Advertisement

18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ: ಸಚಿವ

05:01 PM Jun 07, 2021 | Team Udayavani |

ಕೆಂಗೇರಿ: ಕ್ಷೇತ್ರ ವ್ಯಾಪ್ತಿಯ ಪ್ರತಿ ವಾರ್ಡ್ಗೂ ಪ್ರತಿನಿತ್ಯ 1 ಸಾವಿರ ಲಸಿಕೆ ಲಭ್ಯವಿದ್ದು, 18 ವರ್ಷತುಂಬಿದ ಪ್ರತಿಯೊಬ್ಬರಿಗೂ ಲಸಿಕೆ ಸಿಗಲಿದೆ ಎಂದುಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ಹೇಳಿದರು.

Advertisement

ಯಶವಂತಪುರ ವಿಧಾನಸಭಾ ಕ್ಷೇತ್ರದಹೆಮ್ಮಿಗೆಪುರ ವಾರ್ಡ್ ತಲಘಟ್ಟಪುರ ಗ್ರಾಮದಸರ್ಕಾರಿ ಶಾಲೆಯ ಆವರಣದಲ್ಲಿ ಲಾಕ್ಡೌನ್ನಿಂದಸಂಕಷ್ಟಕ್ಕೆ ಸಿಲುಕಿರುವ ಬಡವರು, ಕೂಲಿಕಾರ್ಮಿಕರು, ಶೆಡ್ಲ್ಲಿ ವಾಸಿಸುತ್ತಿರುವ ಜನರಿಗೆ ದಿನಸಿಕಿಟ್ಗಳನ್ನು ವಿತರಿಸಿ ಮಾತನಾಡಿದರು.

ಪ್ರಾರಂಭದಲ್ಲಿ ಲಸಿಕೆ ಪಡೆಯಲು ಉತ್ಸಾಹತೋರಿಸಲಿಲ್ಲ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದಂತೆಎಲ್ಲರೂ ಲಸಿಕೆ ಪಡೆಯಲು ನೂಕುನುಗ್ಗಲುಹೆಚ್ಚಾಗಿದ್ದು ಈಗ ಲಸಿಕೆಗೆ ಯಾವುದೇ ನಿರ್ಬಂಧವಿಲ್ಲದೆ ದೊರೆಯುತ್ತಿದ್ದು, ಪ್ರತಿನಿತ್ಯ 1 ಸಾವಿರಜನರಿಗೆ ಲಸಿಕೆ ನೀಡಲು ಸೂಚಿಸಲಾಗಿದೆ ಎಂದರು.18 ರಿಂದ 44 ವರ್ಷಗಳ ನಾಗರಿಕರಿಗೆ ತಿಂಗಳಕೊನೆಯಲ್ಲಿ ಶೇ.50 ರಷ್ಟು ಲಸಿಕೆ ನೀಡಲಿದ್ದು.ಉಳಿದ ಶೇ.50 ಜುಲೈ ಅಂತ್ಯದ ಒಳಗೆನೀಡಲಾಗುವುದು.

ಕ್ಷೇತ್ರ ವ್ಯಾಪ್ತಿಯಲ್ಲಿ ಯಾರೂಸೋಂಕನ್ನು ಗೌಪ್ಯತೆಯಿಂದ ಮುಚ್ಚಿಟ್ಟು ಅನಾಹುತಮಾಡಿಕೊಳ್ಳಬೇಡಿ, ಕೊರೊನಾ ಚಿಕಿತ್ಸೆಗೆ ಎಲ್ಲಾರೀತಿಯ ಮುಂಜಾಗ್ರತೆ ವಹಿಸಲಾಗಿದೆ ಯಾರುಭಯ ಪಡಬೇಕಾದ ಅವಶ್ಯಕತೆಯಿಲ್ಲ ಎಂದರು.ಪಾಲಿಕೆ ಮಾಜಿ ಸದಸ್ಯ ಆರ್ಯ ಶ್ರೀನಿವಾಸ್ಮಾತನಾಡಿ, ಕೊರೊನಾ 2ನೇ ಅಲೆಯು ಅತ್ಯಂತಕ್ರೂರವಾಗಿದ್ದು ಆತ್ಮೀಯರನ್ನು ಸಂಬಂಧಿಕರನ್ನುಕಳೆದುಕೊಂಡಿದ್ದೇವೆ. ಬಡವರು ಶ್ರಮಿಕರುಕೆಲಸವಿಲ್ಲದೆ ಪರದಾಡುತ್ತಿರುವುದನ್ನು ನೋಡಲಾಗದೇ ಸಹಕಾರ ಸಚಿವರ ಸಹಕಾರದಲ್ಲಿ ಸುಮಾರು5 ಸಾವಿರ ದಿನಸಿ ಕಿಟ್ಗಳನ್ನು ವಾರ್ಡ್ವ್ಯಾಪ್ತಿಯಲ್ಲಿವಾಸಿಸುವ ಬಡವಬಲ್ಲಿದ ಎಂಬಭೇದಭಾವವಿಲ್ಲದೆ ಪ್ರತಿಯೊಬ್ಬರಿಗೂ ವಿತರಿಸಲಾಗುತ್ತಿದೆ ಎಂದರು.

ತರಳು ಗ್ರಾ.ಪಂನ 10, ಸೋಮನಹಳ್ಳಿಗ್ರಾ.ಪಂ. 6, ನೆಲಗುಳಿ ಗ್ರಾಮ ಪಂಚಾಯತಿಯ9 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟವ್ಯಕ್ತಿಯ ಕುಟುಂಬದ ಸದಸ್ಯರಿಗೆ 1 ಲಕ್ಷರೂಪಾಯಿಗಳ ಸಹಾಯಧನ ವಿತರಿಸಿದರು.ಬೆಂಗಳೂರು ದಕ್ಷಿಣ ವಿಭಾಗದ ಉಪವಿಭಾಗಾಧಿಕಾರಿ ಡಾ.ಶಿವಣ್ಣ, ವೈದ್ಯಾಧಿಕಾರಿ ಧನ್ಯಕುಮಾರ್‌,ಬಿಬಿಎಂಪಿ ಕಾರ್ಯಕಾರಿ ಅಧಿಕಾರಿ ನಾಗವೇಣಿ,ಮುಖಂಡರಾದ ಆರ್ಯ ಹನುಮಂತೇಗೌಡ,ಜಮುನಾ, ವಿಜಯಕುಮಾರ್‌, ಪವನ್ಕುಮಾರ್‌,ಮುನಿರಾಜೇಗೌಡ, ಕೇಶವ್‌, ಶ್ವೇತಾಗೋಪಾಲ್‌,ಕಗ್ಗಲೀಪುರ ಶಿವಕುಮಾರ್‌, ಉತ್ತರಿ ವೆಂಕಟಪ್ಪ,ಮಹೇಶ್ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next