Advertisement

Varalakshmi Day ದೇಗುಲಗಳಲ್ಲಿ ಮಹಿಳೆಯರಿಗೆ ಅರಿಶಿನ-ಕುಂಕುಮ

10:58 PM Aug 21, 2023 | Team Udayavani |

ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಆ.25ರಂದು ಅಧಿಸೂಚಿತ ದೇವಸ್ಥಾನಗಳಿಗೆ ಆಗಮಿಸುವ ಮಹಿಳೆಯರಿಗೆ ಆಯಾ ದೇವಾಲಯಗಳಿಂದ ಗುಣಮಟ್ಟದ ಕಸ್ತೂರಿ, ಅರಿಶಿನ-ಕುಂಕುಮ ಮತ್ತು ಹಸುರು ಬಳೆ ನೀಡಬೇಕು ಎಂದು ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದೆ.

Advertisement

ಶ್ರಾವಣ ಮಾಸದ ಶುಕ್ಲಪಕ್ಷದ ಪೌರ್ಣಮಿಯ ಮೊದಲ ಶುಕ್ರವಾರ ದಂದು ವರಮಹಾಲಕ್ಷ್ಮೀ ವ್ರತವನ್ನು ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಭಾರತೀಯ ಸಂಸ್ಕೃತಿ ಪ್ರಕಾರ, ಎಲ್ಲ ಅಧಿಸೂಚಿತ ದೇವಸ್ಥಾನಗಳಲ್ಲಿ ಉತ್ತಮ ಗುಣಮಟ್ಟದ ಕಸ್ತೂರಿ, ಅರಿಶಿನ-ಕುಂಕುಮ ಹಾಗೂ ಹಸುರು ಬಳೆಗಳನ್ನು ದೇವರ ಮುಂದಿಟ್ಟು ಪೂಜಿಸಿ ಮಹಿಳೆಯರಿಗೆ ಕೊಡಲು ಸೂಚಿಸಿದೆ. ಇದನ್ನು ಸರಕಾರದ ಲಾಂಛನದೊಂದಿಗೆ ದೇವಾಲಯದ ಹೆಸರನ್ನು ಕಾಗದದ ಲಕೋಟೆ ಮೇಲೆ ಮುದ್ರಿಸಿ ನೀಡಲು ತಿಳಿಸಿದೆ. ಇದಕ್ಕೆ ತಗಲುವ ವೆಚ್ಚವನ್ನು ಆಯಾ ದೇವಸ್ಥಾನದ ನಿಧಿಯಿಂದ ನಿಯಮಾನುಸಾರ ಭರಿಸಲು ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next