ಯಲ್ಲಾಪುರ : ತಾಲೂಕಿನ ಕಳಚೆ ಕುಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದ ವಾಣಿ ಗಜಾನನ ಭಟ್ಟ ಎಸ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗ್ರಾಮೀಣ ಭಾಗದ ಮಾದರಿ ಫಲಿತಾಂಶಕ್ಕೆ ಸಾಕ್ಷಿಯಾಗಿದ್ದಾಳೆ. ಹಲವು ಸಂಕಷ್ಟಗಳ ನಡುವೆಯೂ 625 ರಲ್ಲಿ 620 ಅಂಕ ಪಡೆದಿದ್ದಾಳೆ.
ಕನ್ನಡ ಮಾಧ್ಯಮವನ್ನೇ ಆಯ್ಕೆ ಮಾಡಿಕೊಂಡು, ಕನ್ನಡ ಭಾಷೆಗೆ 125,ಇಂಗ್ಲೀಷ್ ಭಾಷೆಗೆ 99 ,ಹಿಂದಿ ಭಾಷೆಗೆ 100 ,ಗಣಿತ 96,ವಿಜ್ಞಾನ ವಿಷಯಕ್ಕೆ100, ಸಮಾಜ ವಿಜ್ಞಾನ 100 ಅಂಕ ಗಳಿಸುವ ಮೂಲಕ ಕಳಚೆ ಸರ್ಕಾರಿ ಪ್ರೌಢಶಾಲೆಗೆ ಕೀರ್ತಿ ತಂದಿದ್ದಾಳೆ.
ಕಳೆದ ಮಳೆಗಾಲದ ಅತಿವೃಷ್ಠಿಯಿಂದ ಕಳಚೆ ಗ್ರಾಮವು ಗುಡ್ಡ ಕುಸಿತವಾಗಿ ತಿಂಗಳುಗಟ್ಟಲೆ ಪ್ರೌಢಶಾಲೆಯು ಸ್ಥಗಿತವಾದರೂ ಎದೆಗುಂದದೇ ಆನ್ ಲೈನ್ ಕ್ಲಾಸ್ ನಲ್ಲಿ ಪರಿಶ್ರಮ ಪಟ್ಟು ಓದಿದ ಪರಿಣಾಮ ಈ ಫಲಿತಾಂಶ ನನಗೆ ಒಲಿದಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರು ಮುಖ್ಯ ಮಂತ್ರಿಯಾಗಿ ಅಧಿಕಾರವಹಿಸಿಕೊಂಡ ತಕ್ಷಣ ಕಳಚೆಗೆ ಬಂದಾಗ ಕಳಚೆಯ ಭೂಕುಸಿತದಿಂದ ತನಗಾದ ಶೈಕ್ಷಣಿಕ ತೊಂದರೆಯನ್ನು ಕಣ್ಣೀರು ಹಾಕಿ ಅವರ ಬಳಿ ವಿವರಿಸಿದಾಗ ಬೆನ್ನುತಟ್ಟಿ ಧೈರ್ಯ ತುಂಬಿದ್ದರು. ಎಂದು ಆಕೆ ಕಳೆದ ಮಳೆಗಾಲದ ಕಳಚೆ ಭೂಕುಸಿತದ ಅವಘಡವನ್ನು ನೆನಪಿಸಿಕೊಂಡಿದ್ದಾಳೆ.
Related Articles
ಇದನ್ನೂ ಓದಿ : ಎಸ್ಎಸ್ಎಲ್ ಸಿ ಫಲಿತಾಂಶ: ಕುಮಟಾ ತಾಲೂಕಿನ ಮೂವರು ವಿದ್ಯಾರ್ಥಿಗಳು ಟಾಪರ್
ಸಚಿವ ಹೆಬ್ಬಾರ್ ಅಭಿನಂದನೆ
ಫಲಿತಾಂಶದಲ್ಲಿ 625 ಕ್ಕೆ 625 ಅಂಕಗಳನ್ನು ಪಡೆದಿರುವ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಾದ ಚಿರಾಗ್ ನಾಯ್ಕ, ಶರ್ಮಿನಾ ಶೇಖ್, ಕನ್ನಿಕಾಪರಮೇಶ್ವರಿ ಹೆಗಡೆ, ಮೇಘನಾ ಭಟ್, ಕಾರ್ತಿಕ್ ಭಟ್, ದೀಕ್ಷಾ ನಾಯ್ಕ, ತುಷಾರ್ ಶಾನಭಾಗ ಅವರನ್ನು ಸಚಿವ ಶಿವರಾಮ ಹೆಬ್ಬಾರ್ ಅಭಿನಂದಿಸಿದ್ದಾರೆ.
ನನ್ನ ಮತಕ್ಷೇತ್ರದ ಬಿಸ್ಲಕೊಪ್ಪ ಗ್ರಾಮದ ಕುಮಾರಿ ಕನ್ನಿಕಾಪರಮೇಶ್ವರಿ ಹೆಗಡೆ 625 ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು ತುಂಬ ಸಂತೋಷ ನೀಡಿದೆ.
ಅಭೂತಪೂರ್ವ ಸಾಧನೆಯ ಹಿಂದೆ ಬೆನ್ನೆಲುಬಾಗಿ ನಿಂತು ನೈತಿಕ ಸ್ಥೈರ್ಯ ತುಂಬಿದ ಪಾಲಕರಿಗೆ, ಶಿಕ್ಷಕವೃಂದವನ್ನು ಅಭಿನಂದಿಸಿದರು.