ಲಕ್ನೋ : ಉತ್ತರ ಪ್ರದೇಶದ ವಾರಾಣಸಿಯ ಲಾಲ್ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಸ್ಕೃತದಲ್ಲಿಯೂ ಪ್ರಕಟಣೆಗಳನ್ನು ಹೊರಡಿಸಲು ಆರಂಭಿಸಲಾಗಿದೆ.
Advertisement
ಈ ಹಿಂದೆ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಪ್ರಕಟಣೆ ಹೇಳಲಾಗುತ್ತಿದ್ದು, ಇದೀಗ ಅದರ ಸಾಲಿಗೆ ಸಂಸ್ಕೃತವನ್ನೂ ಸೇರಿಸಿಕೊಳ್ಳಲಾಗಿದೆ.
ದೇಶದಲ್ಲಿ ಸಂಸ್ಕೃತದಲ್ಲಿ ಪ್ರಕಟಣೆ ಹೊರಡಿಸುತ್ತಿರುವ ಮೊದಲ ವಿಮಾನ ನಿಲ್ದಾಣ ಇದಾಗಿದೆ.
ನಿಲ್ದಾಣದಲ್ಲಿ ಕೊರೊನಾ ಕುರಿತಾಗಿ ಸಂಸ್ಕೃತದಲ್ಲಿ ಮಾಹಿತಿ ಕೊಡುತ್ತಿರುವ ಆಡಿಯೋ ಇರುವ ವಿಡಿಯೋವನ್ನು ಏರ್ಪೋರ್ಟ್ನ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.