Advertisement
ಕಲ್ಲಬೆಟ್ಟು ಶಾಲೆಯ ಆವರಣದ ಬಳಿ ಕಳೆದ 50 ವರ್ಷಗಳ ಹಿಂದೆ ಸರಕಾರದ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮದಲ್ಲಿ ನಿರ್ಮಾಣಗೊಂಡಿರುವ ಸಮಾಜ ಮಂದಿರದ ಕಟ್ಟಡದಲ್ಲಿ ಈ ಹಿಂದೆ ಲೈಬ್ರರಿ, ಕಲ್ಲಬೆಟ್ಟು ಯುವಕ ಮಂಡಲಗಳು ಕರ್ತವ್ಯ ನಿರ್ವಹಿಸುತ್ತಿದ್ದವು. ಊರಿನ ಕೃಷಿ ಚಟುವಟಿಕೆಗೆ ಸಂಬಂಧಪಟ್ಟ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಿದ್ದವು. ಅನಂತರದ ದಿನಗಳಲ್ಲಿ ತಾಲೂಕು ಅಭಿವೃದ್ಧಿ ಮಂಡಳಿ ಇಲಾಖೆ ಅಧಿಕಾರಿಗಳು ಈ ಕಟ್ಟಡವನ್ನು ಆಗಿನ ಮಂಡಲ ಪಂಚಾಯತ್‌ಗೆ ಹಸ್ತಾಂತರಿಸಿದ್ದರು.
Related Articles
ಸದ್ಯ ಶಾಲೆಯಲ್ಲಿ ಪರೀಕ್ಷೆಗಳು ನಡೆಯುತ್ತಿರುವ ಈ ವೇಳೆಯಲ್ಲಿ ಗ್ರಾಮ ಕರಣಿಕರ ದಾಖಲೆಗಳನ್ನು ಪೇರಿಸಿಡ ಲಾಗಿರುವುದರಿಂದ ಬಹಳ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ. ಕಂದಾಯ ಇಲಾಖೆ ಹಾಗೂ ಪುರ ಸಭೆಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕರಣಿಕರಿಗೆ ತಾತ್ಕಾಲಿಕವಾಗಿ ಬೇರೆ ವ್ಯವಸ್ಥೆ ಕಲ್ಪಿಸಿ ಕೊಡಬೇಕಾಗಿದೆ ಮತ್ತು ಶಿಥಿಲ ಕಟ್ಟಡವನ್ನು ದುರಸ್ತಿ ಮಾಡಿಸಬೇಕಾಗಿದೆ.
Advertisement
ಪರಿಶೀಲನೆ ನಡೆಸಲಾಗಿದೆ; ಶೀಘ್ರವೇ ದುರಸ್ತಿಗೆ ಕ್ರಮಪುರಸಭಾ ಎಂಜಿನಿಯರ್ ಕಟ್ಟಡದ ಸ್ಥಿತಿಗತಿ ಪರಿವೀಕ್ಷಣೆ ಮಾಡಿದ್ದಾರೆ. ಆಗಬೇಕಾದ ದುರಸ್ತಿ ಕಾರ್ಯದ ಬಗ್ಗೆ ಅಂದಾಜು ಪಟ್ಟಿ ತಯಾರಿಸಿ ಸಹಾಯಕ ಕಮಿಶನರ್ ಅವರಿಗೆ ಸಲ್ಲಿಸಿ ಅವರ ಒಪ್ಪಿಗೆ ಪಡೆದು ಶೀಘ್ರದಲ್ಲೇ ದುರಸ್ತಿ ಮಾಡಿಸಲಾಗುವುದು.
- ಇಂದೂ ಎಂ., ಪುರಸಭಾ ಮುಖ್ಯಾಧಿಕಾರಿ