Advertisement
ಸೈಂಟ್ ವ್ಯಾಲೆಂಟೈನ್ಸ್ ದಿನವನ್ನು ವ್ಯಾಲೆಂಟೈನ್ ದಿನ ಎಂದೂ ಕೂಡ ಕರೆಯಾಗುತ್ತದೆ. ಕ್ರಿಶ್ಚಿಯನ್ ಸಂಪ್ರಾದಯದ ಪ್ರಕಾರ ಇದನ್ನು ಸಂತ ಪ್ರೇಮಿಗಳ ದಿನವೆಂದೂ ಕೂಡ ಕರೆಯಲಾಗುತ್ತದೆ.
Related Articles
Advertisement
ಹೌದು ಇಂದು ಪ್ರೀತಿ ಮತ್ತು ವಾತ್ಸಲ್ಯದ ಸಂಕೇತವಾಗಿ ಪ್ರೇಮಿಗಳು ಟೆಡ್ಡಿ ಬೇರ್ ನ್ನು ಕೊಟ್ಟು ತಮ್ಮ ಪ್ರೀತಿಯನ್ನು ಹೆಚ್ಚಿಸಿಕೊಳ್ಳುವ ದಿನವಾಗಿದೆ. ಪ್ರೀತಿಯನ್ನು ಮುದ್ದು ಮಾಡುವ ಸಲುವಾಗಿ ವಿಧ ವಿಧದ ಬಣ್ಣದ ಟೆಡ್ಡಿಗಳನ್ನು ನೀಡಿ ತಮ್ಮ ಪ್ರೀತಿಯನ್ನು ಈ ದಿನ ವಿಶೇಷವಾಗಿ ಪರಸ್ಪರ ಹಂಚಿಕೊಳ್ಳುತ್ತಾರೆ.
ನೀವು ಕೂಡ ಪ್ರೀತಿಸುತ್ತಿದ್ದರೇ ಈ ದಿನ ಹೀಗೆ ನಡೆದುಕೊಳ್ಳಿ.
ನಿಮ್ಮ ಪ್ರೀತಿಯ ಸಂಗಾತಿಗೆ ಟೆಡ್ಡಿಯ ಶುಭಾಶಯ :
ನಿಮ್ಮ ಪ್ರೀತಿಯ ಗೆಳತಿಗೆ ಟೆಡ್ಡಿಯನ್ನು ನೀಡುವುದರಿಂದ ನಿಮ್ಮ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚುತ್ತದೆ. ನೀವು ಆಕೆಯ ಸನಿಯವಿಲ್ಲದ ಸಮಯದಲ್ಲಿ ಟೆಡ್ಡಿಯನ್ನು ನಿಮ್ಮ ಸ್ಥಾನದಲ್ಲಿಟ್ಟುಕೊಂಡು ಆಕೆ ನಿಮ್ಮನ್ನು ನೆನಪಿಸಿಕೊಳ್ಳುತ್ತಾಳೆ. ಆಗ ನಿಮ್ಮ ಪ್ರೀತಿ ಮತ್ತಷ್ಟು ಸಮೃದ್ಧಗೊಳ್ಳುತ್ತದೆ.
ಓದಿ : ಚಮೋಲಿ ದುರಂತ: 32 ಮೃತದೇಹ ಪತ್ತೆ, 197 ಮಂದಿ ನಾಪತ್ತೆ, ಮುಂದುವರಿದ ಶೋಧ ಕಾರ್ಯ
ನೀವು ಕೂಡ ಟೆಡ್ಡಿಯಾಗಿ ನಿಮ್ಮ ಸಂಗಾತಿಯೊಂದಿಗಿರಿ :
ನಿಮ್ಮ ಪ್ರೀತಿಯ ಗೆಳತಿಯೊಂದಿಗೆ, ಆಪ್ತತೆಯ ಸ್ಪರ್ಶ ಎಂದಿಗೂ ಇರಲಿ. ಇಂದು ತುಸು ಜಾಸ್ತಿಯೇ ಇರಲಿ. ಟೆಡ್ಡಿಯಂತೆಯೇ ಸಂಗಾತಿಯೊಂದಿಗೆ ಬೆರೆಯಿರಿ. ನಿಮ್ಮ ನಡುವಿನ ಪ್ರೀತಿ ದುಪ್ಪಟ್ಟಾಗುತ್ತದೆ.
ಟೆಡ್ಡಿಯ ಜೊತೆಗೆ ಪ್ರೀತಿ ಸವಿ ಸಿಹಿ ನುಡಿಗಳಿರಲಿ:
ಪ್ರೀತಿಯ ಭಾವನೆಗಳನ್ನು ಹೇಳಿಕೊಳ್ಳುವುದಕ್ಕೆ ಅಥವಾ ಬರೆದುಕೊಡುವುದಕ್ಕೆ ನಿಜಕ್ಕೂ ಶಬ್ದಗಳಿಲ್ಲ. ಪ್ರೀತಿ ಎಲ್ಲವನ್ನೂ ಮೀರಿದ ಬಂಧವದು. ಆದರೂ, ಈ ದಿನ ನಿಮ್ಮ ಸಂಗಾತಿಗೆ ಖುಷಿ ತರುವ ನಾಲ್ಕು ಮಾತುಗಳನ್ನು ಬರೆದು ನೀಡಿ. ಆ ಮಾತುಗಳು ನಿಮ್ಮ ಪ್ರಣಯದ ಉಡುಗೊರೆಯ ಪ್ರತೀಕವಾಗಿರಲಿ.
ನಿಮ್ಮ ಸಂಗಾತಿಗೆ ಕೇಕ್ ಇಷ್ಟವೇ…?
ಸಿಹಿಯಾದ ಅನುಭೂತಿಗೆ ಪ್ರೀತಿಯಲ್ಲಿ ಸಂಪೂರ್ಣ ಅರ್ಥ ಕೊಡುವುದು ಕೇಕ್. ನೀವು ಮತ್ತಷ್ಟು ನಿಮ್ಮ ಸಂಗಾತಿಯ ಹೃದಯದಂತರಾಳಕ್ಕಿಳಿಯಲು ಈ ದಿನ “ಟೆಡ್ಡಿ ಕೇಕ್ ಸೆಲೆಬ್ರೆಷನ್” ಇನ್ನೂ ಉತ್ತಮ. ನಿಮ್ಮ ಪ್ರೀತಿಯ ದಿನ ಜಾಯ್ ಫುಲ್ ಆಗಿರುತ್ತದೆ ಎನ್ನುದರಲ್ಲಿ ಅನುಮಾನವೇ ಪಡಬೇಕಾಗಿಲ್ಲ.
ಪ್ರೀತಿಯ ಸುಮಗಳಿಗೆ ಉದಯವಾಣಿ ತಿಳಿಸುತ್ತಿದೆ ಹೃದಯ ಸ್ಪರ್ಶಿ ಶುಭಾಶಯ
ಓದಿ : ಉಡುಪಿ ಶಾಸಕ ಕೆ. ರಘುಪತಿ ಭಟ್ ಗೆ ಭ್ರಾತೃ ವಿಯೋಗ