Advertisement

ಕಲ್ಯಾಣ್‌-ಡೊಂಬಿವಲಿ: ಶೇ. 20 ಫಲಾನುಭವಿಗಳಿಗೆ ಮಾತ್ರ ಲಸಿಕೆ

11:28 AM Apr 22, 2021 | Team Udayavani |

ಥಾಣೆ: ಲಸಿಕೆ ಅಭಿಯಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದರೂ ಕಲ್ಯಾಣ್‌-ಡೊಂಬಿವಲಿ, ಭಿವಂಡಿ ಮತ್ತು ಉಲ್ಲಾಸ್‌ ನಗರದಲ್ಲಿ ಅಭಿ ಯಾನ ವೇಗ ಪಡೆದುಕೊಂಡಿಲ್ಲ. ಜಿಲ್ಲೆಯ ಶೇ. 28ರಷ್ಟು ಅರ್ಹ ನಾಗರಿಕರಿಗೆ ಲಸಿಕೆ ನೀಡಲಾಗಿದ್ದರೆ, ಈ ಮೂರು ನಗರಗಳಲ್ಲೂ ಶೇ. 20ಕ್ಕಿಂತ ಕಡಿಮೆ ನಾಗರಿಕರಿಗೆ ಲಸಿಕೆ ನೀಡಲಾಗಿದೆ. ಇನ್ನೊಂದೆಡೆ ಲಸಿಕೆ ಶೇಕಡಾವಾರು ಪ್ರಮಾಣದಲ್ಲಿ ಥಾಣೆ, ನವಿಮುಂಬಯಿ ಮತ್ತು ಮೀರಾ-ಭಾಯಂದರ್‌ ಉಪನಗರ ಗಳು ಮುಂದಿವೆ. ಥಾಣೆ ಜಿಲ್ಲೆಯಲ್ಲಿ ಪ್ರತೀದಿನ ಸರಾಸರಿ ಐದು ಸಾವಿರ ರೋಗಿಗಳು ಕಂಡುಬರು ತ್ತಿದ್ದು, 35ರಿಂದ 40 ಮಂದಿ ಸಾವನ್ನಪ್ಪುತ್ತಿದ್ದಾರೆ.

Advertisement

ಸೋಮವಾರದವರೆಗೆ ಜಿಲ್ಲೆಯಲ್ಲಿ 8,96,860 ಮಂದಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ 6,63,742 ಮಂದಿ 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಾಗರಿಕರು ಸೇರಿದ್ದಾರೆ. ಅದರಲ್ಲಿ 6,16,895 ಮಂದಿಗೆ ಮೊದಲ ಡೋಸ್‌ ನೀಡಲಾಗಿದೆ. ಎರಡನೇ ಡೋಸ್‌ ಅನ್ನು 46,847 ಮಂದಿಗೆ ನೀಡಲಾಗಿದೆ. ಉಳಿದ 2,33,118 ಮಂದಿಯಲ್ಲಿ ಮುಂಚೂಣಿ ಆರೋಗ್ಯ ಕಾರ್ಯಕರ್ತರು, ಪೊಲೀಸರು, ಸ್ವತ್ಛತಾ ಸಿಬಂದಿ ಸೇರಿದ್ದಾರೆ.
ನವಿಮುಂಬಯಿಯ ಜನಸಂಖ್ಯೆ 15,2,120ರಷ್ಟಿದ್ದು, ಈ ಪ್ರದೇಶದ 4,50,636 ನಾಗರಿಕರು 45 ವರ್ಷ ವಯಸ್ಸಿನವರಾಗಿ¨ªಾರೆ. ಈ ಸ್ಥಳದಲ್ಲಿ ಶೇ. 42ರಷ್ಟು ಲಸಿಕೆ ಹಾಕಲಾಗಿದೆ. ಮೀರಾ- ಭಾಯಂದರ್‌ನಲ್ಲೂ 10,47,346 ಜನಸಂಖ್ಯೆ ಇದ್ದು, 3, 14,238 ಮಂದಿ 45 ವರ್ಷಕ್ಕಿಂತ ಮೇಲ್ಪಟ್ಟವರಿದ್ದಾರೆ. ಇಲ್ಲಿ ಶೇ. 40ರಷ್ಟು ನಾಗರಿಕರಿಗೆ ಲಸಿಕೆ ನೀಡಲಾಗಿದೆ. ಥಾಣೆ ಜನಸಂಖ್ಯೆ 22,06,060ರಷ್ಟಿದ್ದು, ಇಲ್ಲಿ ಶೇ. 34ರಷ್ಟು ನಾಗರಿಕರಿಗೆ ಲಸಿಕೆ ನೀಡಲಾಗಿದೆ.
ಕಲ್ಯಾಣ್‌- ಡೊಂಬಿವಲಿಯ ಜನಸಂಖ್ಯೆ 19,16,863ರಷ್ಟಿದ್ದು, 5,75,059 ಮಂದಿ 45 ವರ್ಷಕ್ಕಿಂತ ಮೇಲ್ಪಟ್ಟವರಾಗಿ¨ªಾರೆ. ಇಲ್ಲಿ ಶೇ. 20ರಷ್ಟು ಲಸಿಕೆ ಹಾಕಲಾಗಿದೆ. ಥಾಣೆ ಗ್ರಾಮೀಣ ಪ್ರದೇಶದಲ್ಲಿ 20,58,755ರಷ್ಟು ಜನಸಂಖ್ಯೆಯಿದ್ದು, 6,17, 627 ಮಂದಿ 45 ವರ್ಷಕ್ಕಿಂತ ಮೇಲ್ಪಟ್ಟವರಿ¨ªಾರೆ. ಇಲ್ಲಿ ಶೇ. 22 ರಷ್ಟು ಲಸಿಕೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next