Advertisement

ವಾಡಿ: ದೇವಿಯ ಮುಂದೆ ಬೃಹತ್ ರಾವಣ ಪ್ರತಿಕೃತಿ ದಹನ

10:28 PM Oct 05, 2022 | Team Udayavani |

ವಾಡಿ: ಪಟ್ಟಣದಲ್ಲಿ 40 ಅಡಿ ಎತ್ತರದ ಬೃಹತ್ ರಾವಣ ಪ್ರತಿಕೃತಿ ದಹನ ಮಾಡುವ ಮೂಲಕ ವಿಜಯದಶಮಿ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ರೈಲ್ವೆ ಕಾಲೋನಿಯ ಮೈದಾನದಲ್ಲಿ ಜೈ ಭವಾನಿ ತರುಣ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ನಾಡದೇವಿ ಅಂಬಾ ಭವಾನಿಯ ಪ್ರತಿಮೆ ಮುಂದೆ ಕಿಕ್ಕಿರಿದು ಸೇರಿದ್ದ ಸಾವಿರಾರು ಜನರು ದೇವಿಯ ದರ್ಶನ ಪಡೆಯುವ ಮೂಲಕ ರಾವಣ ದಹನದಲ್ಲಿ ಪಾಲ್ಗೊಂಡಿದ್ದರು. ಝಗಮಗಿಸುತ್ತಿದ್ದ ವಿದ್ಯುತ್ ಅಲಂಕಾರ ಸಾರ್ವಜನಿಕರ ಗಮನ ಸೆಳೆಯಿತು.

Advertisement

ರಾವಣ ದಹನ ನೆರವೇರಿಸಿ ಮಾತನಾಡಿದ ಸಂಸದ ಡಾ.ಉಮೇಶ ಜಾಧವ್ , ವಾಡಿಯಲ್ಲಿ ಎಲ್ಲಾ ಸಮುದಾಯದ ಜನರು ಸೇರಿ ವಿಜಯದಶಮಿ ಆಚರಿಸುತ್ತಾರೆಂದು ಕನಸಿನಲ್ಲೂ ಯೋಚಿಸಿರಲಿಲ್ಲ . ಭಾರತದ ಸಂಸ್ಕೃತಿ ಸಂಸ್ಕಾರ ಹಬ್ಬದ ರೂಪದಲ್ಲಿ ಉಳಿದಿದೆ. ರಾಮಾಯಣದ ಕಥೆಗಳು ಮುಂದಿನ ಪೀಳಿಗೆಗಾಗಿ ಉಳಿಸಬೇಕಿದೆ. ರಾಮನ ಚರಿತ್ರೆ ಎಲ್ಲರ ಮನೆ ಮನಗಳಿಗೆ ತಲುಪಿಸುವ ಅಗತ್ಯವಿದೆ. ಎಲ್ಲಾ ಸಮುದಾಯವನ್ನು ಗೌರವದಿಂದ ಕಾಣುವ ದಸರಾ ಉತ್ಸವ ಆಗಬೇಕು. ಪಕ್ಷಬೇಧ ಮರೆತು ವಿಜಯದಶಮಿ ಆಚರಿಸುವ ಮೂಲಕ ಸೌಹಾರ್ದತೆ ಉಳಿಸಿಕೊಂಡು ಹೋಗಬೇಕು. ಬದುಕಿಗೆ ಆವರಿಸಿರು. ದುಷ್ಟ ಶಕ್ತಿಗಳ ದಹನ ಮಾಡಿ ದೇವಿಯ ಆರಾಧನೆ ಮಾಡಬೇಕು ಎಂದರು.

ಮುಖಂಡರಾದ ವಿಟ್ಠಲ ನಾಯಕ, ಶಿವರಾಮ ಪವಾರ, ರಾಜು ಮುಕ್ಕಣ್ಣ, ಮಹೆಮೂದ್ ಸಾಹೇಬ, ಅರವಿಂದ ಚವ್ಹಾಣ, ಭೀಮಶಾ ಜಿರೊಳ್ಳಿ, ವಾಲ್ಮೀಕಿ ರಾಠೋಡ, ಭಾಗವತ ಸುಳೆ, ಹರಿ ಗಲಾಂಡೆ, ರಾಮದಾಸ ಚವ್ಹಾಣ, ತಾಯಪ್ಪ ಮೇಕಲ್, ಬಸವರಾಜ ಕೋಲಿ, ಬಸವರಾಜ ಪಂಚಾಳ, ಶರಣು ನಾಟೀಕಾರ, ಮಣಿಕಂಠ ರಾಠೋಡ, ವೀರಣ್ಣ ಯಾರಿ, ಗಿರಿಮಲ್ಲಪ್ಪ ಕಟ್ಟಿಮನಿ, ಅನ್ನಪೂರ್ಣ ದೊಡ್ಡಮನಿ, ಬಾಬುಮಿಯ್ಯಾ, ಅಬ್ರಾಹಂ ರಾಜಣ್ಣ, ಭೀಮರಾವ ದೊರೆ, ಅಶ್ರಫ್ ಖಾನ್ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಪಾಲ್ಗೊಂಡಿದ್ದರು. ರಾವಣನ ಪ್ರತಿಕೃತಿಗೆ ಅಗ್ನಿಸ್ಪರ್ಶವಾಗುತ್ತಿದ್ದಂತೆ ಯುವಕರು ಕುಣಿದು ಕುಪ್ಪಳಿಸಿದರು. ಜೈ ಶ್ರೀರಾಮ ಘೋಷಣೆ ಕೂಗಿ ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next