Advertisement
ಕಾರ್ಯಕ್ರಮ ಮುಗಿದಾಗಿದೆ ಇನ್ನೇಕೆ ಸಚಿವರು, ಶಾಸಕರು ಸದನಕ್ಕೆ ಬರುತ್ತಾರೆ? ಗುರುವಾರ ಭೋಜನಾನಂತರ ಕಲಾಪ ಆರಂಭವಾಗಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ತಾವು ಮಾತನಾಡುವಾಗ ಸಚಿವರು ಮತ್ತು ಅಧಿಕಾರಿಗಳು ಸದನದಲ್ಲಿ ಇಲ್ಲದೇ ಇರುವುದನ್ನು ಗಮನಿಸಿ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಆಕ್ಷೇಪ ವ್ಯಕ್ತಪಡಿಸಿದಾಗ ಜೆಡಿಎಸ್ ಉಪನಾಯಕ ವೈ.ಎಸ್.ವಿ.ದತ್ತ ಪ್ರತಿಕ್ರಿಯಿಸಿದ್ದು ಹೀಗೆ. ಮಂತ್ರಿಗಳೂ ಇಲ್ಲ. ಅಧಿಕಾರಿಗಳೂ ಇಲ್ಲ. ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ ಯಾರಿಗೆ ನಾವು ಮಾತನಾಡಬೇಕು? ಸಚಿವ ಕಾಗೋಡು ತಿಮ್ಮಪ್ಪ ಅವರು ವಯಸ್ಸಾದರೂ ಕ್ರಿಯಾಶೀಲರಾಗಿ ಇಡೀ ದಿನ ಸದನದಲ್ಲಿ ಇರುತ್ತಾರೆ. ಇತರ ಸಚಿವರಿಗೆ ಜವಾಬ್ದಾರಿ ಇಲ್ಲವೇ? ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಚರ್ಚೆಗೆ ಬೆಲೆ ಇಲ್ಲವೇ ಎಂದು ಜಗದೀಶ ಶೆಟ್ಟರ್ ಪ್ರಶ್ನಿಸಿದರು. ಇದು ವಂದನಾ ನಿರ್ಣಯದಂತೆ ಕಾಣಿಸುತ್ತಿಲ್ಲ.
ಎದ್ದುಹೋಗಿದ್ದಾರೆ. ವಂದನಾರ್ಪಣೆ ಮಾಡಬೇಕು ಅಷ್ಟೆ ಎಂದು ವೈ.ಎಸ್.ವಿ.ದತ್ತ ಹೇಳಿದರು.