ಸಕಲೇಶಪುರ: ತಾಲೂಕಿನ ಹೆತ್ತೂರು ವಳಲಹಳ್ಳಿ ಸೇರಿದಂತೆ ವಿವಿಧೆಡೆ ಮಂಗಳವಾರ ಅಕಾಲಿಕ ಮಳೆ ಸುರಿದಿದ್ದು ಕಾಫಿ ಬೆಳೆಗಾರರಿಗೆ ಆತಂಕ ತಂದಿದೆ.
Advertisement
ಕಾಫಿ ಹಾಗೂ ಭತ್ತದ. ಕೊಯ್ಲಿನ ಸಮಯವಾಗಿದ್ದು ಕೊಯ್ಲು ಮಾಡಿದ ಕಾಫಿಯನ್ನು ಹಲವಡೆ ಹರಡಲಾಗಿತ್ತು.ಏಕಾಏಕಿ ಸುರಿದ ಮಳೆಯಿಂದ ಒಣಗಿಸಲು ಹಾಕಿದ್ದ ಕಾಫಿಯನ್ನು ರಕ್ಷಿಸಲು ಬೆಳೆಗಾರರು ಪರದಾಡಿದರು.ಹೆತ್ತೂರು ಸಮೀಪದ ಗುಂಡಿಗೆರೆ ಗ್ರಾಮದ ಪರಮೇಶ ಎಂಬುವರು ಕಣದಲ್ಲಿ ಒಣಗಿಸಲು ಹಾಕಿದ್ದ ಕಾಫಿ ನೀರು ಪಾಲಾಗಿದ್ದು ಇನ್ನು ಹಲವಾರು ಬೆಳೆಗಾರರು ಮಳೆಗೆ ತತ್ತರಿಸಿದ್ದಾರೆ.
ಇದನ್ನೂ ಓದಿ : ಕಾಫಿನಾಡಿನಲ್ಲಿ ಧಾರಾಕಾರ ಮಳೆ… ಬೆಳೆಗಾರರು ಕಂಗಾಲು