Advertisement

ನೈಂಟಿ ಬಿಡಿ ಮನೀಗ್‌ ನಡಿ! : ತೆರೆಯತ್ತ ಬಿರಾದಾರ್‌ ಅಭಿನಯದ 500ನೇ ಸಿನಿಮಾ

12:19 PM Aug 23, 2022 | Team Udayavani |

ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟನಾಗಿ, ಪೋಷಕ ನಟನಾಗಿ ಗುರುತಿಸಿಕೊಂಡಿರುವ ನಟ ವೈಜನಾಥ ಬಿರಾದಾರ್‌ ಈಗ ಪೂರ್ಣ ಪ್ರಮಾಣದಲ್ಲಿ ನಾಯಕ ನಟರಾಗಿ ತೆರೆಗೆ ಬರುವ ತಯಾರಿಯಲ್ಲಿದ್ದಾರೆ.

Advertisement

ಹೌದು, ವೈಜನಾಥ್‌ ಬಿರಾದಾರ್‌ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವ ಹೊಸ ಸಿನಿಮಾದ ಹೆಸರು “90 ಬಿಡಿ ಮನೀಗ್‌ ನಡಿ’. ಅಂದಹಾಗೆ, ಇದು ಬಿರಾದಾರ್‌ ಅಭಿನಯದ 500ನೇ ಸಿನಿಮಾ ಎಂಬುದು ವಿಶೇಷ.

ರತ್ನಮಾಲಾ ಬಾದರದಿನ್ನಿ ನಿರ್ಮಿಸಿರುವ “90 ಬಿಡಿ ಮನೀಗ್‌ ನಡಿ…’ ಸಿನಿಮಾವನ್ನು ಉಮೇಶ್‌ ಬಾದರದಿನ್ನಿ ಮತ್ತು ನಾಗರಾಜ್‌ ಅರೆಹೊಳೆ ಜಂಟಿಯಾಗಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ವೈಜನಾಥ್‌ ಬಿರಾದಾರ್‌ ಅವರೊಂದಿಗೆ ಕರಿಸುಬ್ಬು, ನೀತಾ, ಪ್ರೀತು ಪೂಜಾ, ಧರ್ಮ, ಪ್ರಶಾಂತ್‌ ಸಿದ್ಧಿ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಈಗಾಗಲೇ ಸದ್ದಿಲ್ಲದೆ ಬಹುತೇಕ ಸಿನಿಮಾದ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ “90 ಬಿಡಿ ಮನೀಗ್‌ ನಡಿ…’ ಸಿನಿಮಾದ ಟ್ರೇಲರ್‌ ಮತ್ತು ಮೊದಲ ಹಾಡನ್ನು ಬಿಡುಗಡೆ ಮಾಡಿದೆ. ಉತ್ತರ ಕರ್ನಾಟಕದ ಸೊಗಡಿನಲ್ಲಿ ಮೂಡಿಬಂದಿರುವ ಈ ಹಾಡಿಗೆ ಶಿವು ಬೆರಗಿ ಸಾಹಿತ್ಯ-ಸಂಗೀತವಿದ್ದು, ರವೀಂದ್ರ ಸುರಗಾವಿ ಮತ್ತು ಶಮಿತಾ ಮಲ್ನಾಡ್‌ ಹಾಡಿಗೆ ಧ್ವನಿಯಾಗಿದ್ದಾರೆ. ಭೂಷಣ್‌ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದು, ನಟ ಬಿರಾದಾರ್‌ ಹಾಡಿಗೆ ಮಸ್ತ್ ಸೆಪ್ಟ್ ಹಾಕಿದ್ದಾರೆ.

ಇದೇ ವೇಳೆ ಮಾತನಾಡಿದ ನಟ ವೈಜನಾಥ್‌ ಬಿರಾದಾರ್‌, “ರಂಗಭೂಮಿಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಾನು ನಂತರ ಸಿನಿಮಾಕ್ಕೆ ಬಂದೆ. ಇಲ್ಲಿಯವರೆಗೆ 500 ಸಿನಿಮಾಗಳಲ್ಲಿ ಬೇರೆ ಬೇರೆ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ. ಡಾ. ರಾಜಕುಮಾರ್‌ ಅವರಿಂದ ಹಿಡಿದು ಶಿವರಾಜಕುಮಾರ್‌, ಪುನೀತ್‌ ರಾಜಕುಮಾರ್‌, ಉಪೇಂದ್ರ, ದರ್ಶನ್‌ ಹೀಗೆ ಇಂದಿನ ಅನೇಕ ಸ್ಟಾರ್ ಜೊತೆ ಅಭಿನಯಿಸಿದ್ದೇನೆ. ನಾನೊಬ್ಬ ಕಲಾವಿದ, ಕಲಾಸೇವೆ ಮಾಡುವುದು ನನಗೆ ಖುಷಿ ಕೊಡುತ್ತದೆ. ಈ ಸಿನಿಮಾದಲ್ಲೂ ಕೂಡ ಅಗರಬತ್ತಿ ಮಾರುವ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಪಾತ್ರ ಮತ್ತು ನಿರ್ದೇಶಕರು ಬಯಸಿದ್ದರಿಂದ ಹಾಡಿನಲ್ಲಿ ಕಾಣಿಸಿಕೊಳ್ಳಬೇಕಾಯ್ತು. ತುಂಬಾ ಚೆನ್ನಾಗಿ ಸಿನಿಮಾ ಮತ್ತು ಹಾಡುಗಳು ಮೂಡಿಬಂದಿದ್ದು, ಪ್ರೇಕ್ಷಕರಿಗೆ ಇಷ್ಟವಾಗುತ್ತದೆ’ ಎಂಬ ಭರವಸೆ ವ್ಯಕ್ತಪಡಿಸಿದರು.

Advertisement

ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕರಾದ ಉಮೇಶ್‌ ಬಾದರದಿನ್ನಿ ಮತ್ತು ನಾಗರಾಜ್‌ ಅರೆಹೊಳೆ, “ಇದೊಂದು ಕಾಮಿಡಿ ಮತ್ತು ಸಸ್ಪೆನ್ಸ್‌-ಥ್ರಿಲ್ಲರ್‌ ಕಥಾಹಂದರದ ಸಿನಿಮಾ. ಇಡೀ ಸಿನಿಮಾದ ಶೇಕಡಾ 80ರಷ್ಟು ಭಾಗ ಉತ್ತರ ಕರ್ನಾಟಕದ ಸೊಗಡಿನಲ್ಲಿ ನಡೆಯುತ್ತದೆ. ಇಂಥದ್ದೊಂದು ಪಾತ್ರವನ್ನು ಉತ್ತರ ಕರ್ನಾಟಕದ ಮೂಲದ ಕಲಾವಿದರು ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂಬ ಯೋಚನೆ ನಮ್ಮಲ್ಲಿತ್ತು. ಕೊನೆಗೆ ಈ ಕಥೆಗೆ ಮತ್ತು ಪಾತ್ರಕ್ಕೆ ಬಿರಾದಾರ್‌ ಅವರೇ ಸೂಕ್ತ ಎನಿಸಿ, ಅವರನ್ನೇ ಹೀರೋ ಆಗಿ ಆಯ್ಕೆ ಮಾಡಿಕೊಂಡೆವು. ಸಂಪೂರ್ಣ ಹಾಸ್ಯಭರಿತವಾಗಿರುವ ಜೊತೆಗೆ ಸಸ್ಪೆನ್ಸ್‌ ಇರುವಂಥ ಸಿನಿಮಾ ಇದು’ ಎಂದು ಸಿನಿಮಾದ ಕಥಾಹಂದರದ ಬಗ್ಗೆ ಮಾಹಿತಿ ನೀಡಿದರು.

“90 ಬಿಡಿ ಮನೀಗ್‌ ನಡಿ…’ ಚಿತ್ರಕ್ಕೆ ಕೃಷ್ಣ ನಾಯ್ಕರ್‌ ಛಾಯಾಗ್ರಹಣ, ವೆಂಕಿ ಯುಡಿವಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ವೀರ್‌ ಸಮರ್ಥ್ ಸಂಗೀತವಿದ್ದು, ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಚಿತ್ರದ ಬಗ್ಗೆ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next