ಬೆಳ್ತಂಗಡಿ : ವ್ಯಕ್ತಿಗೆ ಕೊಡುವ ಗೌರವ ಅದು ಸಮಾಜಕ್ಕೆ ಕೊಡುವ ಗೌರವವಾಗಿದೆ. ಕೃಷಿ ಮತ್ತು ಋಷಿ ಪರಂಪರೆಯನ್ನು ಗೌರವಿಸುವ ದೇಶ ನಮ್ಮದು. ಅಂತಹ ರಾಮರಾಜ್ಯದ ಕಲ್ಪನೆಯನ್ನು ಕೊಟ್ಟವರು ಮಹರ್ಷಿ ವಾಲ್ಮೀಕಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ
ಮಠಂದೂರು ಹೇಳಿದರು.
ಅವರು ಗುರುವಾರ ಬೆಳ್ತಂಗಡಿ ಸುವರ್ಣ ಆರ್ಕೆಡ್ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಎಸ್.ಟಿ ಮೋರ್ಚಾ ಬೆಳ್ತಂಗಡಿ ಮಂಡಲ ಇದರ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಸಮ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಾಲ್ಮೀಕಿಯವರು ಬೆಳೆದು ಬಂದ ರೀತಿ ಮತ್ತು ಅವರ ಸಂಸ್ಕೃತಿಯನ್ನು ಅನುಸರಿಸಬೇಕಾಗಿದೆ ಎಂದವರು ಹೇಳಿದರು.ಬಿಜೆಪಿ ವಿಭಾಗ ಸಹಪ್ರಭಾರಿ ಪ್ರತಾಪ ಸಿಂಹ ನಾಯಕ್,ಬೆಳ್ತಂಗಡಿ ಮಂಡಲ ಪ್ರಭಾರಿ ಕ್ಯಾ| ಬ್ರಿಜೇಶ್ ಚೌಟ ಮಾತನಾಡಿದರು.
ಬೆಳ್ತಂಗಡಿ ತಾಲೂಕು ಬಿಜೆಪಿ ಅಧ್ಯಕ್ಷ ರಂಜನ್ ಜಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಮಾಚಾರು ಗೋಪಾಲ ನಾೖಕ, ಜಿನ್ನಪ್ಪ ಮಲೆಕುಡಿಯ ನಾವೂರು, ಸರಸ್ವತಿ ಮಾಲಾಡಿ ದೀಪ ಬೆಳಗಿದರು.ಕೃಷಿ ಮೇಲ್ವಿಚಾರಕ ಉಮೇಶ್ ನಾಯ್ಕ ಕೇಳ್ದಡ್ಕ ಪ್ರಧಾನ ಭಾಷಣ ಮಾಡಿದರು.
ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಹರೀಶ್ ಪೂಂಜಾ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಭಾಗೀರಥಿ ಮುರುಳ್ಯ, ಶಾರದಾ ಆರ್. ರೈ, ಜಿಲ್ಲಾ ಎಸ್.ಟಿ. ಮೋರ್ಚಾ ಪ್ರಭಾರಿ ಕೊರಗಪ್ಪ ನಾಯ್ಕ, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಬಿ.ಎಸ್, ಪ್ರಭಾಕರ್ ಶೆಟ್ಟಿ ಉಪ್ಪಡ್ಕ, ಎಸ್.ಟಿ
ಮೋರ್ಚಾ ಪ್ರಭಾರಿ ಲಿಂಗಪ್ಪ ನಾಯ್ಕ, ಎಸ್.ಟಿ ಮೋರ್ಚಾ ಅಧ್ಯಕ್ಷ ಆನಂದ ನಾಯ್ಕ, ಎಸ್.ಟಿ ಮೊರ್ಚಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ನಾಯ್ಕ, ತಾ.ಪಂ ಉಪಾಧ್ಯಕ್ಷೆ ವೇದಾವತಿ, ತಾ.ಪಂ ಸ್ಥಾಯಿ ಸಮಿತಿ ಉಪಾಧ್ಯಕ್ಷ ಸುದೀರ್ ಸುವರ್ಣ, ತಾ.ಪಂ ಸದಸ್ಯೆ ಲೀಲಾವತಿ, ಜಿ.ಪಂ ಸದಸ್ಯೆ ಸೌಮ್ಯಲತಾ, ನ.ಪಂ. ಸದಸ್ಯೆ ಲಲಿತಾ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ 100ಮಂದಿ ಸಾಧಕರನ್ನು ಸಮ್ಮಾನಿಸಲಾಯಿತು. ಕೆ. ಕೊರಗಪ್ಪ ನಾಯ್ಕ ಸ್ವಾಗತಿಸಿ, ಲಿಂಗಪ್ಪ ನಾಯ್ಕ ವಂದಿಸಿದರು. ರಾಜೇಶ್ ಪೆರ್ಮುಡ, ನಾರಾಯಣ ಆಚಾರ್ ಸಮ್ಮಾನಿತರ ಪಟ್ಟಿ ವಾಚಿಸಿ ತಾ.ಪಂ. ಸದಸ್ಯ ವಿಜಯ್ ಗೌಡ ಕಾರ್ಯಕ್ರಮ ನಿರೂಪಿಸಿದರು.