Advertisement

Varanasi; 25000 ಮಹಿಳೆಯರ ಜತೆ ಸ್ವಕ್ಷೇತ್ರದಲ್ಲಿ ಪಿಎಂ ಸಂವಾದ

12:40 AM May 21, 2024 | Team Udayavani |

ವಾರಾಣಸಿ: ಪ್ರಧಾನಿ ಮೋದಿ ತಮ್ಮ ಲೋಕಸಭಾ ಕ್ಷೇತ್ರ ವಾರಾ  ಣಾಸಿಯಲ್ಲಿ ಮಂಗಳವಾರ 25,000 ಮಹಿಳೆ ಯರೊಂದಿಗೆ ಸಂವಾದ ನಡೆಸಲಿದ್ದಾರೆ. ಮಹಿಳಾ ಮೋರ್ಚಾ ಕಾರ್ಯಕರ್ತೆಯರಿಗೆ ಪ್ರತೀ ಬೂತ್‌ನಿಂದ ಕನಿಷ್ಠ 10 ಮಹಿಳೆಯರನ್ನು ಕರೆ ತರುವಂತೆ ಸೂಚನೆ ನೀಡಲಾಗಿದೆ ಎಂದು ಬಿಜೆಪಿ ಹೇಳಿದೆ.

Advertisement

ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿರುವ ಸಂವಾದದಲ್ಲಿ, ಗೃಹಿಣಿಯರು, ವೈದ್ಯೆಯರು, ಶಿಕ್ಷಕಿಯರು, ಉದ್ಯಮ ಮಾಲಿಕರು, ವಕೀಲೆಯರು, ಕ್ರೀಡಾಪಟುಗಳೊಂದಿಗೆ ಮೋದಿ ಮಾತುಕತೆ ನಡೆಸಲಿದ್ದಾರೆ. ವಾರಾಣಸಿಯಿಂದ ಮೋದಿ ಸತತ 3ನೇ ಬಾರಿಗೆ ಆಯ್ಕೆಯಾಗಲು ಸಿದ್ಧತೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next