Advertisement
ನಗರದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತ್, ಕನಕದಾಸ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಮೂರು ದಿನಗಳವರೆಗೆ ಆಯೋಜಿಸಿದ ವಚನ ದರ್ಶನ ವಿಚಾರ ಸಂಕಿರಣಉದ್ಘಾಟಿಸಿ ಅವರು ಮಾತನಾಡಿದರು.
ಹೊಂದಿದ್ದರೂ ಭಿನ್ನಭಾವಗಳಿಗೆ ವಿರೋಧ ಸಲ್ಲದು ಎಂದು ಹೇಳಿದರು. ವಚನಕಾರರದು ಮೂಲತಃ ವೀರಶೈವ ಪ್ರಣೀತವಾದ ತತ್ವವೇ. ಅದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಬಸವಣ್ಣ ಕಾಯಕದಿಂದ ಸಮಾಜದ ವಿವಿಧ ಸ್ತರದ ಭಕ್ತರನ್ನು ಮೇಲಕ್ಕೆತ್ತುವ ಕೆಲಸ ಮಾಡಿದ್ದು, ಎಲ್ಲರಲ್ಲಿ ವೈಚಾರಿಕತೆ ಬಿತ್ತಿದ್ದರು. ಆಧ್ಯಾತ್ಮಿಕ, ಸಾಮಾಜಿಕ, ಉಭಯ ಸ್ತರಗಳಲ್ಲಿಯೂ ವಿಸ್ತಾರಗೊಂಡಿದೆ. ನಕಾರಾತ್ಮಕ ಸಂಕುಚಿತ ಭಾವವನ್ನು ಬಿಟ್ಟು, ಕೇವಲ ಕರ್ನಾಟಕದ ಮಟ್ಟಿಗೆ ವಿಚಾರ ಮಾಡದೇ ತಮ್ಮ ಮೂಗಿನ ನೇರಕ್ಕೆ ಐಡಿಯಾಲಾಜಿ ಮತ್ತು ಕಲ್ಪಕತೆಯಿಂದ ಹೊರ ಬಂದು ವಾಸ್ತವಿಕವಾದ ಭಾರತೀಯ ಸಂಸ್ಕೃತಿಯ ಮೂಲಕವೇ ವಚನ ಭಕ್ತಿ ಕಾಯಕ ದಾಸೋಹಗಳನ್ನು ನೋಡಬೇಕು ಎಂದರು.
Related Articles
Advertisement
ಅಂದಾಜು 70 ಜನರು ವಿಷಯ ಮಂಡನೆ ಮಾಡಲು ಆಗಮಿಸಿದ್ದು ಸಂತಸದ ವಿಷಯವಾಗಿದೆ. ಈ ಸಂಕಿರಣದಲ್ಲಿ ಚರ್ಚೆನಡೆದು ಶಿವಶರಣರ ವಚನಗಳನ್ನು ಹೊಸದಾದ ಈ ನೆಲದ ದೃಷ್ಟಿಕೋನದಲ್ಲಿ ಚರ್ಚೆಗಳು ನಡೆಯುವ ಆಶಯವನ್ನು ವ್ಯಕ್ತಪಡಿಸಿದರು. ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಕೆಳ ಸ್ತರದಲ್ಲಿರುವ ಯೋಗ್ಯತೆ ಇರುವ ವ್ಯಕ್ತಿಗಳನ್ನು ಎತ್ತರಕ್ಕೆ ಏರಿಸಿದ ಕಾಲ ಶರಣರ ಕಾಲವಾಗಿದೆ. ಹೀಗಾಗಿ ಕೆಳಸ್ತರದ ಕಾಯಕಕ್ಕೆ ಮನ್ನಣೆ ದೊರಕಿದೆ. ರಾಮರಾಜ್ಯಕ್ಕೂ ಮತ್ತು ಶರಣರ ಕಾಲದ ಬಸವಣ್ಣನವರಂಥ ಶರಣರು ಕಂಡ ಕಾಲದ ಸಮಾಜಕ್ಕೂ ಭಿನ್ನತೇ ಏನೂ ಇಲ್ಲ. ಭಾರತೀಯ ವಿಚಾರ ಧಾರೆಯಲ್ಲಿಯೇ ಸೂಕ್ಷ್ಮವಾಗಿ ವಚನಕಾಲವನ್ನು ನೋಡಬೇಕಿದೆ ಎಂದು ಹೇಳಿದರು. ವಿವಿ ಕುಲಸಚಿವ ಡಾ| ಸುರೇಶ ನಾಡಗೌಡರ, ಕನಕದಾಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರವೀಂದ್ರನಾಥ ದಂಡಿನ, ರಾಜ್ಯ ಅಭಾಸಾಪ ಸಹಕಾರ್ಯದರ್ಶಿ ಡಾ| ಶಿವಶರಣ ಗೋಡ್ರಾಳ, ದುಂಡಪ್ಪ ಬಡಲಕ್ಕಣ್ಣವರ ಇದ್ದರು. ವಿಚಾರ ಸಂಕಿರಣದಲ್ಲಿ ಸಂಯೋಜಕ ಜನಮೇಜಯ ಉಮ್ಮರ್ಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಯೋಜಕ ಡಾ| ಸಂತೋಷಕುಮಾರ ಪಿ.ಕೆ. ಸ್ವಾಗತಿಸಿದರು. ರವಿ ದಂಡಿನ ವಂದಿಸಿದರು. ನಂತರ ವಿವಿಧ ಗೋಷ್ಠಿಗಳು ನಡೆದವು.