ಬಂಟ್ವಾಳ : ಪರಿಸರ ಪರ ಕಾಳಜಿಯನ್ನು ಬೆಳೆಸಿಕೊಂಡು ವನಮಹೋ ತ್ಸವದಂತಹ ಕಾರ್ಯಕ್ರಮಕ್ಕೆ ನಾವೆಲ್ಲರೂ ಪ್ರೋತ್ಸಾಹ ನೀಡಬೇಕಾಗಿದೆ. ಇಂತಹ ಕಾರ್ಯಕ್ರಮಗಳಿಂದ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಪಜೀರು ಗ್ರಾಮ ಪಂಚಾಯತ್ ಅಧ್ಯಕ್ಷ ಸೀತಾರಾಮ್ ಶೆಟ್ಟಿ ಮುಗುಳಿ ಅಭಿಪ್ರಾಯಪಟ್ಟರು.
ಅವರು ಸಂತೃಪ್ತಿ ಚಾರಿಟೆಬಲ್ ಟ್ರಸ್ಟ್ ಮಂಗಳೂರು ಇದರ ಆಶ್ರಯದಲ್ಲಿ ಪಜೀರು ಎಂಬಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲೂಕು ಪಂಚಾಯತ್ ಮಾಜಿ ಸದಸ್ಯ ಸೇಸಪ್ಪ ಟೈಲರ್, ಎಪಿಎಂಸಿ ಸದಸ್ಯ ಉಮ್ಮರ್ ಪಜೀರು, ಸಂತ ಮರಿಯಮ್ಮ ಇಗರ್ಜಿಯ ಉಪಾಧ್ಯಕ್ಷ ರೋಶನ್ ಪಜೀರು, ಸದಸ್ಯ ರಿಚರ್ಡ್, ಶ್ರೀಕೃಷ್ಣ ಭಜನ ಮಂದಿರದ ಅಧ್ಯಕ್ಷ ವಸಂತ ಜೆ., ಎಸ್‌ಕೆಎಸ್‌ಎಸ್‌ಎಫ್‌ನ ಅಧ್ಯಕ್ಷ ಮೊಯ್ದಿನ್, ಸರ್ವೋದಯ ಯುವಕ ಮಂಡಲದ ಅಧ್ಯಕ್ಷ ಕಿರಣ್ ಪಜೀರು, ಪಜೀರು ಗ್ರಾಮ ಪಂಚಾಯತ್ ಸದಸ್ಯ ಇಮಿ¤ಯಾಜ್, ರಫೀಕ್, ರಹಮುತ್ತಲ್ಲಾ, ಜುಮಾ ಮಸೀದಿಯ ಆಡಳಿತ ಮಂಡಳಿಯ ಸದಸ್ಯ ಬಶೀರ್ ಪಜೀರು, ಕಾರ್ಯದರ್ಶಿ ಮಹಮ್ಮದ್ ಪಜೀರು, ಮಂಗಳೂರು ವಿವಿ ಪ್ರಾಧ್ಯಾಪಕ ಡಾ| ಬಾಲಕೃಷ್ಣ ರಾವ್, ನಿವೃತ್ತ ಮುಖ್ಯ ಶಿಕ್ಷಕ ಗಂಗಾಧರ ಮಾಸ್ಟರ್, ತಾರಾನಾಥ ವರ್ಮ, ಜಯಾನಂದ, ಸಂತೃಪ್ತಿ
ಚಾರಿಟೆ ಬಲ್ ಟ್ರಸ್ಟ್‌ನ ಟ್ರಸ್ಟಿ ಸತೀಶ್ ಪಜೀರು ಮತ್ತಿತರರು ಉಪಸ್ಥಿತರಿದ್ದರು.
ಸಂತೃಪ್ತಿ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ನಿರ್ಮಲಾ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಟ್ರಸ್ಟ್‌ನ ಅಧ್ಯಕ್ಷ ರೋಹಿತ್ ಪಜೀರು ವಂದಿಸಿದರು.