Advertisement

ರಜೆ ಇದ್ದರೇ ಒಳ್ಳೆಯದು

08:00 AM Sep 13, 2017 | Harsha Rao |

ರಜೆ ಇಲ್ಲದೆಯೂ ಆಕೆ ತನ್ನ ಕೆಲಸವನ್ನು ಸಮರ್ಪಕವಾಗಿ ನಿಭಾಯಿಸಬಲ್ಲಳಾದರೂ ಇಲ್ಲಿ ಎಲ್ಲರ ಆತಂಕವೂ ಒಂದೇ ಸಮನಾಗಿರುವುದಿಲ್ಲ. ಒಬ್ಬೊಬ್ಬರದೂ ಬೇರೆ ಬೇರೆ ರೀತಿಯದ್ದೇ ಆಗಿರುತ್ತದೆ. 

Advertisement

ಹೆಂಗಸರಿಗೆ ಋತುಸ್ರಾವದ ಆ ದಿನಗಳಲ್ಲಿ, ಅದೂ ಉದ್ಯೋಗದಲ್ಲಿರುವವರಿಗೆ ಕೊಂಚ ವಿಶ್ರಾಂತಿ ಬೇಕೇ ಬೇಕು. ಇತ್ತೀಚಿನ ದಿನಗಳಲ್ಲಿ ಈ ನಿಯಮವೇನೂ ಜಾರಿಗೆ ಬರದೆ ಆ ನೋವಿನ ದಿನಗಳಲ್ಲೂ ಸಹ್ಯವೋ, ಅಸಹ್ಯವೋ, ಮನೆಯ ಒಳ ಹೊರಗೆ ದುಡಿಯುತ್ತಲೇ ಬಂದಿದ್ದಾಳಾದರೂ ಇತ್ತೀಚಿನ ದಿನಗಳಲ್ಲಿ ಇದಕ್ಕಾಗಿ ರಜೆ ಇದ್ದರೆ ಒಳ್ಳೆಯದೆಂಬುದು ನನ್ನ ಅಭಿಪ್ರಾಯ. ಒಂದು ರೀತಿ ಇದರಿಂದ ಅವರ ಆ ದಿನಗಳು ಜಗಜಾjಹೀರಾಗುವುದು ದಿಟವಾದರೂ ಈ ವಿಷಯದಲ್ಲಿ ಮಕ್ಕಳ ಕುತೂಹಲವನ್ನೂ ಹೆಚ್ಚಿಸಬಹುದಾದರೂ ಅಂದಿನ ಆ ದಿನದಲ್ಲಿ ದಣಿದ ಮನಕ್ಕೆ ವಿಶ್ರಾಂತಿ ಅವಶ್ಯಕ ಎನಿಸುತ್ತೆ.

ರಜೆ ಇಲ್ಲದೆಯೂ ಆಕೆ ತನ್ನ ಕೆಲಸವನ್ನು ಸಮರ್ಪಕವಾಗಿ ನಿಭಾಯಿಸಬಲ್ಲಳಾದರೂ ಇಲ್ಲಿ ಎಲ್ಲರ ಆತಂಕವೂ ಒಂದೇ ಸಮನಾಗಿರುವುದಿಲ್ಲ. ಒಬ್ಬೊಬ್ಬರದೂ ಬೇರೆ ಬೇರೆ ರೀತಿಯದ್ದೇ ಆಗಿರುತ್ತದೆ. ಕೆಲವರಿಗೆ ವಿಪರೀತ ಸ್ರಾವವಾಗಿ ಕಷ್ಟವಾದರೆ, ಇನ್ನು ಕೆಲವರು ಆ ದಿನಗಳನ್ನು ಆರಾಮದಿಂದಲೇ ಕಳೆಯುತ್ತಾರೆ. ಕೆಲವರಿಗೆ ಈ ಮೊದಲನೆಯ ದಿನವೆಂಬುದು ಯಮಯಾತನೆಯ ಪರಿಸ್ಥಿತಿ. ಯಾರಲ್ಲೂ ಹೇಳಿಕೊಳ್ಳಲಾಗದಂಥದ್ದು. 

ಮೊದಲು ನಮ್ಮ ಕಾಲದಲ್ಲಿ ಆ ದಿನಗಳಲ್ಲಿ ನಾವು ಬಹಿಷ್ಠೆಯರಾಗಿದ್ದು ಹಿರಿಕಿರಿಯರೆಲ್ಲರಿಗೂ ತಿಳಿದಿರುತ್ತಿತ್ತು. ಎಲ್ಲರ ಮುಂದೆ ಚಾಪೆ ಚೊಂಬಿನ ಜೊತೆ ಮೂಲೆ ಹಿಡಿದು ಕುಳಿತರೂ ಏನೂ ಅನಿಸುತ್ತಿರಲಿಲ್ಲ. ನಂತರದ ದಿನಗಳಲ್ಲಿ ಅದು ಗುಟ್ಟಾಗಿ ಹೋಯಿತು. ಹೊರಗೆ ಕೂಡದೆ, ಒಳಗಡೆ ಇದ್ದು ಹಿರಿಯರ ದೃಷ್ಟಿಯಲ್ಲಿ ಅಪರಾಧಿಯಾದರೂ ನಾಚಿಕೆಯಿಂದ ಸುಮ್ಮನೆ ಒಳಗಿದ್ದು ಬಿಡುತ್ತಿದ್ದರು. ಆದರೀಗ ಈ ದಿನಗಳಲ್ಲಿ ಮಾನಸಿಕ ಒತ್ತಡ ಹೆಚ್ಚು. ಅದರೊಡನೆ ಕೆಲಸದ ಒತ್ತಡವೂ ಸೇರಿ ಮಾನಸಿಕವಾಗಿ ದೈಹಿಕವಾಗಿ ಅವರಿಗೆ ಮತ್ತಷ್ಟು ಇರಿಸುಮುರಿಸು ಉಂಟು ಮಾಡುತ್ತೆ. ಅಂಥದ್ದರಲ್ಲಿ ಮುಟ್ಟಿನ ದಿನ ನೋವೂ ಜೊತೆಯಾದರೆ ಅವರು ಸಿಡಿಮಿಡಿಗೊಳ್ಳುವುದು ಸಹಜ.

ಮೊದಲಿನವರು ಮಾಡಿದ್ದ ಎಲ್ಲಾ ನಿರ್ಧಾರಗಳೂ ವೈಜಾnನಿಕ ದೃಷ್ಟಿಯಿಂದ ಸರಿಯಾಗಿತ್ತು. ಆ ದಿನಗಳಲ್ಲಿ ಅವರು ಸುಮ್ಮನೆ ಕುಳಿತೋ, ಅಥವ ಮಲಗಿಯೋ ಆ ಮೂರು ದಿನಗಳನ್ನು ಕಳೆಯಬಹುದಿತ್ತು. ಆದರೀಗ ಹಾಗಾಗುವುದಿಲ್ಲ. ಮೊದಲಿನಂತೆ ಈಗ ಅವಿಭಕ್ತ ಕುಟುಂಬಗಳೂ ಇಲ್ಲ. ಇಲ್ಲಿ ಎಲ್ಲವನ್ನೂ ಮನೆಯೊಡತಿಯೇ ನಿಭಾಯಿಸಬೇಕಾಗುತ್ತದೆ. ಬೇರೆ ದೇಶಗಳ ಹೆಂಗಸರ ಬಗೆಗಿನ ಈ ರೀತಿಯ ಔದಾರ್ಯ ಸರಿಯಾಗಿದೆ. ನಮ್ಮ ದೇಶದಲ್ಲೂ ಇದೇ ನೀತಿಯನ್ನು ಜಾರಿಗೆ ತಂದರೆ ಒಳ್ಳೆಯದು. ಆ ದಿನಗಳಲ್ಲಿ ಅವರಿಗೆ ಕಡೆಯ ಪಕ್ಷ ಒಂದು ದಿನದ ಮಟ್ಟಿಗಾದರೂ ರಜೆ ದೊರೆತರೆ ಒಳ್ಳೆಯದೆಂದು ನನ್ನ ಅಭಿಪ್ರಾಯ.

Advertisement

– ಸುಜಲಾ ಘೋರ್ಪಡೆ, ನ್ಯಾನಪ್ಪನಹಳ್ಳಿ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next