ಹೊಸದಿಲ್ಲಿ: ಅಮೋಘ ಫಾರ್ಮ್ನಲ್ಲಿರುವ ವೈದೇಹಿ ಚೌಧರಿ ಅವರನ್ನು “ಬಿಲ್ಲಿ ಜೀನ್ ಕಿಂಗ್ ಕಪ್ ಟೆನಿಸ್’ ಪಂದ್ಯಾವಳಿಗಾಗಿ ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಅಂಕಿತಾ ರೈನಾ, ಕರ್ಮಾನ್ ಥಾಂಡಿ ಕೌರ್ ತಂಡದ ಸೀನಿಯರ್ ಆಟಗಾರ್ತಿಯರಾಗಿದ್ದಾರೆ. 23 ವರ್ಷದ ವೈದೇಹಿ ಚೌಧರಿ ವಿಶ್ವ ರ್‍ಯಾಂಕಿಂಗ್‌ನಲ್ಲಿ 492ನೇ ಸ್ಥಾನದಲ್ಲಿರುವ ಆಟಗಾರ್ತಿ. ಗುರ್ಗಾಂವ್‌ನಲ್ಲಿ ಇತ್ತೀಚೆಗಷ್ಟೇ ಸಂದೀಪ್ತಿ ಸಿಂಗ್ ಅವರನ್ನು ಸೋಲಿಸಿ ತಮ್ಮ ದ್ವಿತೀಯ ಐಟಿಎಫ್ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದರು.
ಗ್ವಾಲಿಯರ್‌ನಲ್ಲಿ ಮೊದಲ ಐಟಿಎಫ್ ಪ್ರಶಸ್ತಿ ಗೆದ್ದ ಬಳಿಕ ಜಾಜರ್ ಟೆನಿಸ್ ಟೂರ್ನಿಯ ಫೈನಲ್ ತಲುಪಿದ್ದರು. ಅಲ್ಲಿ ಸರ್ಬಿಯಾದ ಟಮಾರಾ ಕ್ಯುರೋವಿಕ್ ವಿರುದ್ಧ ಪರಾಭವಗೊಂಡಿದ್ದರು.
ಸಹಜಾ ಯಮ್ಲಂಪಳ್ಳಿ, ಋತುಜಾ ಭೋಂಸ್ಲೆ ಅವರು ಈ ತಂಡದ ಇತರ ಆಟಗಾರ್ತಿಯರು. ರಿಯಾ ಭಾಟಿಯಾ ಅವರನ್ನು ಕೈಬಿಡಲಾಗಿದೆ.
Related Articles
ಏಷ್ಯಾ ಓಶಿಯಾನಿಯಾ ಗ್ರೂಪ್-1ರ ಈ ಮುಖಾಮುಖೀ ಎ. 10ರಂದು ಉಜ್ಬೆಕಿಸ್ಥಾನದ ಟಾಷೆRಂಟ್‌ನಲ್ಲಿ ಆರಂಭವಾಗಲಿದೆ.
ಭಾರತ ತಂಡ: ಅಂಕಿತಾ ರೈನಾ, ಕರ್ಮಾನ್ ಕೌರ್ ಥಾಂಡಿ, ಋತುಜಾ ಭೋಂಸ್ಲೆ, ಸಹಜಾ ಯಮ್ಲಂಪಳ್ಳಿ, ವೈದೇಹಿ ಚೌಧರಿ.
ಮೀಸಲು ಆಟಗಾರ್ತಿ: ಶ್ರೀವಲ್ಲಿ ಭಾಮಿದೀಪ್ತಿ. ನಾಯಕಿ: ಶಾಲಿನಿ ಠಾಕೂರ್ ಚಾವ್ಲಾ. ಕೋಚ್: ರಾಧಿಕಾ ಕಾನಿಟ್ಕರ್.