Advertisement

ವೈಷ್ಣೋದೇವಿ: ಮಾರ್ಗಸೂಚಿ ಕಡ್ಡಾಯ

08:33 AM Jun 04, 2020 | mahesh |

ಜಮ್ಮು: ಸುಪ್ರಸಿದ್ಧ ಯಾತ್ರಾಸ್ಥಳ ವೈಷ್ಣೋದೇವಿ ದರ್ಶನ ಜೂ.8ರಿಂದ ಆರಂಭಗೊಳ್ಳಲಿದೆ. ತ್ರಿಕೂಟ ಪರ್ವತವಾಸಿನಿಯ ದರ್ಶನಕ್ಕೆ ಭಕ್ತರಿಗೆ ಅಗತ್ಯ ಮಾರ್ಗಸೂಚಿ ಕಡ್ಡಾಯಗೊಳಿಸಲು ದೇಗುಲ ಆಡಳಿತ ಮಂಡಳಿ ಸಜ್ಜಾಗಿದೆ.

Advertisement

ಸಿದ್ಧತೆಗಳು ಏನೇನು?: ತ್ರಿಕೂಟ ಪರ್ವತದ 13 ಕಿ.ಮೀ. ಕಿರುದಾರಿಯ ಉದ್ದಕ್ಕೂ ಸಾಮಾಜಿಕ ಅಂತರಕ್ಕಾಗಿ ಪೇಂಟ್‌ನಿಂದ ಗುರುತು ಹಾಕಲಾಗಿದೆ. ಯಾತ್ರಿಕರನ್ನು ಹೊತ್ತೂಯ್ಯುವ ಕುದುರೆ ಮತ್ತು ಅದರ ಮಾಲಕರಿಗೆ ಆರೋಗ್ಯಪರೀಕ್ಷೆಗಳು ನಡೆಯುತ್ತಿವೆ ಎಂದು ಮಂಡಳಿ ಹೇಳಿದೆ.

ಜಿಪಿಎಸ್‌ ಟ್ರ್ಯಾಕಿಂಗ್‌: ಭಕ್ತಾದಿಗಳಿಗೆ ಆನ್‌ಲೈನ್‌ ಮೂಲಕ ಟಿಕೆಟ್‌ ಪಡೆಯಲು ಸೂಚಿಸಲಾಗಿದ್ದು, ಆದ್ಯತೆಯ ಮೇರೆಗೆ ಅವಕಾಶ ಲಭ್ಯವಾಗಲಿದೆ. ಬೆಟ್ಟ ಏರುವಾಗ ನಿಗದಿತ ಸಮಯ ಪಾಲನೆಗೆ ಪ್ರತಿ ಭಕ್ತರೂ ಜಿಪಿಎಸ್‌ ಟ್ರ್ಯಾಕಿಂಗ್‌ಗೆ ಒಳಪಡುತ್ತಾರೆ.

30ರ ವರೆಗೆ ಯಾತ್ರೆ ಬೇಡ: ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜೂ.30ರವರೆಗೆ ಬದರಿನಾಥ ಯಾತ್ರೆ ಸ್ಥಗಿತಗೊಳಿಸುವಂತೆ ದೇಗಲದ ಪ್ರಧಾನ ಅರ್ಚಕ ರಾವಲ್‌ ಈಶ್ವರಿ ಪ್ರಸಾದ್‌ ನಂಬೂದಿರಿ ಉತ್ತರಾಖಂಡ ಸರಕಾರಕ್ಕೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next