Advertisement

ಶ್ವಾನಗಳೊಂದಿಗೆ ಪ್ರೇಮಿಗಳ ದಿನಾಚರಣೆ

02:34 PM Feb 15, 2021 | Team Udayavani |

ಆನೇಕಲ್‌: ವಿಶ್ವದೆಲ್ಲಡೆ ಫೆ.14 ಪ್ರೇಮಿಗಳ ದಿನವಾಗಿ ಆಚರಿಸಿದರೇ, ಇಲ್ಲೊಂದು ತಂಡ ಪ್ರೇಮಿಗಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿ ವಿಶಿಷ್ಟತೆ ಮೆರೆದಿದೆ.

Advertisement

40ಕ್ಕೂ ಹೆಚ್ಚು ದೇಶ, ವಿದೇಶಿ ತಳಿಗಳ 80ಕ್ಕೂ ಹೆಚ್ಚು ಶ್ವಾನಗಳೊಂದಿಗೆ ವಿಶ್ವ ಪ್ರೇಮಿಗಳ ದಿನಾಚರಣೆ ವಿಭಿನ್ನವಾಗಿ ಆಚರಿಸಲಾಯಿತು.

ಸಾಕು ಶ್ವಾನಗಳು ಭಾಗಿ: ತಾಲೂಕಿನ ಬನ್ನೇರುಘಟ್ಟ ಸಮೀಪದ ಜಂಬೂಸವಾರಿ ದಿನ್ನೆ ಬಳಿಯ ಪೆಟಲ್‌ ಫಿಟ್‌ನೆಸ್‌ ಅಂಡ್‌ ನ್ಪೋರ್ಟ್ಸ್ ಸ್ಟುಡಿಯೋನಲ್ಲಿ ಕೆ.9 ಗುರುಕುಲ(ಶ್ವಾನ ತರಬೇತಿ ಸಂಸ್ಥೆ) ಸಂಯುಕ್ತಾಶ್ರಯ ದಲ್ಲಿ ವಿಶಿಷ್ಟವಾಗಿ ಪ್ರೇಮಿಗಳ ದಿನ ಆಚರಿಸಲಾಯಿತು. ಬೆಳಗ್ಗೆ 8 ಗಂಟೆಗೆ ನೋಂದಣಿಯೊಂದಿಗೆ ಆರಂಭವಾದ ಆಚರಣೆಗೆ ಬೆಂಗಳೂರಿನ ವಿವಿಧ ಭಾಗಗಳಿಂದ ತಮ್ಮ ಮೆಚ್ಚಿನ ಸಾಕು ಶ್ವಾನಗಳೊಂದಿಗೆ ಹಾಜರಿದ್ದರು.

ಕೇಕ್‌ ಕಟ್‌ ಮಾಡಿದ ಸಿಂಬಾ: ಕರ್ನಾಟಕದ ಹೆಮ್ಮೆಯ ದೇಶಿ ತಳಿ ಮುದೋಳ ಸೇರಿದಂತೆವಿದೇಶದ ಇಂಗ್ಲೆಂಡ್‌, ಜರ್ಮನ್‌ ದೇಶಗಳ ವಿವಿಧತಳಿ ಶ್ವಾನಗಳು ಆಚರಣೆಯಲ್ಲಿ ಪಾಲ್ಗೊಂಡಿದ್ದವು. ಶ್ವಾನಗಳಿಗಾಗಿ ವಿಶೇಷ ಕೇಕ್‌ ತಂದು ನಾನು ಮತ್ತುಗುಂಡ ಸಿನಿಮಾದ ಹೀರೋ ಶ್ವಾನ ಸಿಂಬಾ ಮೂಲಕಕೇಕ್‌ ಕಟ್‌ ಮಾಡಿ ಪ್ರೇಮಿಗಳ ದಿನಾಚಣೆಗೆ ಚಾಲನೆ ನೀಡಲಾಯಿತು.

150ಕ್ಕೂ ಹೆಚ್ಚು ಮಾಲೀಕರು ಭಾಗಿ: ಶ್ವಾನಗಳೊಂದಿಗೆ ಮಾಲೀಕರಿಗಾಗಿ ಮ್ಯೂಸಿಕಲ್‌ ಚೇರ್‌, ಲೆಮೆನ್‌ ಅಂಡ್‌ ಸ್ಪೂನ್‌ ಕ್ರೀಡೆಗಳನ್ನು ಶ್ವಾನಗಳ ವಯಸ್ಸಿನ ಅಂತರ ದಲ್ಲಿ ನಡೆಸಲಾಯಿತು. ವಿಜೇತ ಶ್ವಾನಗಳಿಗೆಮೆಡಲ್‌ ಮತ್ತು ಟ್ರೋಫಿ ನೀಡಲಾಯಿತು. 150ಕ್ಕೂಹೆಚ್ಚು ಶ್ವಾನ ಪ್ರೇಮಿಗಳು, ಮಾಲೀಕರು ಭಾಗವಹಿಸಿದ್ದರು.

Advertisement

ಪ್ರೀತಿ, ಪ್ರೇಮ ಮನುಷ್ಯರಿಗೆ ಸೀಮಿತವಲ್ಲ: ಶ್ವಾನ ಪ್ರೇಮಿಗಳ ದಿನಾಚರಣೆಗೆ ವೇದಿಕೆ ಕಲ್ಪಿಸಿದ ಪೆಟಲ್‌ ಫಿಟ್‌ನೆಸ್‌ ಅಂಡ್‌ ನ್ಪೋಟ್ಸ್‌ ಸ್ಟುಡಿಯೋ ಮಾಲಿಕರಾದಅಂಜಲಿ ಮಾತನಾಡಿ, ಪ್ರೀತಿ, ಪ್ರೇಮ ಎಂಬುದು ಕೇವಲ ಮನುಷ್ಯರಿಗೆ ಸೀಮಿತವಾಗಿಲ್ಲ. ಮಾತು ಬಾರದ ಶ್ವಾನಗಳಲ್ಲೂ ಭಾವನೆಗಳಿರುತ್ತದೆ. ಶ್ವಾನಗಳಿಗೆಮಾತು ಬಾರದು ಎಂಬುದು ಬಿಟ್ಟರೆ ನಮ್ಮಂತೆ ಅವುಗಳು ಪ್ರೀತಿಯನ್ನು ಹಂಚಿಕೊಳ್ಳುತ್ತವೆ. ಹಾಗಾಗಿ ನಾವು ಶ್ವಾನಗಳೊಂದಿಗೆ ಪ್ರೇಮಿಗಳ ದಿನಾಚರಣೆ ಕಾರ್ಯಕ್ರಮ ನಡೆಸಿದೆವು ಎಂದು ಹೇಳಿದರು.

ಕೆ 9 ಗುರುಕುಲ ತಂಡದ ವೇಣು, ವರುಣ್‌ ಹಾಗೂ ಪೆಟಲ್‌ ಫಿಟ್‌ನೆಸ್‌ ಅಂಡ್‌ ನ್ಪೋರ್ಟ್ಸ್ ತಂಡದ ಅನಿಶಾ ಸೇರಿದಂತೆ ಹಲವರು ಭಾಗವಹಿಸಿದ್ದರು.

ಸದಸ್ಯರಿಂದ ತರಬೇತಿ :

ಪ್ರೇಮಿಗಳ ದಿನಾಚರಣೆ ಆಯೋಜಕ ಕೆ.9 ಗುರುಕುಲ ತಂಡದ ಸ್ವಾಮಿ ಮಾತನಾಡಿ, ಎಲ್ಲೆಡೆ ಪ್ರೇಮಿಗಳು ಮಾತ್ರ ವ್ಯಾಲೆಂಟೈನ್ಸ್‌ ಡೇಆಚರಿಸುತ್ತಾರೆ. ಆದರೆ, ನಾವು ನಮ್ಮ ಮೆಚ್ಚಿನ ಶ್ವಾನಗಳೊಂದಿಗೆ ಪ್ರೇಮಿಗಳ ದಿನಾಚರಣೆಆಚರಿಸುತ್ತಿದ್ದೇವೆ. ನಮ್ಮದು ಕೆ.9 ಗುರುಕುಲ ಶ್ವಾನತರಬೇತಿ ಸಂಸ್ಥೆ, ಬೆಂಗಳೂರಿನ ವಿವಿಧ ಕಡೆಗಳಲ್ಲಿ 30ಕ್ಕೂ ಹೆಚ್ಚು ಸದಸ್ಯರು ನೂರಾರು ಶ್ವಾನಗಳಿಗೆ ತರಬೇತಿ ನೀಡುತ್ತಿದ್ದಾರೆ. ನಾವು ಇಂತಹ ವಿಶಿಷ್ಟ ಆಚರಣೆ ನಡೆಸುತ್ತಾ ಬಂದಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next