Advertisement

ವಂದೇ ಭಾರತ್‌ ರೈಲು ಸೂಪರ್‌ ಹಿಟ್‌

09:37 AM Nov 22, 2019 | Team Udayavani |

ಹೊಸದಿಲ್ಲಿ: ದೇಶದಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಸೆಮಿ ಹೈಸ್ಪೀಡ್‌ ರೈಲು ವಂದೇ ಭಾರತ್‌ ರೈಲು ಸೂಪರ್‌ಹಿಟ್‌ ಆಗಿದೆ .

Advertisement

ವಿಶ್ವದರ್ಜೆಯ ರೈಲು ಯಾನವನ್ನು ಪರಿಚಯಿಸುವ ಉದ್ದೇಶದಿಂದ ಕೇಂದ್ರ ಸರಕಾರ ಈ ರೈಲುಗಳನ್ನು ಆರಂಭದಲ್ಲಿ ಹೊಸದಿಲ್ಲಿ-ವಾರಾಣಸಿ, ಹೊಸದಿಲ್ಲಿ-ಕಟ್ರಾ ನಡುವೆ ಆರಂಭಿಸಿದ್ದು, ಜನರಿಂದ ತುಂಬಿರುತ್ತದೆ ಎಂದು ರೈಲ್ವೇ ಸಚಿವ ಪಿಯೂಷ್‌ ಗೋಯೆಲ್‌ ಅವರು ಸಂಸತ್ತಿಗೆ ತಿಳಿಸಿದ್ದಾರೆ.

ಲಿಖೀತ ರೂಪದ ಉತ್ತರದಲ್ಲಿ ತಿಳಿಸಿರುವ ಅವರು, ಎಂಜಿನ್‌ ರಹಿತ, ಸೆಲ್ಫ್ ಪ್ರೊಫೆಲ್‌ ವ್ಯವಸ್ಥೆಯ ಈ ರೈಲುಗಳು ಯಶಸ್ವಿಯಾಗಿವೆ. ದಿಲ್ಲಿ-ವಾರಾಣಸಿ ಮಧ್ಯೆ ಸಂಚರಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ನಲ್ಲಿ ಶೇ.115.71 ಪ್ರಯಾಣಿಕರ ಇರುವಿಕೆ ಇದ್ದರೆ, ವೈಷ್ಣೋದೇವಿಗೆ ಸಂಪರ್ಕ ಕಲ್ಪಿಸುವ ದಿಲ್ಲಿ-ಕಟ್ರಾ ವಂದೇಭಾರತ್‌ ಎಕ್ಸ್‌ಪ್ರೆಸ್‌ನಲ್ಲಿ ಶೇ.99.27ರಷ್ಟು ಪ್ರಯಾಣಿಕರ ಇರುವಿಕೆ ಇದೆ ಎಂದು ಹೇಳಿದ್ದಾರೆ.

ವಾರಾಣಸಿಗೆ ವಂದೇಭಾರತ್‌ ಎಕ್ಸ್‌ಪ್ರೆಸ್‌ ವಾರದ ಐದು ದಿನಗಳಲ್ಲಿ ಸಂಚರಿಸುತ್ತದೆ. ಕಟ್ರಾಕ್ಕೆ ವಾರದ ಎಲ್ಲ ದಿನವೂ ಸಂಚರಿಸುತ್ತದೆ. ಅತಿ ಕಡಿಮೆ ನಿಲುಗಡೆ ಹೊಂದಿರುವ ಈ ರೈಲುಗಳು ಪ್ರತಿ ನಿಲ್ದಾಣದಲ್ಲಿ ಗರಿಷ್ಠ 2 ನಿಮಿಷಗಳ ಕಾಲ ನಿಲ್ಲುತ್ತದೆ.

ಐರೋಪ್ಯ ಶೈಲಿಯ ಸೀಟುಗಳು, ವೈಫೈ, ಅತ್ಯಾಧುನಿಕ ಶೌಚಾಲಯಗಳು, ಎಲ್‌ಇಡಿ ಲೈಟಿಂಗ್‌, ಅಟೋಮ್ಯಾಟಿಕ್‌ ಡೋರ್‌ಗಳು, ಟೀವಿ ಸೌಲಭ್ಯ, ಉತ್ತಮ ಆಹಾರ, ಪ್ರಯಾಣಿಕರಿಗೆ ದೃಶ್ಯ-ಶ್ರಾವ್ಯ ಸೂಚನೆಗಳು ಇದರ ವಿಶೇಷ.

Advertisement
Advertisement

Udayavani is now on Telegram. Click here to join our channel and stay updated with the latest news.

Next