Advertisement
ಪಶುವೈದ್ಯಾಧಿಕಾರಿ ಮರುಳುಸಿದ್ದ ಮಾತನಾಡಿ, ರೈತರು ಕಡ್ಡಾಯವಾಗಿ ತಮ್ಮ ರಾಸುಗಳಿಗೆ ಲಸಿಕೆ ಹಾಕಿಸಬೇಕು.ಇದರಿಂದ ರೋಗ ನಿವಾರಣೆಯ ಜತೆಗೆ ಹಾಲು ಉತ್ಪಾದನೆಯಲ್ಲಿ ಪ್ರಗತಿ ಆಗುತ್ತದೆ ಎಂದು ತಿಳಿಸಿದರು.
ಹೆಚ್ಚಾಗಿ ತಿನ್ನುವುದಿಲ್ಲ. ಬಾಯಲ್ಲಿ ಚಿಕ್ಕಚಿಕ್ಕ ನೀರ್ಗುಳ್ಳೆಗಳಾಗಿ ಕ್ರಮೇಣ ಗುಳ್ಳೆಗಳು ಒಡೆದು ಜೊಲ್ಲು ಸುರಿಯುತ್ತವೆ.
ಒಮ್ಮೊಮ್ಮೆ ನಾಲಿಗೆಯ ಮೇಲೆ ಹುಣ್ಣು ಜಾಸ್ತಿಯಾಗಿ ಮೇಲಿನ ಪದರವೇ ಕಿತ್ತು ಬರುತ್ತದೆ. ಬಾಯಿ ಹುಣ್ಣಿನಿಂದಾಗಿ
ಮೇವು ತಿನ್ನಲಾಗುವುದಿಲ್ಲ. ಕಾಲಿನ ಗೊರಸಿನ ಮಧ್ಯ ಹುಣ್ಣುಗಳಾಗಿ ನೋಣ ಕುಳಿತು ಹುಳುಗಳಾಗುತ್ತವೆ. ಕೆಲವು
ರಾಸುಗಳಲ್ಲಿ ಕೆಚ್ಚಲಿನ ಮೇಲೆ ಗುಳ್ಳೆಗಳು ಕಾಣಿಸುತ್ತವೆ. ತುಂಬು ಗರ್ಭದ ರಾಸುಗಳಲ್ಲಿ ಗರ್ಭಪಾತವಾಗುವ
ಸಂಭವ ಹೆಚ್ಚು. ಸುಮಾರು 8ರಿಂದ 12 ದಿನಗಳ ವರೆಗೆ ರಾಸುಗಳು ಅಪಾರ ವೇದನೆಯಿಂದ ನರಳುತ್ತವೆ ಎಂದು
ರೋಗದ ಲಕ್ಷಣಗಳ ಕುರಿತು ಮಾಹಿತಿ ನೀಡಿದರು. ವೈದ್ಯಾಧಿಕಾರಿ ಶ್ರೀಧರ ವೃಂದಾ ಇತರರಿದ್ದರು.