Advertisement

ವಳಮಲೆ ದೈವಸ್ಥಾನ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ

03:07 PM Apr 13, 2019 | Team Udayavani |

ಬದಿಯಡ್ಕ : ಶ್ರೀ ಅಣ್ಣಪ್ಪ ಪಂಜುರ್ಲಿ, ಮೂಕಾಂಬಿಕ ಗುಳಿಗ ಹಾಗೂ ಪರಿವಾರ ದೈವಗಳ ದೈವಸ್ಥಾನ ವಳಮಲೆ, ಬದಿಯಡ್ಕದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವವು ಎ. 27 ರಿಂದ ಎ. 30 ರ ತನಕ ವಿವಿಧ ವೈಧಿಕ ಹಾಗೂ ದೈವಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

Advertisement

27 ರಂದು ರಾತ್ರಿ 7 ಗಂಟೆಗೆ ಕುತ್ತಿ ಪೂಜೆ , 28 ರಂದು ಸಾಯಂಕಾಲ 6.30 ರಿಂದ ವೈದಿಕ ಪ್ರಾರ್ಥನೆ, ಪ್ರಸಾದಶುದ್ಧಿ , ವಾಸ್ತು ಹೋಮ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತು ಬಲಿ. ಎ. 29 ರಂದು ಬೆಳಿಗ್ಗೆ 7 ಗಂಟೆಗೆ ಮಹಾಗಣಪತಿ ಹೋಮ ಕಲಶಪೂಜೆ, ಪ್ರತಿಷ್ಠಾಂಗ ಹೋಮ, 10.26 ರ ಶುಭ ಮುಹೂರ್ತದಲ್ಲಿ ವೇದಮೂರ್ತಿ ಕಿಳಿಂಗಾರು ಶ್ರೀ ಶಿವರಾಮ ಭಟ್ಟರ ಶಾಂತಿಪಳ್ಳ – ಪೆರಡಾಲ ಇವರ ನೇತೃತ್ವದಲ್ಲಿ ಶ್ರೀ ದೈವಗಳ ಪುನಃ ಪ್ರತಿಷ್ಠಾ ಕಲಶೋತ್ಸವ, ದೈವಗತಳಿಗೆ ತಂಬಿಲ, ನೈಮಿತ್ತಿಕಾದಿಗಳ ನಿರ್ಣಯ ಹಾಗೂ ಪ್ರಸಾದ ವಿತರಣೆ. ಮಧ್ಯಾಹ್ನ 12.30 ಕ್ಕೆ ಸ್ಥಳ ಗುಳಿಗ ಕೋಲ, ಪ್ರಸಾದ ವಿತರಣೆ,. 1 ಗಂಟೆಗೆ ಅನ್ನಸಂತರ್ಪಣೆ, 3 ಗಂಟೆಗೆ ಪಿಲಿಚಾಮುಡಿ , ಕೊರತ್ತಿ ದೈವದ ನೇಮೋತ್ಸವ. ಸಂಜೆ 6 ಗಂಟೆಗೆ ಅಣ್ಣಪ್ಪ ಪಂಜುರ್ಲಿ ತೊಡಂಙಲ್‌. ಸಂಜೆ 7 ಗಂಟೆಗೆ ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಮೂಕಾಂಬಿಕ ಗುಳಿಗ, ಭಂಡಾರ ಇಳಿಸುವುದು. ರಾತ್ರಿ 8 ಗಂಟೆಗೆ ಕುಪ್ಪೆ ಪಂಜುರ್ಲಿ ತೊಡಂಙಲ್‌, 9.30 ಕ್ಕೆ ಕುಪ್ಪೆ ಪಂಜುರ್ಲಿ ಕೋಲ, 10.30 ಕ್ಕೆ ಮುಕಾಂಬಿಕ ಗುಳಿಗನ ಕೋಲ, 11.30 ಕ್ಕೆ ಕಲ್ಲುರ್ಟಿ ಕೋಲ. ಎ. 30 ರಂದು ಪ್ರಾತಃಕಾಲ 5 ಗಂಟೆಗೆ ಪ್ರಸಾದ ವಿತರಣೆ, 8 ಗಂಟೆಗೆ ಧರ್ಮದೈವ ಅಣ್ಣಪ್ಪ ಪಂಜುರ್ಲಿ ನೇಮ, ಮಧ್ಯಾಹ್ನ 12 ಗಂಟೆಗೆ ಪ್ರಸಾದ ವಿತರಣೆ, 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next