Advertisement

ಅಲೆಮಾರಿತನವನ್ನು ಪ್ರವಾಸವಾಗಿ ಗ್ರಹಿಸಿ

12:44 PM Mar 03, 2017 | Team Udayavani |

ಮೈಸೂರು: ಅಲೆಮಾರಿತನವನ್ನು ಕೇವಲ ಮನರಂಜನೆಗಾಗಿ ಮಾತ್ರವಲ್ಲದೆ ಮನರಂಜನೆಯ ಆಚೆಗೂ ಪ್ರವಾಸವಾಗಿ ಗ್ರಹಿಸಬೇಕು ಎಂದು ಚಲನಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್‌ ತಿಳಿಸಿದರು. ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಿಂದ ಗುರುವಾರ ಏರ್ಪಡಿಸಿದ್ದ “ಅಲೆಮಾರಿಯೊಬ್ಬನ ಲೋಕಗ್ರಹಿಕೆಯ ಕಥಾನಕ’ಗಳು ವಿಷಯ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

Advertisement

ಅಲೆಮಾರಿ ಸೂಕ್ಷ್ಮ ಗ್ರಹಿಕೆಯಾಗಿದ್ದರೆ ಜಗದ ಒಳಿತುಗಳನ್ನು ಸಂಗ್ರಹಿಸಿ ಶ್ರೀಮಂತನಾಗಬಹುದು. ಹೀಗಾಗಿ ಅಲೆಮಾರಿತನ ಲೋಕಗ್ರಹಿಕೆಗೆ ಉಪಯುಕ್ತವಾಗಿದ್ದು, ಅಲೆಮಾರಿತನ ಮನರಂಜನೆಯಾಗಿ ಮಾತ್ರವಲ್ಲದೆ ಮನರಂಜನೆಯ ಆಚೆಗೂ ಪ್ರವಾಸವಾಗಿ ಗ್ರಹಿಸಬೇಕು. ಬದುಕಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗ್ರಹಿಸಿದಾಗ ಪ್ರವಾಸ ಸಮಗ್ರವಾಗಲಿದೆ.

ಭೂಮಿಯ ಭೌತಿಕ ಲಕ್ಷಣ ಸೌಂದರ್ಯವನ್ನು ಪಡೆಯುವುದು ಪ್ರತಿಯೊಬ್ಬರ ಹಕ್ಕು, ಇದರಿಂದ ಹೊಸ ನೀರು, ಹೊಸ ಗಾಳಿ, ಹೊಸ ಹವೆಯನ್ನು ಅಸ್ವಾದಿಸಬಹುದು ಎಂದರು. ನಾವು ದೈವವನ್ನು ದೊಡ್ಡದಾಗಿ ಮಾಡಿಕೊಂಡು ನಿಸರ್ಗವನ್ನು ಕಸದ ತೊಟ್ಟಿಯನ್ನಾಗಿಸಿದ್ದೇವೆ. ಆ ಮೂಲಕ ಪ್ರಸಿದ್ಧ ಪ್ರವಾಸಿ ಸ್ಥಳಗಳನ್ನು ಅಶುಚಿತ್ವದ ತಾಣಗಳನ್ನಾಗಿ ಮಾಡಿದ್ದು, ಅಲೆಮಾರಿತನದಿಂದ ನಮ್ಮ ದೇಶದ ಪರಿಸ್ಥಿತಿಗಳು ಅರಿವಿಗೆ ಬರುತ್ತವೆ.

ಪ್ರಸ್ತುತ ಸಂದರ್ಭದಲ್ಲಿ 3ನೇ ಮಹಾಯುದ್ಧ ಏನಾದರೂ ನಡೆದರೆ ಅದು ನೀರಿಗಾಗಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಎಲ್ಲರೂ ನೀರನ್ನು ಮಿತವಾಗಿ ಬಳಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪೊ›.ಕೆ.ವಿ.ಪ್ರಭಾಕರ್‌, ಕನ್ನಡ ವಿಭಾಗದ ಮುಖ್ಯಸ್ಥ ಡಾ. ತಿಮ್ಮೇಗೌಡ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next