Advertisement

ವಾಗ್ದೇವಿ ವಿಲಾಸ ಶಾಲೆಗೆ ವಂಡರ್‌ಲಾ ಪರಿಸರ ಪ್ರಶಸ್ತಿ

11:40 AM Feb 24, 2017 | |

ಬೆಂಗಳೂರು: ಹಸಿರು ವಲಯ ವೃದ್ಧಿಗೆ ಆದ್ಯತೆ ನೀಡಿರುವ ಶಾಲೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಲು ವಂಡರ್‌ಲಾ ಹಾಲಿಡೇಸ್‌ ಸಂಸ್ಥೆ ನೀಡುವ “ವಂಡರ್‌ಲಾ ಎನ್ವಿರಾನ್‌ಮೆಂಟ್‌ ಅಂಡ್‌ ಎನರ್ಜಿ ಕನ್‌ಸರ್ವೇಶನ್‌ ಪ್ರಶಸ್ತಿ’ಯ ಪ್ರಥಮ ಬಹುಮಾನವನ್ನು ಮಾರತ್‌ಹಳ್ಳಿಯ ವಾಗ್ದೇವಿ ವಿಲಾಸ ಶಾಲೆ ಪಡೆದಿದೆ.

Advertisement

ಪ್ರಥಮ ಬಹುಮಾನವು ಪ್ರಶಸ್ತಿ ಫ‌ಲಕ, 50 ಸಾವಿರ ರೂ. ನಗದು ಪುರಸ್ಕಾರ ಒಳಗೊಂಡಿದೆ. ದ್ವಿತೀಯ ಬಹುಮಾನಕ್ಕೆ ಕೃಷ್ಣಗಿರಿ ಹೊಸೂರಿನ ಮಹರ್ಷಿ ವಿದ್ಯಾ ಮಂದಿರ ಶಾಲೆ, ದಕ್ಷಿಣ ಕನ್ನಡ ಜಿಲ್ಲೆಯ ಸತ್ಯಸಾಯಿ ಲೋಕಸೇವಾ ಹೈಸ್ಕೂಲ್‌ ಭಾಜನವಾಗಿದ್ದು, ತಲಾ 25 ಸಾವಿರ ರೂ. ಬಹುಮಾನ ಪಡೆದಿದೆ. 

ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನ ಕೂರ್ಗ್‌ ಪಬ್ಲಿಕ್‌ ಶಾಲೆ, ಬೆಂಗಳೂರಿನ ವಿದ್ಯಾಶಿಲ್ಪಿ ಅಕಾಡೆಮಿ ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಡೀ ಪೌಲ್‌ ಇಂಟರ್‌ನ್ಯಾಷನಲ್‌ ರೆಸಿಡೆನ್ಸಿಯಲ್‌ ಸ್ಕೂಲ್‌ ತೃತೀಯ ಬಹುಮಾನ ಪಡೆದಿವೆ. ತಲಾ 15 ಸಾವಿರ ನಗದು ಪುರಸ್ಕಾರಕ್ಕೆ ಪಾತ್ರವಾಗಿವೆ. ಹಾಗೆಯೇ 20 ಶಾಲೆಗಳು ವಿಶೇಷ ಸಮಾಧಾನಕರ ಬಹುಮಾನಕ್ಕೆ ಭಾಜನವಾಗಿವೆ.

ಪರಿಸರ ಸಂರಕ್ಷಣೆಗೆ ಪೂರಕವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿ ಹಸಿರು ವೃದ್ಧಿಗೆ ಶ್ರಮಿಸುವ ಶಾಲೆಗಳನ್ನು ಗುರುತಿಸಿ ಉತ್ತೇಜನ ನೀಡುವ ಸಲುವಾಗಿ 
ವಂಡರ್‌ಲಾ ಹಾಲಿಡೇಸ್‌ ವಾರ್ಷಿಕವಾಗಿ ಈ ಪ್ರಶಸ್ತಿ ನೀಡುತ್ತಿದೆ. ಆ ಮೂಲಕ ಯುವಜನತೆಯಲ್ಲಿ ಜಾಗೃತಿ ಮೂಡಿಸಲು ಆದ್ಯತೆ ನೀಡುತ್ತಿದೆ.

ಅದರಂತೆ ಈ ಬಾರಿಯ ಸ್ಪರ್ಧೆಯಲ್ಲಿ ರಾಜ್ಯದ 108 ಶಾಲೆಗಳು ಪಾಲ್ಗೊಂಡಿದ್ದವು. ಆ ಶಾಲೆಗಳ ಪರಿಸರ ಸಂರಕ್ಷಣಾ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಜಾರಿಗೊಳಿಸಿರುವ ಶಾಲೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬಿಡದಿಯಲ್ಲಿರುವ ವಂಡರ್‌ ಲಾ ಆವರಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ನಟಿ ಹರ್ಷಿಕಾ ಪೂಣಚ್ಚ ಅವರು ವಿಜೇತ ತಂಡಗಳಿಗೆ ನಗದು ಪುರಸ್ಕಾರದ ಜತೆಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ವಿತರಿಸಿದರು.

Advertisement

ಈ ವೇಳೆ ಮಾತನಾಡಿದ ವಂಡರ್‌ಲಾ ಹಾಲಿಡೇಸ್‌ ಲಿಮಿಟೆಡ್‌ನ‌ ವ್ಯವಸ್ಥಾಪಕ ನಿರ್ದೇಶಕ ಅರುಣ್‌ ಕೆ. ಚಿಟ್ಟಿಲಪ್ಪಿಲ್ಲಿ, “ವಂಡರ್‌ ಲಾ ಎನ್ವಿರಾನ್‌ಮೆಂಟ್‌ ಅಂಡ್‌ ಎನರ್ಜಿ ಕನ್‌ಸರ್ವೇಶನ್‌ ಅವಾರ್ಡ್ಸ್‌’ ಮೂಲಕ ಹಸಿರು ಸಂರಕ್ಷಿಸಿ ಬೆಳೆಸುವ ಕಾರ್ಯಕ್ಕೆ ಪ್ರೇರಣೆ ನೀಡುವುದು ಸಂಸ್ಥೆಯ ಉದ್ದೇಶ. ಜತೆಗೆ ಶಾಲೆಗಳಲ್ಲಿ ಉತ್ತಮ ಪರಿಸರ ಸೃಷ್ಟಿಗೂ ಒತ್ತು ನೀಡಲಾಗುತ್ತಿದೆ. ಈ ಬಾರಿಯ ಪ್ರಶಸ್ತಿಗೆ ನೋಂದಾಯಿಸಿಕೊಂಡಿದ್ದ ಶಾಲೆಗಳಿಗೂ ಅಭಿನಂದನೆ ಸಲ್ಲಿಸಲಾಗುವುದು’ ಎಂದರು.

ವಂಡರ್‌ಲಾ ಹಾಲಿಡೇಸ್‌ ಲಿಮಿಟೆಡ್‌ನ‌ ಅಧ್ಯಕ್ಷ ಜಾರ್ಜ್‌ ಜೋಸೆಫ್, ಬೆಂಗಳೂರು ವಂಡರ್‌ಲಾ ಮುಖ್ಯಸ್ಥ ತಿಮ್ಮಯ್ಯ, ಪರಿಸರವಾದಿ ವಿಜಯಶಂಕರ್‌ ಇತರರು ಪಾಲ್ಗೊಂಡಿದ್ದರು.

ವಿಶೇಷ ಸಮಾಧಾನಕರ ಬಹುಮಾನ ಪಡೆದ 20 ಶಾಲೆಗಳು: ಬೆಂಗಳೂರು-ದಿ ಸಂಹಿತಾ ಅಕಾಡೆಮಿ, ವರ್ತೂರಿನ ಕೆ.ಕೆ.ಇಂಗ್ಲಿಷ್‌ ಶಾಲೆ, ವರ್ತೂರಿನ ವಾಗ್ದೇವಿ ವಿಲಾಸ ಸ್ಕೂಲ್‌, ಸರ್ಜಾಪುರ ರಸ್ತೆಯ ಡೆಲ್ಲಿ ಪಬ್ಲಿಕ್‌ ಸ್ಕೂಲ್‌, ಕೆಂಗೇರಿಯ ಬಿಜಿಎಸ್‌ ಇಂಟರ್‌ನ್ಯಾಷನಲ್‌ ರೆಸಿಡೆನ್ಸಿಯಲ್‌ ಸ್ಕೂಲ್‌, ಹುಳಿಮಾವಿನ ಬಿಜಿಎಸ್‌ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌, ಕ್ಯಾನ್‌ಡೋರ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌, ಲಯೋಲಾ ಹೈಸ್ಕೂಲ್‌;

ಸಾತನೂರು- ಡೆಲ್ಲಿ ಪಬ್ಲಿಕ್‌ ಸ್ಕೂಲ್‌; ತುಮಕೂರು-ಪ್ರುಡೆನ್ಸ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌, ಕೆಂಪೇಗೌಡ ರೆಸಿಡೆನ್ಷಿಯಲ್‌ ಹೈಸ್ಕೂಲ್‌; ಮೈಸೂರು- ಕಲಿಯುವ ಮನೆ, ಕ್ರೈಸ್ಟ್‌ ಪಬ್ಲಿಕ್‌ ಸ್ಕೂಲ್‌, ಡೆಲ್ಲಿ ಪಬ್ಲಿಕ್‌ ಸ್ಕೂಲ್‌; ಬೆಳಗಾವಿ- ಕೆಎಲ್‌ಇ ಇಂಟರ್‌ನ್ಯಾಷನಲ್‌ ಸ್ಕೂಲ್‌; ಶಿವಮೊಗ್ಗ- ಜ್ಞಾನದೀಪ ಸೀನಿಯರ್‌ ಸೆಕೆಂಡರಿ ಸ್ಕೂಲ್‌; ಚಿಕ್ಕಮಗಳೂರು- ಮೌಂಟನ್‌ ವ್ಯೂ ಪಬ್ಲಿಕ್‌ ಸ್ಕೂಲ್‌; ದಕ್ಷಿಣ ಕನ್ನಡ- ಮೂಡಬಿದಿರೆಯ ಸೇಂಟ್‌ ಥಾಮಸ್‌ ಸ್ಕೂಲ್‌; ರಾಮನಗರ- ಇಗ್ಗಲೂರಿನ ಸರ್ಕಾರಿ ಪ್ರೌಢಶಾಲೆ; ಚಿತ್ರದುರ್ಗ- ಡಾನ್‌ ಬಾಸ್ಕೋ ಐಸಿಎಸ್‌ಇ ಸ್ಕೂಲ್‌.

Advertisement

Udayavani is now on Telegram. Click here to join our channel and stay updated with the latest news.

Next