Advertisement

ಕಣಿವೆಯ ಊರಿನಲ್ಲಿ 

03:45 AM Feb 19, 2017 | Harsha Rao |

ನೀರು, ಪರ್ವತ, ಹೂವಿನ ರಾಶಿ ರಾಶಿ ಸಾಲು, ರಾಕ್‌ ಕ್ಲೈಮಿಂಗ್‌, ಪರ್ವತದ ಸೆರಗಿನ ಮಂಜಿನ ಕಣಿವೆಯಲ್ಲಿ ನುಸುಳುತ್ತ ಸಾಗುವ ಕಾಲ್ದಾರಿಯ ಮಾರ್ಗ- ಹೀಗೆ ಎಲ್ಲದರ ಮಿಶ್ರಣ ಮತ್ತು ಕೊನೆಯಲ್ಲಿ ಮೋಜು. ಯಾರಿಗುಂಟು ಯಾರಿಗಿಲ್ಲ. ಹತ್ತಿ ಹೋಗಿಬಿಟ್ಟರೆ ಮತ್ತೆ ಕೆಳಗಿಳಿಯುವ ಪ್ರಮೇಯವೇ ಬೇಡುವುದಿಲ್ಲ ಈ ಪರ್ವತ ಶ್ರೇಣಿ. ಇಂತಹ¨ªೊಂದು ಕೊಂಬೋ ಪ್ಯಾಕೇಜ್‌ ಚಾರಣ ಪ್ರವಾಸಿಗರಿಗೆ ಯಾವಾಗಲೂ ಪ್ರಿಯವೇ. ಹಾಗೆ ಸಕಲ ರೀತಿಯ ಅನುಭವಕ್ಕೆ ಪಕ್ಕಾಗುವವರಿಗೆ ಪ್ರಸ್ತುತ ಮನುಷ್ಯರ ಹಾವಳಿಗಳಿಂದ ದೂರವಿರುವ ಝುಕೋ (Dzukou) ವ್ಯಾಲಿ ಹೇಳಿಮಾಡಿಸಿದ ತಾಣ. 

Advertisement

ಮಣಿಪುರ ಮತ್ತು ನಾಗಾಲ್ಯಾಂಡಿನ ಸರಹದ್ದುಗಳನ್ನು ಹಂಚಿಕೊಂಡು ಎರಡೂವರೆ ಸಾವಿರ ಅಡಿ ಎತ್ತರದಲ್ಲಿ ಮುಖಮೇಲಕ್ಕೆ ಮಾಡಿ ನಿಂತಿರುವ ಝುಕೋ ವ್ಯಾಲಿ, ಎರಡೂ ಕಡೆಯಲ್ಲಿ ಹತ್ತಾರು ಕಿ.ಮೀ. ಅಗಲಕ್ಕೂ ಚಾಚಿ ನಿಂತಿರುವ ನೈಜ ಅರ್ಥದಲ್ಲಿ ಹಸಿರು ಕಣಿವೆ ಎಂದೇ ಪ್ರಸಿದ್ಧಿ. ಕಾರಣ ಉಳಿದ ಹೊತ್ತಿನಲ್ಲಿ ಇದಕ್ಕೆ ಹಿಮಾವೃತದ ಆಸರೆ ಇದ್ದರೆ, ನಂತರದಲ್ಲಿ ಇದರ ಸೆರಗಿನಲ್ಲಿ ಹರಿಯುತ್ತಲೇ ಇರುವ ನೀರಿನ ಝರಿಗಳು ಇದನ್ನು ಹಸಿಯಾಗಿಯೂ ಹಸಿರಾಗಿಯೂ ಇರಿಸುತ್ತದೆ. ಝುಕೋ ಮತ್ತು ಝಾಪು ನದಿಗಳು ನಿರಂತರ ಹರಿಯುತ್ತವೆ ಈ ಕಣಿವೆಯಲ್ಲಿ. ಹಾಗಾಗಿ ಇಲ್ಲಿ ಚಾರಣ ಮತ್ತು ಒಂದು ಹಂತದವರೆಗೆ ಕುಟುಂಬ ಪ್ರವಾಸ ಕೈಗೊಳ್ಳುವವರಿಗೆ ಝುಕೋ ವ್ಯಾಲಿ ಹಾಟ್‌ ಫೇವರಿಟ್‌. 
ನಾಗಾಲ್ಯಾಂಡ್‌ನ‌ ಕೊಹಿಮಾದಿಂದ ಕೇವಲ 30 ಕಿ.ಮೀ. ದೂರದಲ್ಲಿದೆ ವಿಸ್ವೇಮ್‌ ಅಥವಾ ಜಖಾ¾ ಹಳ್ಳಿ. ನೇರವಾದ ಬಸ್‌ ಸೌಕರ್ಯವಿದೆ. ಹೇಗೆ ಹೋದರೂ 45 ನಿಮಿಷದ ಹೊರಳು ದಾರಿ. ಇಲ್ಲಿಂದಲೇ ಪೊರ್ಟರ್‌, ಆಹಾರ ಇತ್ಯಾದಿ ಝುಕೋ ವ್ಯಾಲಿಗೆ ತಲುಪುವ ಮೂಲಭೂತ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲಿಗೆ ಪ್ರವೇಶಿಸಲು ಝುಕೋ ವ್ಯಾಲಿ ಪಾಸುಗಳನ್ನು ಪಡೆಯಬೇಕು. ಪ್ರತಿಯೊಬ್ಬರಿಗೆ ರೂ. 30 ದರ ವಿಧಿಸುವ ಇದನ್ನು ಕೊಹಿಮ ಅಥವಾ ಕೊಲ್ಕತಾದ ನಾಗಲ್ಯಾಂಡ್‌ ಭವನದಲ್ಲಿ ಪಡೆಯಬಹುದು. 

ಹತ್ತಿರದ ರೈಲು ನಿಲ್ದಾಣ ಧಿಮಪುರ್‌. ಇಲ್ಲಿಗೆ ಎಲ್ಲ ಕಡೆಯಿಂದಲೂ ನೇರ ಸಂಪರ್ಕವಿದ್ದು, ಧಿಮಪುರದಿಂದ ಕೋಹಿಮಾವರೆಗೆ (ಸುಮಾರು 70 ಕಿ.ಮೀ.) ಸಾಕಷ್ಟು ಖಾಸಗಿ ಮತ್ತು ನಾಗಾಲ್ಯಾಂಡ್‌ ಸರಕಾರಿ ಸಾರಿಗೆ ವಾಹನಗಳ ಸೌಕರ್ಯವಿದೆ. (ಹೆಚ್ಚಾಗಿ ಸುಮೋ ಮಾತ್ರವೇ ಕಾಣಸಿಗುತ್ತವೆ) ಧಿಮ್‌ಪುರ್‌ದಲ್ಲಿಯೇ ಏರ್‌ಪೋರ್ಟಿದ್ದು ದೇಶದ ಎÇÉಾ ಕಡೆಯಿಂದ ಅದಕ್ಕೆ ಸಂಪರ್ಕವಿದೆ. ನಿಲ್ದಾಣದ ಹೊರಗೆ ನೇರವಾಗಿ ಕೋಹಿಮಾವರೆಗೆ ಟ್ಯಾಕ್ಸಿ ಸರ್ವೀಸುಗಳಿವೆ.

ಅದರೆ, ತುಂಬಾ ಸೌಲಭ್ಯಗಳ ಲಭ್ಯತೆ ಏನಿಲ್ಲ. ಆದಷ್ಟೂ ಕೊಹಿಮಾದಿಂದ ತುಂಬಿಸಿಕೊಂಡು ಬಂದಲ್ಲಿ ಒಳ್ಳೆಯದು. ಕೊನೆಯ ಒಂದು ಹಂತದಲ್ಲಿ ಆಹಾರ-ನೀರು ಸೇರಿದಂತೆ ಯಾವ ಪದಾರ್ಥವನ್ನೂ ಬಿಡುವುದಿಲ್ಲ. ಹಾಗಾಗಿ ಝುಕೋ ಯಾವಾಗಲೂ ಸ್ವತ್ಛ ಭಾರತವೇ. ಮೇಲಕ್ಕೆ ಹೋದ ಮೇಲೆ ಉಳಿದುಕೊಳ್ಳಲು ಕೆಲವು ಗೆಸ್ಟ್‌ ಹೌಸ್‌ ರೀತಿಯ ಸಾಧಾರಣ ಸೌಲಭ್ಯ ಇದ್ದು ಅದನ್ನೂ ಕೋಹಿಮಾದಿಂದ ಮೊದಲೇ ನಿರ್ಧರಿಸಿಕೊಂಡು ಹೋದಲ್ಲಿ ಬಹಳ ಒಳ್ಳೆಯದು. ಮರುದಿನದ ಸೂರ್ಯೋದಯ ಮತ್ತು ಮುಂಜಾನೆಯ ಟ್ರೆಕ್‌ ಇಲ್ಲಿನ ಆಕರ್ಷಣೆ ಆಗಿದ್ದರಿಂದ ಝುಕೋ ವ್ಯಾಲಿಯ ನೆತ್ತಿಯ ಹತ್ತಿರ ತಂಗುವ ಯೋಜನೆ ರೂಪಿಸುತ್ತಾರೆ.

ಇಲ್ಲಿಂದ ಸರಾಸರಿ ಹದಿನೈದು ಕಿ.ಮೀ. ನಡೆದೇ ಕ್ರಮಿಸುವ ದಾರಿ ಇದ್ದು ನಿಮ್ಮ ನಿಮ್ಮ ಕೆಪಾಸಿಟಿಗೆ ತಕ್ಕಂತೆ ಎಷ್ಟು ದೂರ ಬೇಕಿದ್ದರೂ ಹೋಗಬಹುದಾಗಿದೆ. ಕೊನೆಯ ಎರಡು ಕಿ.ಮೀ. ಕಡಿದಾದ ದಾರಿ ಇದ್ದು ಚಾರಣಿಗರು ಮಾತ್ರವೇ ಅಲ್ಲಿಯವರೆಗೂ ಹತ್ತಿ ಹೋಗುತ್ತಾರೆ. ಇದು ಸುತ್ತಮುತ್ತಲಿನ ಸಂಪೂರ್ಣ ಝುಕೋ ವ್ಯಾಲಿಯ ದರ್ಶನ ಕೊಡುವ ಅತಿ ಎತ್ತರದ ಮಾರ್ಗವಾಗಿದ್ದು ಸಾಮಾನ್ಯ ಪ್ರವಾಸಿಗರಿಗೆ ಕೊಂಚ ಕಷ್ಟವೇ ಇದು. 

Advertisement

ನವೆಂಬರ್‌ನಿಂದ ಫೆಬ್ರುವರಿವರೆಗೆ ಒಂದು ಸೀಜನ್‌ ಆದರೆ ಜೂನ್‌ನಿಂದ ಸೆಪ್ಟಂಬರ್‌ ಇನ್ನೊಂದು ಕಾಲ. ಇವೆರಡೂ ಎರಡು ವಿಭಿನ್ನ ರೀತಿಯ ಅನುಭವಕ್ಕೀಡು ಮಾಡುತ್ತವೆ. ಚಳಿಗಾಲದಲ್ಲಿ ಮಂಜಿನ ಕಣಿವೆಯಾಗಿ ಮಾರ್ಪಡುವ ಝುಕೋ ವ್ಯಾಲಿ ಜೂನ್‌ ನಂತರ ಹಿತವಾದ ಬಿಸಿಲಿನಲ್ಲಿ ಹಸಿರಾಗಿ ಕಂಗೊಳಿಸುತ್ತದೆ. ಅಲ್ಲಲ್ಲಿ ಕೆಲವು ಪರ್ವತಗಳು ಪೂರ್ತಿ ಸಣ್ಣ ಸಣ್ಣ ಹೂವಿನಿಂದ ಆವೃತವಾಗಿದ್ದು ಅದ್ಭುತವಾಗಿರುತ್ತದೆ. 

ನಿರಂತರ ಹಸಿರು ಪರ್ವತ ಪ್ರದೇಶಗಳು ಮಧ್ಯೆ ಮಧ್ಯೆ ಹುಲ್ಲುಗಾವಲಿನಂತಹ ಅಗಾಧ ಮೈದಾನ ಪ್ರದೇಶಗಳು, ಎರಡೂ ಅಂಚಿಗೆ ಸಂದಿನಲ್ಲಿ ಹರಿಯುತ್ತಲೇ ಇರುವ ನದಿಯ ಸೆಲೆಗಳು ಶೋಲಾದಂತಹ  ಹುಲ್ಲಿನ ಹಸಿರು ಜೊತೆಗೆ ಎತ್ತರೆತ್ತರದ ಕಲ್ಲಿನ ಪರ್ವತ ಶಿಖರಗಳು ರಾಕ್‌ ಕ್ಲೈಮಿಂಗ್‌ಗೆ ಅಹ್ವಾನಿಸುತ್ತವೆ.  ಸ್ಥಳೀಯರ ಆಸ್ಥೆ ಮತ್ತು ಆಡಳಿತ ವೈಖರಿಯಿಂದಾಗಿ ಸ್ವತ್ಛತೆಯನ್ನು ಕಾಯ್ದುಕೊಂಡಿರುವ ಇದನ್ನು ಈಶಾನ್ಯ ರಾಜ್ಯಗಳ ಹೂವಿನ ಕಣಿವೆ ಅಥವಾ ಹಸಿರು ಕಣಿವೆ ಎಂಬ ಉಪನಾಮದಿಂದಲೊ ಕರೆಯುತ್ತಾರೆ. ಝುಕೋ ವ್ಯಾಲಿ ಪ್ರಯಾಸವಲ್ಲದ ಪ್ರವಾಸದ ಮxುದ ನೀಡುವುದರಲ್ಲಿ ಸಂಶಯವಿಲ್ಲ.

– ಸಂತೋಷಕುಮಾರ್‌ ಮೆಹೆಂದಳೆ

Advertisement

Udayavani is now on Telegram. Click here to join our channel and stay updated with the latest news.

Next