ಸಿದ್ದಾಪುರ : ವಂಡಾರು ಗ್ರಾಮದ ಕಟ್ಟೆಕೊಡ್ಲು ಅನಿತಾ ಅವರನ್ನು ಹತ್ಯೆಗೈದ ಆರೋಪಿ ಸುರೇಂದ್ರ ನಾಯ್ಕನನ್ನು ಶಂಕರನಾರಾಯಣ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಆರೋಪಿ ಸುರೇಂದ್ರ ನಾಯ್ಕ ತನ್ನ ಪತ್ನಿ ಅನಿತಾ ಅವರನ್ನು ಮೇ.17ರ ರಾತ್ರಿ ಹಲ್ಲೆಗೈದು ಕೊಲೆ ಮಾಡಿ, ಮನೆ ಬಳಿ ಕೊಟ್ಟಿಗೆಯ ಹತ್ತಿರ ಬಿಸಾಡಿ ಪರಾರಿಯಾಗಿದ್ದನು. ಕುಂದಾಪುರ ವೃತ್ತ ನೀರೀಕ್ಷಕ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ ಶಂಕರನಾರಾಯಣ ಪಿಎಸ್‌ಐ ಶ್ರೀಧರ್ ನಾಯ್ಕ ಅವರ ತಂಡ ಆರೋಪಿ ಸುರೇಂದ್ರ ನಾಯ್ಕನನ್ನು ವಂಡಾರು ಮನೆಯ ಬಳಿ ಬಂಧಿಸಿದ್ದಾರೆ.
ಆರೋಪಿ ಸುರೇಂದ್ರ ನಾಯ್ಕ ಹೊಸನಗರ ತಾಲೂಕು ಯಡೂರು ನಿವಾಸಿ ಅನಿತಾ ಅವರನ್ನು 15 ವರ್ಷದ ಹಿಂದೆ ಮದುವೆಯಾಗಿದ್ದು, ದಂಪತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳಿದ್ದಾರೆ. ಮಕ್ಕಳು ಇಬ್ಬರು ಶಾಲೆಗೆ ಹೋಗುತ್ತಿದ್ದಾರೆ. ಆರೋಪಿಯು ಪ್ರತಿನಿತ್ಯ ತನ್ನ ಹೆಂಡತಿ ಮತ್ತು ಮಕ್ಕಳಿಗೆ ವಿಪರೀತವಾಗಿ ಹೊಡೆಯುತ್ತಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ.
ಇದನ್ನೂ ಓದಿ : ನನ್ನ ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಪತ್ರ ಬರೆದು ನಾಪತ್ತೆಯಾಗಿದ್ದ ಎಂಜಿನಿಯರ್ ಪತ್ತೆ!