Advertisement
ವಿಜಯಪುರದಲ್ಲಿ 1963ರಲ್ಲಿ ಅಥಣಿ ರಸ್ತೆಯಲ್ಲಿ 406 ಎಕರೆ ವಿಸ್ತೀರ್ಣದ ಸೈನಿಕ್ ಶಾಲೆ ಆವರಣ ಮಡ್ಡಿ ಭೂಮಿಯ ಒಣಪ್ರದೇಶ. ಇಲ್ಲಿ ನೀರಿನ ಸೌಲಭ್ಯ ಕಡಿಮೆ. ಹೀಗಾಗಿ ಸೇವೆ ಸಲ್ಲಿಸಿರುವ ಎಲ್ಲ ಪ್ರಾಚಾರ್ಯರು ಸೈನಿಕ್ ಸ್ಕೂಲ್ ಪ್ರದೇಶವನ್ನು ಹಸರೀಕರಣ ಮಾಡಲು ಅಪಾರ ಶ್ರಮ ವಹಿಸಿ 15 ಸಾವಿರ ಗಿಡಗಳನ್ನು ಇಲ್ಲಿ ಪೋಷಿಸಿಕೊಂಡು ಬರಲಾಗಿದೆ.ಪ್ರಾಚಾರ್ಯ ತಮೊಜಿತ ಬಿಸ್ಪಾಸ್ ಕೊರಿಕೆ ಮೇರೆಗೆ 2016ರಲ್ಲಿ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರು ಇಲ್ಲಿನ ಹೂಳು ತುಂಬಿ ಮುಚ್ಚಿ ಹೋಗಿದ್ದ ಆದಿಲ್‌ಶಾಹಿ ಕಾಲದ 6 ಬಾವಡಿಗಳನ್ನು ಪುನರುಜ್ಜೀವನಗೊಳಿಸಿದ್ದು, ಈಗ ಈ ಬಾವಿಗಳು ಮರಭೂಮಿಯಲ್ಲಿ ಓಯಾಸಿಸ್ ಎಂಬಂತೆ ಸೈನಿಕ್ ಸ್ಕೂಲ್‌ನ ಮಡ್ಡಿ ಪ್ರದೇಶದಲ್ಲಿ ಜೀವ ಸೆಲೆಯಾಗಿದೆ. ಅದರಿಂದ ಪ್ರೇರಣೆಗೊಂಡ ಸಿಬ್ಬಂದಿ ಟಕ್ಕೆ ಪ್ರದೇಶಕ್ಕೆ ಹೊಂದಿಕೊಂಡ ತಮ್ಮ ಆವರಣದಲ್ಲಿ ಸಣ್ಣ ಕೆರೆ ನಿರ್ಮಿಸಲು ನಿವೇಶನ ಸೂಕ್ತವಾಗಿದ್ದು, ತಾವೇ ಮುತುವರ್ಜಿ ವಹಿಸಿ, ಅನುದಾನ ನೀಡಿ ಕೆರೆ ನಿರ್ಮಿಸಬೇಕು ಎಂದರು.
ಅವರ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಅಂದಿನ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಮಹಾನಗರ ಪಾಲಿಕೆಯಿಂದ 30 ಲಕ್ಷ ರೂ. ಅನುದಾನ ಒದಗಿಸಿ 2 ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಿಸಿದ್ದಲ್ಲದೆ, ತಾವಾಗಿಯೇ ಒಂದು ಹೆಜ್ಜೆ ಮುಂದೆ ಹೋಗಿ ಸೈನಿಕ್ ಸ್ಕೂಲ್ ಬದಿಯ ರಿಂಗ್‌ರೋಡ್‌ಗೆ ಹೊಂದಿಕೊಂಡಂತೆ ಐತಿಹಾಸಿಕ ಬೇಗಂ ತಲಾಬ್, ಭೂತನಾಳ ಕೆರೆಗಳನ್ನು ಕೃಷ್ಣಾ ನದಿಯಿಂದ ತುಂಬಿಸುವ ಪೈಪ್‌ಲೈನ್‌ನಿಂದ ಸೈನಿಕ್ ಸ್ಕೂಲ್ ನೂತನ ಕೆರೆಗೂ ಜೋಡಣೆ ಮಾಡಿದರ ಪರಿಣಾಮ ಇಂದಿನಿಂದ ಇಲ್ಲಿನ ಕೆರೆ ತುಂಬುತ್ತಿದೆ.
Related Articles
Advertisement