Advertisement

ನಿಗದಿತ ಪ್ರಮಾಣಕ್ಕಿಂತ ಕಡಿಮೆ ಲಸಿಕೆ: ಕ್ರಮ

07:42 PM May 10, 2021 | Team Udayavani |

ಮಂಡ್ಯ: ಪ್ರಸ್ತುತ ಸರ್ಕಾರ ನಿಗದಿ ಮಾಡಿರುವಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕೆಲವು ಕಡೆಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ಕೊಡುತ್ತಿರುವ ಬಗ್ಗೆದೂರುಗಳು ಕೇಳಿ ಬರುತ್ತಿದ್ದು, ಇಂಥ ಘಟನೆಗಳುನಡೆದರೆ ಅಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.

Advertisement

ನಗರದಲ್ಲಿ ಸುದಿಗೋಷ್ಠಿಯಲ್ಲಿ ಮಾತನಾಡಿ, ಕೆಲಕಡೆ ಆರೋಗ್ಯ ಸಿಬ್ಬಂದಿ ಮನೆಗೆ ವ್ಯಾಕ್ಸಿನ್‌ಕೊಂಡೊಯ್ದು ತಮಗೆ ಬೇಕಾದವರಿಗೆ ಹಾಗೂಕುಟುಂಬಕ್ಕೆ ಸೇರಿದವರಿಗೆ ನೀಡುತ್ತಿದ್ದಾರೆ ಎಂಬುದರಬಗ್ಗೆಯೂ ದೂರುಗಳು ಬಂದಿದ್ದು, ಈ ಬಗ್ಗೆ ಮೂರುಇಲಾಖೆಗಳ ಅಕಾರಿಗಳ ತಂಡಕ್ಕೆ ತನಿಖೆ ನಡೆಸಲು ಸೂಚಿಸಲಾಗಿದೆ.

ವ್ಯತ್ಯಾಸ ಕಂಡು ಬಂದರೆ ನಿರ್ದಾಕ್ಷಿಣ್ಯಕ್ರಮ ಜರುಗಿಸಲಾಗುವುದು ಎಂದರು.ಮಿಮ್ಸ್‌-ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಘಟಕ:ಕೋವಿಡ್‌ ಅಲೆಯಿಂದ ಉಂಟಾಗಿರುವ ಆಕ್ಸಿಜನ್‌ಸಮಸ್ಯೆ ನೀಗಿಸಲು ಮಿಮ್ಸ್‌ ಹಾಗೂ ಮಳವಳ್ಳಿತಾಲೂಕು ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್‌ ಘಟಕಸ್ಥಾಪ ನೆಗೆ ಸರ್ಕಾರ ಮುಂದಾಗಿದ್ದು, ಉಳಿದ 5ತಾಲೂಕು ಕೇಂದ್ರಗಳಲ್ಲೂ ಶೀಘ್ರ ಆಮ್ಲಜನಕ ತಯಾರಿಕಾ ಘಟಕ ಸ್ಥಾಪನೆಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪ್ರತಿನಿತ್ಯ 8ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಬೆಂಗಳೂರು ಸೇರಿದರೆ ಇತರೆ ಜಿಲ್ಲೆಗಳ ರೋಗಿಗಳೂ ಮಂಡ್ಯ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಇಂಥ ಸಂಕಷ್ಟ ಪರಿಸ್ಥಿತಿಯನ್ನುನಿಯಂತ್ರಿಸುವುದು ಕಷ್ಟಕರವಾಗಿದೆ. ಬಹುತೇಕರೋಗಿಗಳಿಗೆ ಆಕ್ಸಿಜನ್‌ ಪೂರೈಕೆಯದ್ದೇ ಸಮಸ್ಯೆಯಾಗಿದೆ. ಇದನ್ನು ಸರಿದೂಗಿಸುವ ಕೆಲಸವನ್ನು ಜಿಲ್ಲಾಡಳಿತನಮ್ಮ ಅ ಕಾರಿಗಳು ಮಾಡುತ್ತಿದ್ದಾರೆ ಎಂದರು.ಆಕ್ಸಿಜನ್‌ ಸಮಸ್ಯೆಯನ್ನು ಶಾಶ್ವತವಾಗಿ ನೀಗಿಸುವಸಲುವಾಗಿ ಮಿಮ್ಸ್‌ ಆವರಣದಲ್ಲಿ 500 ಎಲ್‌ಪಿಎಂಆಕ್ಸಿಜನ್‌ ಘಟಕ ಹಾಗೂ ಮಳವಳ್ಳಿ ತಾಲೂಕು ಆಸ್ಪತ್ರೆಆವರಣದಲ್ಲಿ 390 ಎಲ್‌ಪಿಎಂ ಸಾಮರ್ಥ್ಯದ ಘಟಕಸ್ಥಾಪನೆಗೆ ಸಿದ್ಧತೆ ನಡೆಸಲಾಗಿದೆ.

ಉಳಿದ 5ತಾಲೂಕುಗಳಲ್ಲೂ ಶೀಘ್ರ ಆಕ್ಸಿಜನ್‌ ಸ್ಥಾಪನೆಗೆ ಚಿಂತನೆನಡೆಸಲಾಗಿದೆ. ಆಕ್ಸಿಜನ್‌ ಘಟಕ ಅಳವಡಿಸಲು 6ರಿಂದ 8 ವಾರಗಳ ಕಾಲಾವಕಾಶ ಅಗತ್ಯವಿದೆ. ಅಷ್ಟರಲ್ಲಿಬೇರೆ ಮೂಲದಿಂದ ಆಕ್ಸಿಜನ್‌ ಸರಬರಾಜು ಮಾಡಲುಯೋಜನೆ ರೂಪಿಸುತ್ತಿರುವುದಾಗಿ ತಿಳಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ.ವಿಜಯಕುಮಾರ್‌ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next