ಟ್ ನೀಡಿರುವ ಆದೇಶದ ಆದ್ಯತೆ ಮೇರೆಗೆ ಅರ್ಜಿಯ ವಿಚಾರಣೆ ನಡೆಸಬೇಕೆಂದು ಮುಸ್ಲಿಂ ಸಮಿತಿ ಪರ ವಕೀಲರು ವಾದ ಮಂಡಿಸಿದ್ದರು.
ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಸಮೀಕ್ಷೆ ನಡೆಸಿರುವ ಆಯೋಗದ ವರದಿಯ ಅಂಶದ ಆಧಾರದ ಮೇಲೆ ವಿಚಾರಣೆ ನಡೆಸಬೇಕೆಂದು ಹಿಂದೂ ಪರ ವಕೀಲರು ಪ್ರತಿವಾದ ಮಂಡಿಸಿರುವುದಾಗಿ ವರದಿ ಹೇಳಿದೆ.
ಇಂದು ವಾದ, ಪ್ರತಿವಾದ ಆಲಿಸಿದ ನಂತರ ವಾರಾಣಸಿ ಕೋರ್ಟ್ ನ್ಯಾಯಾಧೀಶರು ಅರ್ಜಿಯ ಸಿಂಧುತ್ವದ ಆದೇಶವನ್ನು ಕಾಯ್ದಿರಿಸಿದ್ದು, ಮಂಗಳವಾರ ಈ ಕುರಿತು ಆದೇಶ ಹೊರಬೀಳಲಿದೆ. ಇದರೊಂದಿಗೆ ವಾರಾಣಸಿ ಜಿಲ್ಲಾ ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ಹೇಗೆ ನಡೆಯಲಿದೆ ಎಂಬುದು ನಿರ್ಧಾರವಾಗಲಿದೆ.