Advertisement
ಶಿರ್ವ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಮೊನ್ಸಿಂಜೊರ್ ಹಿಲರಿ ಗೊನ್ಸಾಲ್ವಿಸ್ ರಂಗ ಮಂಟಪದಲ್ಲಿ ನಡೆದ ಕಾಲೇಜು ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ, ಸಂಸ್ಥಾಪಕರ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದರು.
Related Articles
Advertisement
ಕೆಥೊಲಿಕ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ವಂ|ವಿನ್ಸೆಂಟ್ ಕ್ರಾಸ್ತಾ ಕಾಲೇಜಿನಲ್ಲಿ ಕ್ರೀಡಾ ಸಾಧನೆ ಮಾಡಿದ ವಿದ್ಯಾರ್ಥಿಗಳ ತಂಡವನ್ನು ಅಭಿನಂದಿಸಿ ಮಾತನಾಡಿದರು. ಸುವರ್ಣ ಮಹೋತ್ಸವ ಸಂಚಿಕೆ ಗೋಲ್ಡನ್ ಕ್ರಾನಿಕಲ್ಸ್ ಬಿಡುಗಡೆ ಮಾಡಲಾಯಿತು.
ಶಿರ್ವ ಗ್ರಾ.ಪಂ. ಅಧ್ಯಕ್ಷೆ ಸವಿತಾ ಪೂಜಾರಿ , ಚರ್ಚ್ನ ಸಹಾಯಕ ಧರ್ಮಗುರುಗಳಾದ ವಂ|ಅನಿಲ್ ರೊಡ್ರಿಗಸ್,ವಂ|ರೋನ್ಸನ್ ಪಿಂಟೊ, ಸಂತ ಮೇರಿ ಕಾಲೇಜಿನ ಪ್ರಾಂಶುಪಾಲ ಡಾ|ಹೆರಾಲ್ಡ್ ಐವನ್ ಮೋನಿಸ್,ಡಾನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಂ| ರೋಲ್ವಿನ್ ಅರಾನ್ಹಾ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಬಿನಾ ಪ್ರಿಯಾ ನೊರೊನ್ಹಾ, ಡೊನ್ ಬೊಸ್ಕೊ ಹಿ.ಪ್ರಾ ಶಾಲೆಯ ಮುಖ್ಯ ಶಿಕ್ಷಕಿ ಪೌಲಿನ್ ಲೋಬೋ,ನೇಟಿವಿಟಿ ಕಾನ್ವೆಂಟ್ನ ಸಿ|ಡಯಾನಾ ಲೋಬೋ,ಆಕ್ಸಿಲಿಯಂ ಕಾನ್ವೆಂಟ್ನ ಸಿ| ಲೀಮಾ ಲೋಬೋ,ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಪೌಲಿನ್ ಪಿರೇರಾ, ವಿದ್ಯಾರ್ಥಿ ನಾಯಕರಾದ ಪ್ರಥ್ವಿ ಮತ್ತು ಚಾರಿತ್ರ್ಯ ವೇದಿಕೆಯಲ್ಲಿದ್ದರು.
ಕಾಲೇಜು ಆಡಳಿತ ಮಂಡಳಿಯ ಸದಸ್ಯರು, ಚರ್ಚ್ಪಾಲನ ಮಂಡಳಿಯ ಸದಸ್ಯರು, ಹಳೆವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು,ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಧರ್ಮಭಗಿನಿಯರು,ಹೆತ್ತವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಂಶುಪಾಲ ಜಯಶಂಕರ್.ಕೆ ಕಾಲೇಜಿನ 50 ವರ್ಷಗಳ ಸಾಧನೆಯ ವಿವರ ನೀಡಿದರು. ಸಂಚಾಲಕ ನೋರ್ಬರ್ಟ್ ಮಚಾದೊ ಸ್ವಾಗತಿಸಿದರು. ಎಡ್ವರ್ಡ್ಲಾರ್ಸನ್ ಡಿಸೋಜಾ ಮತ್ತು ಗ್ಲೆನಿಷಾ ರೇಷ್ಮಾ ಮೆಂಡೋನ್ಸಾ ನಿರೂಪಿಸಿ, ಕಾರ್ಯದರ್ಶಿ ಜೆಸಿಂತಾ ಐರಿನ್ ಡಿಸೋಜಾ ವಂದಿಸಿದರು.