Advertisement

Vacation: ಪಣಜಿ: ಸಾಲು ಸಾಲು ರಜೆ, ಪ್ರಯಾಣ; ವಿಮಾನ ದರ ದುಪ್ಪಟ್ಟು

02:34 PM Aug 06, 2023 | Team Udayavani |

ಪಣಜಿ: ರಜೆ ಅಥವಾ ದೀರ್ಘ ವಾರಾಂತ್ಯವಾಗಿರಲಿ ಅನೇಕ ಜನರು ಗೋವಾದಲ್ಲಿ ಸಮಯ ಕಳೆಯಲು ಬಯಸುತ್ತಾರೆ. ಈಗ ಸ್ವಾತಂತ್ರ್ಯ ದಿನದ ವಾರಾಂತ್ಯವು ಸಮೀಪಿಸುತ್ತಿರುವಾಗ ಗೋವಾಗೆ ವಿಮಾನ ಟಿಕೆಟ್‍ಗಳ ಬೆಲೆ ಸಾಮಾನ್ಯ ಬೆಲೆಗೆ ಹೋಲಿಸಿದರೆ ಐದು ಪಟ್ಟು ಹೆಚ್ಚಾಗಿದೆ.

Advertisement

ನೀವು ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಲು ಬಯಸಿದರೆ ಟಿಕೆಟ್‍ಗಾಗಿ ಸುಮಾರು 9,800 ರೂ.ಗಳನ್ನು ಖರ್ಚು ಮಾಡಲು ನೀವು ಸಿದ್ಧರಾಗಿರಬೇಕು. 2,200 ರೂಪಾಯಿ ವೆಚ್ಚವಾಗುತ್ತಿದ್ದ ಪ್ರವಾಸಕ್ಕೆ ನೀವು ಈಗ 9,800 ರೂಪಾಯಿಗಳನ್ನು ತೆರಬೇಕಾಗಲಿದೆ.

ಬೆಂಗಳೂರಿನಿಂದ ಗೋವಾ ಮಾತ್ರವಲ್ಲದೆ ಇತರ ಸ್ಥಳಗಳಿಂದಲೂ ಗೋವಾಕ್ಕೆ ಬರಬೇಕಾದರೆ ಆಗಸ್ಟ್ 11 ರಂದು ಪುಣೆಯಿಂದ ಬರುವ ವಿಮಾನ ಟಿಕೆಟ್ ದರವು ಸಾಮಾನ್ಯ ಬೆಲೆ 4,500 ರೂ.ಗಳಿಂದ 13,300 ರೂ.ಗೆ ಏರಿಕೆಯಾಗಿದೆ.

ಆಗಸ್ಟ್ 15 ರ ಶನಿವಾರ ಮತ್ತು ಭಾನುವಾರದಂದು ಸಾರ್ವಜನಿಕ ರಜೆ ಇರುವುದರಿಂದ ಮಂಗಳವಾರ ಕೊನೆಗೊಳ್ಳುವ ಐದು ದಿನಗಳ ರಜೆಗಾಗಿ ಕಚೇರಿ ನೌಕರರು ಸೋಮವಾರ ಒಂದು ದಿನ ಹೆಚ್ಚು ರಜೆ ತೆಗೆದುಕೊಂಡರೆ ಐದು ದಿನಗಳ ದೀರ್ಘ ಕಾಲದ ರಜೆ ಲಭಿಸುತ್ತದೆ.

ಇದರಿಂದಾಗಿ ಹಲವು ಮಾರ್ಗಗಳಲ್ಲಿ ವಿಮಾನ ದರ ದುಪ್ಪಟ್ಟಾಗಿದೆ. ಈ ಹಿಂದೆ ಚೆನ್ನೈನಿಂದ ಗೋವಾಕ್ಕೆ ಪ್ರಯಾಣಿಸಲು ಪ್ರಯಾಣಿಕರಿಗೆ 4,000 ರೂ., ಆದರೆ ಆಗಸ್ಟ್ 11 ರಿಂದ ಈ ದರವು 9,500 ರೂ. ರಿಟರ್ನ್ ಟಿಕೆಟ್‍ಗಳು ಇನ್ನಷ್ಟು ದುಬಾರಿಯಾಗಿವೆ ಮತ್ತು ಚೆನ್ನೈಗೆ ಹಿಂತಿರುಗಲು ನಿಮಗೆ 9,200 ಪಾವತಿಸಬೇಕಾಗಲಿದೆ.

Advertisement

ದೆಹಲಿಯಿಂದ ವಿಮಾನಯಾನ ಮಾಡುವವರು ಪ್ರತಿ ಟಿಕೆಟ್‍ಗೆ 4,600 ರೂಪಾಯಿಯಿಂದ ಸದ್ಯ  9,500 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಆಗಸ್ಟ್ 15 ರಂದು ದೆಹಲಿಗೆ ಹಿಂದಿರುಗುವ ದರವೂ 11 ಸಾವಿರ ರೂ.ಗೆ ಏರಿಕೆಯಾಗಿದೆ. ಹೈದರಾಬಾದ್‍ನಿಂದ ಪ್ರಯಾಣಿಸುವವರ ಸ್ಥಿತಿಯೂ ಇದೇ ಆಗಿದೆ. ಈ ಹಿಂದೆ 3,700 ರೂಪಾಯಿ ಇದ್ದ ಟಿಕೆಟ್‍ಗೆ ಈಗ 7,750 ರೂ. ತೆರಬೇಕಾಗಲಿದೆ.

ಇದೀಗ ಮುಂಬಯಿ-ಗೋವಾ ವಿಮಾನ ದರ 5,800 ರೂ.ಗೆ ತಲುಪಿದೆ. ಈ ಹಿಂದೆ ಮುಂಬೈ-ಗೋವಾ ಪ್ರಯಾಣಕ್ಕೆ ಸರಾಸರಿ 2.600 ರೂ ಇತ್ತು. ಇದಲ್ಲದೆ, ಮುಂಬೈನಿಂದ ಗೋವಾಕ್ಕೆ ಬಸ್ ಪ್ರಯಾಣವು ಸಾಮಾನ್ಯ ವಿಮಾನ ದರಕ್ಕಿಂತ ಹೆಚ್ಚು ದುಬಾರಿಯಾಗಿದೆ. ಆಗಸ್ಟ್ 11 ರಿಂದ್ ಸ್ಲೀಪರ್ ಎಸಿ ಸೀಟ್‍ಗಳಿಗೆ 4,000 ರೂ ಗಳಷ್ಟು ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next