ಮಂಡ್ಯ: ಮುಂದಿನ ಪೀಳಿಗೆ ಭವಿಷ್ಯದ ದೃಷ್ಟಿ ಯಿಂದ ಪ್ರಕೃತಿ ಉಳಿಸಿ ಬೆಳೆಸಬೇಕೇ ವಿನಃ ವ್ಯವಹಾರಿಕ ಕಾರಣಕ್ಕಾಗಿ ಪ್ರಾಕೃತಿಕ ನಾಶಕ್ಕೆ ಮುಂ ದಾಗಬಾರದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಶಿವಣ್ಣತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾಮಾಜಿಕ ಅರಣ್ಯ ವಿಭಾಗ, ಹನಕೆರೆ ಎಂ. ಶ್ರೀನಿವಾಸ ಪ್ರತಿಷ್ಠಾನ, ಚಂದಗಾಲು ಗ್ರಾಮ ಪಂಚಾಯಿತಿ, ಅನನ್ಯ ಸಾಮಾಜಿಕ ಸಾಂಸ್ಕೃತಿಕ ಕಲ್ಯಾಣ ಟ್ರಸ್ಟ್ ವತಿಯಿಂದ ತಾಲೂಕಿನ ದೊಡ್ಡಕೊತ್ತಗೆರೆ ಗ್ರಾಮದಲ್ಲಿ ನಡೆದ ವನಸಿರಿ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಅವರು ಮಾತನಾಡಿದರು. ಇಂದು ನಾವು ಪ್ರಕೃತಿಯನ್ನು ಎಷ್ಟು ನಾಶ ಮಾಡಿದ್ದೇವೆ ಎಂಬುದನ್ನು ಅರಿತುಕೊಳ್ಳ ಬೇಕು. ಮುಂದಿನ ಪೀಳಿಗೆಗೆ ಅರಣ್ಯವೇ ಇಲ್ಲದಂಥ ವಾತಾವರಣ ಸೃಷ್ಟಿಯಾಗಲಿದೆ ಎಂದು ಎಚ್ಚರಿಸಿದರು.
ಮಕ್ಕಳಿಗೆ ಪ್ರಕೃತಿ ಅರಿವು ಅಗತ್ಯ: ಮಕ್ಕಳಿಗೆ ಪ್ರಕೃತಿ ಬಗ್ಗೆ ತಿಳಿಸಿಕೊಡುವ ಅಗತ್ಯತೆ ಇದೆ. ಪ್ರತಿಯೊಂದು ಮಗುವಿಗೂ ಒಂದೊಂದು ಗಿಡನೆಟ್ಟು ಬೆಳೆಸಲು ಪ್ರೇರೇಪಿ ಸಬೇಕು. ಮರ ಬೆಳೆಸುವ ಮಗುವಿಗೆ ಪ್ರಕೃತಿ ಆರಾಧಿಸುವುದನ್ನು ಕಲಿಯುತ್ತಾ ಹೋಗುತ್ತದೆ. ಆಗ ಪ್ರಕೃತಿ ನಾಶಕ್ಕೆ ಮುಂದಾಗುವುದಿಲ್ಲ. ಈ ಬಗ್ಗೆ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರತೀ ಗ್ರಾಮಗಳಲ್ಲೂ ಹಸಿರೀಕರಣ ಮಾಡಬೇಕು. ಆಗ ಎಲ್ಲರೂ ಊರಿನ ಬಗ್ಗೆ ಹೆಮ್ಮೆ ಪಡುವ ವಾತಾವರಣ ಇರುತ್ತದೆ ಎಂದು ಹೇಳಿದರು. ಪ್ರಕೃತಿ ವಿಕೋಪ: ಉಪ ಅರಣ್ಯ ಸಂರಕ್ಷ ಣಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಅಭಿವೃದ್ಧಿ ಹೆಸರಿನಲ್ಲಿನಡೆಯುತ್ತಿರುವ ಪ್ರಕೃತಿ ನಾಶದಿಂದಾಗಿ ಇಂದು ದೇವರ ನಾಡು, ಸ್ವರ್ಗದ ಬೀಡು ಎಂದು ಕರೆಸಿಕೊಳ್ಳುತ್ತಿದ್ದ ಕೇರಳ ಮತ್ತು ಕೊಡಗಿನ ಪರಿಸ್ಥಿತಿ ಏನಾಗಿದೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕಿದೆ ಎಂದು ತಿಳಿಸಿದರು.
ಕೇರಳ ಮತ್ತು ಕೊಡಗಿನಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಮರಗಳ ಹನನದಿಂದಾಗಿ ಪ್ರಕೃತಿ ವಿಕೋಪಗಳು ಎದುರಾಗುತ್ತಿವೆ. ಮಾನವ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿ ಹಾಳು ಮಾಡುತ್ತಿರುವುದು ಇಂಥ ಘಟನೆಗಳಿಗೆ ಸಾಕ್ಷಿಯಾಗಿವೆ ಎಂದು ಹೇಳಿದರು. ಪ್ರಕೃತಿ ಎಲ್ಲಿ ಚೆನ್ನಾಗಿರುತ್ತೋ ಅಲ್ಲಿ ಎಲ್ಲವೂಉತ್ತಮವಾಗಿರುತ್ತದೆ. ಆರೋಗ್ಯ ಕರ ವಾತಾವರಣ ಇರುತ್ತೆ. ಹಿಂದೆಲ್ಲ ಪೂರ್ವಿಕರು ತಮ್ಮ ಜಮೀನುಗಳಲ್ಲಿ ಬದುವಿನ ಮೇಲೆ ಮರ ಗಿಡಗಳನ್ನು ನೆಟ್ಟು ಬೆಳೆಸುವ ಪರಿಪಾಠ ಬೆಳೆಸಿಕೊಂಡಿದ್ದರು. ಆದರೆ, ಈಗ ಬದುಗಳಲ್ಲಿ ಇರುವ ಮರಗಳನ್ನೂ ಸಹ ಕಡಿದು ಹಾಕುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಹನಕೆರೆ ಎಂ.ಶ್ರೀನಿವಾಸ್ ಪ್ರತಿಷ್ಠಾನದ ಅಧ್ಯಕ್ಷ ಕೀಲಾರ ಎಂ.ಶಿವರಾಜು, ಕಿರುತೆರೆ ಕಲಾವಿದ ವಿಶಾಲ್ ರಘು, ಮುಖಂಡ ರಾದ ರಾಮಚಂದ್ರ, ನಾಗಪ್ಪ, ಡಿ.ಪಿ. ಸ್ವಾಮಿ, ಆಡಳಿತಾಧಿಕಾರಿ ಸಿದ್ದರಾಜು, ಮುಖ್ಯ ಶಿಕ್ಷಕ ಪ್ರಸನ್ನಕುಮಾರ್, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್, ಪಿಡಿಒ ನವೀನ್‌ಕುಮಾರ್, ಅನನ್ಯ ಸಂಸ್ಥೆ ಅಧ್ಯಕ್ಷೆ ಅನುಪಮ, ತಾಳಶಾಸನ ಮೋಹನ್ ಇತರರಿದ್ದರು.